Advertisement

ಯಜಮಾನ ಚಿತ್ರಕ್ಕೆ ‘ಸೈಮಾ’ಪ್ರಶಸ್ತಿಗಳ ಗೊಂಚಲು |ಈ ಯಶಸ್ಸಿಗೆ ಅಭಿಮಾನಿಗಳೇ ಕಾರಣ ಎಂದ ದರ್ಶನ್

02:10 PM Sep 19, 2021 | Team Udayavani |

ಬೆಂಗಳೂರು:  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಿರುವ ಯಜಮಾನ ಚಿತ್ರ ‘ಸೈಮಾ 2019’ನಲ್ಲಿ ಪ್ರಶಸ್ತಿಗಳ ರಾಶಿಯನ್ನೇ ಬಾಚಿಕೊಂಡಿದೆ.

Advertisement

‘ಯಜಮಾನ’ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಟ ದರ್ಶನ್‌ಗೆ ನೀಡಲಾಗಿದೆ. ಡಿ ಬಾಸ್ ಕಾರ್ಯಕ್ರಮಕ್ಕೆ ಗೈರಾಗಿದ್ದ ಕಾರಣ ನಿರ್ಮಾಪಕಿ ಶೈಲನಾ ನಾಗ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದೆ ಸಿನಿಮಾಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ವಿಮರ್ಶಕರ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. ಈ ಸಿನಿಮಾ ಸಂಗೀತ ನಿರ್ದೇಶಕ ಹರಿಕೃಷ್ಣ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅತ್ಯುತ್ತಮ ಹಾಸ್ಯನಟ ಪ್ರಶಸ್ತಿಯನ್ನು ‘ಯಜಮಾನ’ ಸಿನಿಮಾಕ್ಕಾಗಿ ಸಾಧುಕೋಕಿಲ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಸಿನಿಮಾ ಪ್ರಶಸ್ತಿಯು ‘ಯಜಮಾನ’ ಪಾಲಾಗಿದೆ. ನಟ ದೇವರಾಜ್‌ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯು ‘ಯಜಮಾನ’ ಸಿನಿಮಾಕ್ಕಾಗಿ ದೊರಕಿದೆ.

ಇನ್ನು ಯಜಮಾನ ಚಿತ್ರಕ್ಕೆ ಇಷ್ಟೆಲ್ಲ ಪ್ರಶಸ್ತಿಗಳು ಹರಿದು ಬಂದಿರುವುದಕ್ಕೆ ದರ್ಶನ್ ಅವರು ಖುಷಿಗೊಂಡಿದ್ದಾರೆ. ಈ ಸಾಧನೆಗೆ ಅಭಿಮಾನಿಗಳೆ ಕಾರಣ ಎಂದು ಅವರು ಟ್ವೀಟ್ ಮಾಡಿದ್ದಾರೆ. “ಯಜಮಾನ ಚಿತ್ರದ ಅಭೂತಪೂರ್ವ ಯಶಸ್ಸು ಹಾಗೂ ಸಿಗುತ್ತಿರುವ ಮನ್ನಣೆಗೆ ನಮ್ಮ  ಸೆಲೆಬ್ರಿಟಿಗಳೇ ಮುಖ್ಯ ಕಾರಣ. ನಮ್ಮ ತಂಡ ನಿಮ್ಮ ಪ್ರೀತಿ ಅಭಿಮಾನಕ್ಕೆ ಸದಾ ಚಿರಋಣಿ. SIIMA ಆಯೋಜಕರಿಗೂ ನಮ್ಮ ತಂಡದಿಂದ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ ದಚ್ಚು.

Advertisement

Udayavani is now on Telegram. Click here to join our channel and stay updated with the latest news.

Next