ಬೆಂಗಳೂರು: ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಅವಾರ್ಡ್ಸ್(SIIMA 2024) ನಾಮನೇಷನ್ ಲಿಸ್ಟ್ ಹೊರಬಿದ್ದಿದೆ. ದಕ್ಷಿಣ ಸಿನಿಮಾಗಳಿಗೆ ಕೊಡಮಾಡುವ ಸೈಮಾ ಅವಾರ್ಡ್ಸ್ ನ್ನು ಈ ಬಾರಿಯೂ ಅದ್ಧೂರಿಯಾಗಿ ಆಯೋಜಿಸಲು ಆಯೋಜಕರು ತೀರ್ಮಾನಿಸಿದ್ದಾರೆ.
2023ರಲ್ಲಿ ಬಂದ ಸೌತ್ ಸಿನಿಮಾಗಳ ನಾಮಿನೇಷನ್ ಪಟ್ಟಿ ಹೊರಬಿದ್ದಿದೆ. ಕನ್ನಡದಲ್ಲಿ ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳು ಅಷ್ಟಾಗಿ ಏನು ಕಮಾಲ್ ಮಾಡದಿದ್ದರೂ, ಸೈಮಾದ ಹಲವು ವಿಭಾಗಗಳಲ್ಲಿ ನಾಮಿನೇಷನ್ ಲಿಸ್ಟ್ ನಲ್ಲಿ ಕಾಣಿಸಿಕೊಂಡಿದೆ.
ದರ್ಶನ್( Darshan) ಅವರ ʼಕಾಟೇರʼ(Kaatera) ಹಾಗೂ ರಕ್ಷಿತ್ ಶೆಟ್ಟಿ(Rakshit Shetty) ಅವರ ‘(Sapta Sagaradaache Ello – Side A) ’ಸಿನಿಮಾ ಹಲವು ವಿಭಾಗಗಳಿಗೆ ನಾಮಿನೇಟ್ ಆಗಿದೆ.
‘ಕಾಟೇರ’ ಸಿನಿಮಾ ಸು 8 ವಿಭಾಗಗಳಲ್ಲಿ,’ಸಪ್ತಸಾಗರದಾಚೆ ಎಲ್ಲೋ ಸೈಡ್-ಎ’ ಸಿನಿಮಾ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ಕನ್ನಡ ನಾಮಿನೇಷನ್:
ಅತ್ಯುತ್ತಮ ನಟ:
ಶಿವರಾಜ್ ಕುಮಾರ್ – ಘೋಸ್ಟ್
ದರ್ಶನ್ – ಕಾಟೇರ
ರಮೇಶ್ ಅರವಿಂದ್- ಶಿವಾಜಿ ಸುರತ್ಕಲ್ 2
ರಕ್ಷಿತ್ ಶೆಟ್ಟಿ- ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ
ರಾಜ್ ಬಿ ಶೆಟ್ಟಿ – ಟೋಬಿ
ಡಾಲಿ ಧನಂಜಯ – ಹೊಯ್ಸಳ
ಅತ್ಯುತ್ತಮ ಸಿನಿಮಾ:
ಆಚಾರ್ ಆ್ಯಂಡ್ ಕೋ
ಕಾಟೇರ
ಕೌಸಲ್ಯ ಸುಪ್ರಜಾ ರಾಮ
ಕ್ರಾಂತಿ
ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ
ಅತ್ಯುತ್ತಮ ನಿರ್ದೇಶಕ :
ಆಕಾಶ್ ಶ್ರೀವತ್ಸ – ಶಿವಾಜಿ ಸುರತ್ಕಲ್ -2
ಹೇಮಂತ್ ರಾವ್ – ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ
ಶಶಾಂಕ್ – ಕೌಸಲ್ಯ ಸುಪ್ರಜಾ ರಾಮ
ತರುಣ್ ಸುಧೀರ್ – ಕಾಟೇರ
ವಿ ಹರಿಕೃಷ್ಣ – ಕ್ರಾಂತಿ
ತಮಿಳು ನಾಮಿನೇಷನ್: ಇನ್ನು ಕಾಲಿವುಡ್ ನಲ್ಲೂ(Kollywood) ಸೈಮಾಗಾಗಿ ಹಲವು ಸಿನಿಮಾಗಳು ಪೈಪೋಟಿಯಲ್ಲಿವೆ. ಪ್ರಮುಖವಾಗಿ ರಜಿನಿಕಾಂತ್ (Rajinikanth) ಅವರ ಬ್ಲಾಕ್ ಬಸ್ಟರ್ ʼಜೈಲರ್ʼ (Jailer) ಸಿನಿಮಾ ಬರೋಬ್ಬರಿ 11 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ “ಮಾಮಣ್ಣನ್” 9 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.
ಅತ್ಯುತ್ತಮ ನಟ:
ರಜನಿಕಾಂತ್ – ಜೈಲರ್
ಶಿವಕಾರ್ತಿಕೇಯನ್ -ಮಾವೀರನ್
ಸಿದ್ಧಾರ್ಥ್ – ಚಿತ್ತಾ
ಉದಯನಿಧಿ ಸ್ಟಾಲಿನ್ – ಮಾಮಣ್ಣನ್
ಚಿಯಾನ್ ವಿಕ್ರಮ್ – ಪೊನ್ನಿಯಿನ್ ಸೆಲ್ವನ್2
ದಳಪತಿ ವಿಜಯ್ – ಲಿಯೋ
ತೆಲುಗು ನಾಮಿನೇಷನ್: ಟಾಲಿವುಡ್ ನಲ್ಲಿ ಕಳೆದ ವರ್ಷ ಬಂದ ನಾನಿ (Actor Nani) ಅವರ ʼದಸಾರʼ ಹಾಗೂ ʼಹೇ ನನ್ನಾʼ ಸಿನಿಮಾಗಳು ಹೆಚ್ಚಿನ ವಿಭಾಗದಲ್ಲಿ ನಾಮಿನೇಟ್ ಆಗಿದೆ. ʼದಸಾರʼ 11 ವಿಭಾಗದಲ್ಲಿ, ʼಹೇ ನನ್ನಾ 10 ವಿಭಾಗದಲ್ಲಿ ನಾಮಿನೇಟಾಗಿದೆ.
ಅತ್ಯುತ್ತಮ ನಟ:
ಚಿರಂಜೀವಿ – ವಾಲ್ಟೇರ್ ವೀರಯ್ಯ
ಧನುಷ್ – ʼಸರ್ʼ
ಬಾಲಕೃಷ್ಣ – ಭಗವಂತ್ ಕೇಸರಿ
ನಾನಿ – ದಸಾರ
ಸಾಯಿ ಧರಮ್ ತೇಜ್ – ವಿರೋಪಾಕ್ಷ
ಮಾಲಿವುಡ್ ನಾಮಿನೇಷನ್: ಕಳೆದ ವರ್ಷ ಮಾಲಿವುಡ್ ನಲ್ಲಿ ಭಾರೀ ಸದ್ದು ಮಾಡಿದ್ದ ʼ2018ʼ8 ವಿಭಾಗದಲ್ಲಿ ನಾಮಿನೇಟ್ ಆಗಿದ್ದು, ಮಮ್ಮುಟ್ಟಿ(Mammootty) ಮತ್ತು ಜ್ಯೋತಿಕಾ (Jyothika) ಅಭಿನಯದ ‘ಕಥಲ್ – ದಿ ಕೋರ್’ 7 ವಿಭಾಗದಲ್ಲಿ ನಾಮಿನೇಟ್ ಆಗಿದೆ.
ಅತ್ಯುತ್ತಮ ನಟ :
ಬಾಸಿಲ್ ಜೋಸೆಫ್ – ʼಫಾಲಿಮಿʼ , ʼಕಾಡಿನ ಕಡೋರಮೀಅಂಡಕದಹಂʼ
ಜೋಜು ಜಾರ್ಜ್ – ಇರಟ್ಟ
ಮೋಹನ್ ಲಾಲ್ – ನೆರೂ
ಮಮ್ಮುಟ್ಟಿ – ನನ್ಪಕಲ್ ನೆರತುಮಯಕ್ಕಂ
ಸುರೇಶ್ ಗೋಪಿ – ಗರುಡನ್
ಟೊವಿನೋ ಥಾಮಸ್ – 2018
ಕಾರ್ಯಕ್ರಮ ಎಲ್ಲಿ ಯಾವಾಗ?: ಈ ಬಾರಿ ʼಸೈಮಾʼ ಸೆಪ್ಟೆಂಬರ್ 14 ಹಾಗೂ 15ರಂದು ದುಬೈನಲ್ಲಿ ನಡೆಯಲಿದೆ. ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಸೇರಿದಂತೆ ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ನ ಬಹುತೇಕ ಇದರಲ್ಲಿ ಭಾಗಿ ಆಗಲಿದ್ದಾರೆ.