Advertisement

ಹತ್ತೂವರೆ ಗಂಟೆಗೆ ಒಂದು ದಿನ!

01:15 AM Jan 21, 2019 | Team Udayavani |

ವಾಷಿಂಗ್ಟನ್‌: ಶನಿ ಗ್ರಹದ ಅಸ್ತಿತ್ವವನ್ನು ಕಂಡುಕೊಂಡಾಗಿನಿಂದಲೂ ತಿಳಿದಿರದ ಮಹತ್ವದ ಸಂಗತಿಯೊಂದನ್ನು ನಾಸಾದ ಕ್ಯಾಸಿನಿ ಗಗನ ನೌಕೆ ಕಂಡುಕೊಂಡಿದೆ. ಶನಿ ಗ್ರಹ ಒಂದು ದಿನ ಎಂದು ಎಷ್ಟು ಗಂಟೆಗಳನ್ನು ಹೊಂದಿರುತ್ತದೆ ಎಂಬ ರಹಸ್ಯವನ್ನು ಬಿಡಿಸಲು ವಿಜ್ಞಾನಿಗಳಿಗೆ ಈವರೆಗೂ ಸಾಧ್ಯವಾಗಿರಲಿಲ್ಲ. ಆದರೆ ಕ್ಯಾಸಿನಿ ಗಗನ ನೌಕೆಯ ದತ್ತಾಂಶವನ್ನು ಆಧರಿಸಿ ಈ ಮಹತ್ವದ ಸಂಶೋಧನೆ ನಡೆ ಸಿದ್ದು, ಭೂಮಿಯ 10 ಗಂಟೆ 33 ನಿಮಿಷ ಗಳು ಮತ್ತು 38 ಸೆಕೆಂಡುಗಳು ಶನಿಯಲ್ಲಿ ಒಂದು ದಿನ ಎಂದು ಪರಿಗಣಿಸಲ್ಪಡುತ್ತದೆ. ಅಲ್ಲದೆ, ಭೂಮಿಯ ಒಂದು ವರ್ಷವು ಶನಿಯಲ್ಲಿ 29 ವರ್ಷವಾಗಿರುತ್ತದೆ ಎಂದು ಕ್ಯಾಲಿಫೋರ್ನಿ ಯಾ ವಿವಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಶನಿ ಗ್ರಹವು ಹಲವು ಉಂಗುರಗಳನ್ನು ಹೊಂದಿದ್ದರಿಂದ, ಈ ಬಗ್ಗೆ ವಿಜ್ಞಾನಿಗಳಿಗೆ ನಿಖರವಾಗಿ ಕಂಡುಕೊಳ್ಳಲು ಸಾಧ್ಯವಾ ಗಿರಲಿಲ್ಲ. ಆದರೆ ಈಗ ಕ್ಯಾಲಿಫೋರ್ನಿಯಾ ವಿವಿ ವಿದ್ಯಾರ್ಥಿ ಕ್ರಿಸ್ಟೋಫ‌ರ್‌ ಮಾನ್‌ಕೋವಿಚ್‌ ಈ ಅಧ್ಯಯನವನ್ನು ಉಂಗುರಗಳ ಅಲೆ ವಿಧವನ್ನು ವಿಶ್ಲೇಷಿಸಿ ಮಾಡಿದ್ದಾರೆ. ಇದಕ್ಕಾಗಿ ಅವರು ಕ್ಯಾಸಿನಿ ಸೆರೆ ಹಿಡಿದ ದತ್ತಾಂಶಗಳನ್ನೇ ಅವಲಂಬಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಮಗ್ರ ಅಧ್ಯಯನ ವರದಿಯು ಆಸ್ಟ್ರೋಫಿಸಿಕಲ್‌ ಜರ್ನಲ್‌ನಲ್ಲಿ ಪ್ರಕಟವಾಗಿದೆ.

Advertisement

ಇತರ ಗ್ರಹಗಳಿಂದ ಶನಿಯ ಪರಿಭ್ರಮಣೆ ಪಥ ಮತ್ತು ರೀತಿ ವಿಭಿನ್ನವಾಗಿದ್ದುದರಿಂದ ಕಾಲಾವಧಿಯನ್ನು ಕಂಡುಕೊಳ್ಳಲು ವಿಜ್ಞಾನಿ ಗಳಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಶನಿಯ ಉಂಗುರಗಳಿಂದ ಹೊರಡುವ ಅಲೆಗಳನ್ನು ಆಧರಿಸಿ ಈ ಬಗ್ಗೆ ಕಂಡುಕೊಳ್ಳಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next