Advertisement

ಕಾರುಗಳ ಮಾರಾಟದಲ್ಲಿ ಗಣನೀಯ ಇಳಿಕೆ

09:46 AM Sep 03, 2019 | Team Udayavani |

ನವದೆಹಲಿ: ಭಾರತದ ಆಟೊಮೊಬೈಲ್ ರಂಗದ ಪ್ರಮುಖ ಕಂಪನಿಗಳಾದ ಮಾರುತಿ ಸುಜುಕಿ, ಹುಂಡೈ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಟಾಟಾ ಮೋಟಾರ್ಸ್‌ ಹಾಗೂ ಹೋಂಡಾ ತಮ್ಮ ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಹೇಳಿಕೊಂಡಿವೆ.

Advertisement

ದೇಶದ ಆಟೋಮೊಬೈಲ್ ಕ್ಷೇತ್ರದ ಇತಿಹಾಸದಲ್ಲೇ ಗಂಭೀರ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಮಾರಾಟದಲ್ಲಿ ಎರಡಂಕಿ ಕುಸಿತ ದಾಖಲಾಗಿವೆ ಎಂದು ಈ ಕಂಪನಿಗಳು ತಿಳಿಸಿವೆ. ದೈತ್ಯ ಕಂಪನಿಯಾದ ಮಾರುತಿ ಸುಜುಕಿ, ಆಗಸ್ಟ್‌ನಲ್ಲಿ ಕಾರು ಮಾರಾಟ ಶೇ.32.7ರಷ್ಟು ಇಳಿಕೆ ಆಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ 1,58,189 ಕಾರುಗಳನ್ನು ಮಾರಾಟ ಮಾಡಿದ್ದು, ಈ ಬಾರಿ 1,06,413 ಕಾರು ಮಾರಾಟವಾಗಿವೆ ಎಂದಿದೆ. ಹೋಂಡಾ ಮತ್ತು ಟೊಯೋಟಾ ಮಾರಾಟವು ಕ್ರಮವಾಗಿ ಶೇ.51 ಮತ್ತು ಶೇ.21ರಷ್ಟು ಇಳಿಕೆ ಕಂಡಿವೆ ಎಂದು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next