ಬೆಂಗಳೂರು: ಭಾರತದಲ್ಲಿನ ಖಾಸಗಿ ಶಾಲೆಗಳು, ಖಾಸಗಿ ಶಾಲೆಗಳ ದಾಖಲಾತಿಯಲ್ಲಿ ಕರ್ನಾಟಕ 14ನೇ ಸ್ಥಾನದಲ್ಲಿದೆ ಮತ್ತು ಶೇ. 41.1 ರಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಬಿಡುಗಡೆಯಾದ ಸ್ಟೇಟ್ ಆಫ್ ದಿ ಸೆಕ್ಟರ್ ವರದಿ ತಿಳಿಸಿದೆ.
ಗುಣಮಟ್ಟದ ಶಾಲಾ ಶಿಕ್ಷಣವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಂಟ್ರಲ್ ಸ್ಕ್ವೇರ್ ಫೌಂಡೇಶನ್ ಮತ್ತು ಗುಣಮಟ್ಟದ ಶಿಕ್ಷಣ ಖಾತ್ರಿಯ ಕಡೆಗೆ ಕೆಲಸ ಮಾಡುತ್ತಿರುವ ಲಾಭರಹಿತ ಸಂಸ್ಥೆಯಾದ ಓಮಿಡ್ಯಾರ್ ನೆಟ್‌ವರ್ಕ್ ಇಂಡಿಯಾ ಈ ವರದಿ ನೀಡಿದೆ.
ಕಳೆದ ಒಂದು ದಶಕದಲ್ಲಿ ಕರ್ನಾಟಕದ ಖಾಸಗಿ ಶಾಲೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹವಾಗಿ ಬೆಳೆದಿದೆ ಎಂದು ತಿಳಿಸಿದೆ. ಸೆಂಟ್ರಲ್ ಸ್ಕ್ವೇರ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಆಶಿಶ್ ಧವನ್, ಕಲಿಕೆಯ ಮಟ್ಟವನ್ನು ಸುಧಾರಿಸಲು ಮತ್ತು ಗುಣಮಟ್ಟದ ಆಧಾರದ ಮೇಲೆ ನಿಯಮಗಳನ್ನು ಸೇರ್ಪಡೆಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ನಮಗೆ ವಲಯ ಸುಧಾರಣೆಗಳು ಬೇಕಾಗುತ್ತವೆ. ಹೊಸ ಶಿಕ್ಷಣ ನೀತಿಯಲ್ಲಿ ಸೂಚಿಸಿರುವಂತೆ 3, 5 ಮತ್ತು 8 ಶ್ರೇಣಿಗಳಲ್ಲಿನ ಪ್ರಮುಖ ಹಂತದ ಮೌಲ್ಯಮಾಪನಗಳು, ಕಲಿಕೆಯ ಫಲಿತಾಂಶಗಳ ಮೇಲೆ ಕೇಂದ್ರೀಕರಿಸುವ ನಿಯಂತ್ರಕ ರಚನೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಶಾಲೆಯನ್ನು ಆಯ್ಕೆ ಮಾಡುವಾಗ ಕಲಿಕೆಯ ಗುಣಮಟ್ಟವನ್ನು ಆಧರಿಸಿ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ಪೋಷಕರಿಗೆ ಅಧಿಕಾರ ನೀಡಬೇಕಾಗಿದೆ. ಶಾಲೆಗಳಿಂದ ಪಾರದರ್ಶಕತೆ ಹೆಚ್ಚಿಸುವುದು ಮತ್ತು ಪೋಷಕರು ಮತ್ತು ಶಾಲೆಗಳ ನಡುವಿನ ಬದ್ಧತೆಯ ಗುಣಮಟ್ಟವನ್ನು ಸುಧಾರಿಸುವುದು ಮುಖ್ಯವಾಗಿದೆ ಎಂದು ಓಮಿಡ್ಯಾರ್ ನೆಟ್‌ವರ್ಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಕುಡ್ವಾ ತಿಳಿಸಿದ್ದಾರೆ.
ಕಲಿಕೆಯ ಫಲಿತಾಂಶಗಳು ಮತ್ತು ಮಕ್ಕಳ ಸುರಕ್ಷತೆಯ ಮೇಲೆ ಕೇಂದ್ರೀಕರಿಸುವಾಗ ಕಡಿಮೆ ಶುಲ್ಕ ಶಾಲೆಗಳ, ಲಾಭರಹಿತ ನಿರ್ವಹಣಾ ಅಗತ್ಯತೆ ಮತ್ತು ಅಸ್ತಿತ್ವದಲ್ಲಿರುವ ಶುಲ್ಕ ನಿಯಮಗಳನ್ನು ಪರಿಶೀಲಿಸುವುದು. ಹಿಂದುಳಿದ ಮಕ್ಕಳಿಗೆ ಶೇ. 25 ಮೀಸಲಾತಿಯನ್ನು ಕಡ್ಡಾಯಗೊಳಿಸುತ್ತದೆ.
ವರದಿಯಲ್ಲಿ ಉಲ್ಲೇಖಿಸಲಾದ ಜನಸಂಖ್ಯಾಶಾಸ್ತ್ರದ ಪ್ರಕಾರ, ಕರ್ನಾಟಕದಲ್ಲಿ ಶೇ. 37.8 ಬಾಲಕಿಯರು ಮತ್ತು ಶೇ. 44.2 ಬಾಲಕರು ಖಾಸಗಿ ಶಾಲೆಗಳಿಗೆ ಹೋಗುತ್ತಾರೆ. ಬೆಂಗಳೂರು ನಗರ ಉತ್ತರ, ಬೆಂಗಳೂರು ನಗರ ದಕ್ಷಿಣ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳಲ್ಲಿ ಅತಿ ಹೆಚ್ಚು ದಾಖಲಾತಿ ಇದೆ, ಉತ್ತರ ಕನ್ನಡ ಸಿರ್ಸಿ, ಕೊಪ್ಪಳ ಮತ್ತು ಹಾವೇರಿಯಲ್ಲಿ ಅತಿ ಕಡಿಮೆ ಇದೆ. ಜಿಲ್ಲೆಗಳಲ್ಲಿ, ಬೆಂಗಳೂರು ನಗರ ಉತ್ತರ ಹೆಚ್ಚು ಅಂದರೆ ಶೇ. 79.8 ಖಾಸಗಿ ಪಾಲನ್ನು ಮತ್ತು ಹಾವೇರಿ ಅತಿ ಕಡಿಮೆ ಅಂದರೆ ಶೇ. 22.7 ಹೊಂದಿದೆ.