Advertisement

ಕರ್ನಾಟಕ, ಕೇರಳದಲ್ಲಿ ಐಸಿಸ್‌ ಉಗ್ರರ ನೆಲೆ ; ಭಟ್ಕಳದ ಯುವಕ ವಿಶ್ವದ ಮೋಸ್ಟ್‌ ವಾಂಟೆಡ್‌ ಉಗ್ರ

02:05 AM Jul 26, 2020 | Hari Prasad |

ವಿಶ್ವಸಂಸ್ಥೆ: ಕರ್ನಾಟಕ ಮತ್ತು ನೆರೆಯ ಕೇರಳದಲ್ಲಿ ಸಾಕಷ್ಟು ಐಸಿಸ್‌ ಉಗ್ರರಿದ್ದಾರೆ.

Advertisement

ದೇಶದ ವಿವಿಧೆಡೆ ದಾಳಿ ನಡೆಸಲು ಅವರು ಹೊಂಚು ಹಾಕುತ್ತಿದ್ದಾರೆ ಎಂದು ಬೆಚ್ಚಿ ಬೀಳಿಸುವ ವರದಿಯೊಂದನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದೆ.

ವಿಶ್ವಸಂಸ್ಥೆಯ 26ನೇ ‘ಅನಾಲಿಟಿಕಲ್‌ ಸಪೋರ್ಟ್‌ ಆ್ಯಂಡ್‌ ಸ್ಯಾಂಕ್ಷನ್ಸ್‌ ಮಾನಿಟರಿಂಗ್‌’ ತಂಡದ ವರದಿಯಲ್ಲಿ ಈ ಸಂಗತಿ ಬಹಿರಂಗಗೊಂಡಿದೆ.

2019ರ ಮೇಯಲ್ಲಿ ಐಸಿಸ್‌, ಭಾರತದಲ್ಲಿ ‘ಹಿಂದ್‌ ವಿಲಾಯಾ’ ಎಂಬ ಹೊಸ ಪ್ರಾಂತ್ಯವನ್ನು ಹುಟ್ಟು ಹಾಕಿದ್ದಾಗಿ ಹೇಳಿಕೊಂಡಿದೆ.

ಇದು 180-200 ಸದಸ್ಯರನ್ನು ಹೊಂದಿದ್ದು, ಕರ್ನಾಟಕ, ಕೇರಳದ ವಿವಿಧ ಪ್ರದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ ಎಂದು ವರದಿ ಹೇಳಿದೆ.

Advertisement

ಉಸಾಮಾ ಮೊಹಮ್ಮದ್‌ ಭಾರತದಲ್ಲಿ ಅಲ್‌ ಕಾಯಿದಾ ಗುಂಪಿನ ನಾಯಕ. ಈತ ಆಸೀಮ್‌ ಉಮರ್‌ ಹತ್ಯೆಯ ಪ್ರತೀಕಾರ ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದಾನೆ. ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡ ಬಳಿಕ ದೇಶದ ಇತರೆಡೆಗಳಲ್ಲಿ ದಾಳಿ ನಡೆಸಲು ‘ಹಿಂದ್‌ ವಿಲಾಯಾ’ ಹುಟ್ಟು ಹಾಕಿದ್ದಾಗಿ ಐಸಿಸ್‌ ಹೇಳಿಕೊಳ್ಳುತ್ತಿದೆ ಎಂದು ವರದಿ ಹೇಳಿದೆ.

17 ಮಂದಿ ವಿರುದ್ಧ ಚಾರ್ಜ್‌ ಶೀಟ್‌
ಐಸಿಸ್‌ ಕಾರ್ಯಕರ್ತರಾದ ಬೆಂಗಳೂರಿನ ಮೆಹಬೂಬ್‌ ಪಾಷಾ ಮತ್ತು ತಮಿಳುನಾಡಿನ ಕಡಲೂರಿನ ಖಜಾ ಮೊಯಿದ್ದೀನ್‌ ತಮ್ಮದೇ ಆದ ಭಯೋತ್ಪಾದಕ ಸಂಘಟನೆ ಆರಂಭಿಸಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ. ಈ ಸಂಘಟನೆ ಜತೆ ಗುರುತಿಸಿಕೊಂಡ 17 ಮಂದಿ ವಿರುದ್ಧ ಅದು ಇತ್ತೀಚೆಗೆ ಆರೋಪ ಪಟ್ಟಿ ಸಲ್ಲಿಸಿದೆ. ಬೆಂಗಳೂರು ಪೊಲೀಸರು ಪಾಷಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಳಿಕ ಎನ್‌ಐಎಗೆ ಹಸ್ತಾಂತರಿಸಲಾಗಿದೆ.

ಭಟ್ಕಳದ ಯುವಕ ವಿಶ್ವದ ಮೋಸ್ಟ್‌ ವಾಂಟೆಡ್‌ ಉಗ್ರ
ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಮೊಹಮ್ಮದ್‌ ಶಫಿ ಅರ್ಮರ್‌, ಉಸಾಮಾ ಅಹಮದ್‌ ಅಟಾರ್‌ ಮತ್ತು ಮೊಹಮ್ಮದ್‌ ಇಸಾ ಯೂಸಿಫ್ ಸಾಕರ್‌ ಅಲ್‌ ಬಿನಾಲಿಯನ್ನು ಅಮೆರಿಕ ಗುರುವಾರ ವಿಶ್ವದ ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಗೆ ಸೇರಿಸಿದೆ. ಯೂಸುಫ್ ಅಲ್‌ ಹಿಂದಿ ಎಂಬ ಹೆಸರನ್ನೂ ಹೊಂದಿದ್ದ ಅರ್ಮರ್‌, ಐಸಿಸ್‌ಗೆ ಭಾರತದ ಯುವಕರನ್ನು ನೇಮಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಭಾರತದಲ್ಲಿ ಉಗ್ರ ದಾಳಿ ಎಸಗುವ ಹೊಣೆ ಹೊತ್ತಿದ್ದ ಎಂದು ಅಮೆರಿಕದ ಗೃಹ ಇಲಾಖೆ ತಿಳಿಸಿದೆ. ಈತ ಭಾರತೀಯ ಮುಜಾಹಿದೀನ್‌ ಸೇರಿ, ಬಳಿಕ ಪಾಕ್‌ಗೆ ಪಲಾಯನಗೈದಿದ್ದ. ಅನಂತರ ಐಸಿಸ್‌ ಸೇರಿದ್ದ. 2015ರಲ್ಲಿ ಸಿರಿಯಾದಲ್ಲಿ ಈತ ಮೃತಪಟ್ಟಿದ್ದ ಎನ್ನಲಾಗಿತ್ತು. ಅಮೆರಿಕ ಆತನ ಹೆಸರನ್ನು ಉಗ್ರರ ಪಟ್ಟಿಗೆ ಸೇರಿಸಿದ್ದರಿಂದ ಆತ ಜೀವಂತ ಇರುವುದು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next