Advertisement

NEP ಪರ ಸಹಿ ಸಂಗ್ರಹ ಅಭಿಯಾನ

11:38 PM Nov 23, 2023 | Team Udayavani |

ಬೆಂಗಳೂರು: ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಬೆಂಬಲಿಸಿ ರಾಜ್ಯಾದ್ಯಂತ 1 ಕೋಟಿ ಸಹಿ ಸಂಗ್ರಹಿಸಲು ಬಿಜೆಪಿ ಮುಂದಾಗಿದೆ.

Advertisement

ಎನ್‌ಇಪಿಯನ್ನು ಬೆಂಬಲಿಸಿ ಮತ್ತು ಯಥಾವತ್ತಾಗಿ ಜಾರಿಗೊಳಿಸಲು ಸರಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ರಾಜ್ಯಾದ್ಯಂತ ವಿಚಾರ ಪರಿವಾರದ ಎಲ್ಲ ಸಂಘಟನೆಗಳು ಸೇರಿ 1 ಕೋಟಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ್ದು, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 3 ಲಕ್ಷ ಸಹಿಗಳನ್ನು ಬೂತ್‌ ಮಟ್ಟದಿಂದ ಸಂಗ್ರಹಿಸುವ ಗುರಿ ಹೊಂದಲಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಕಾಲೇಜು ಸಮಿತಿ ಸದಸ್ಯರು, ಮಠಾಧೀಶರು, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಸಾಮಾಜಿಕ ಕ್ಷೇತ್ರದ ಗಣ್ಯ ವ್ಯಕ್ತಿಗಳಿಂದ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಡಿ.15 ರೊಳಗಾಗಿ ಸಹಿ ಸಂಗ್ರಹಿಸಿದ ಪತ್ರಗಳನ್ನು ಜಿಲ್ಲಾ ಕಾರ್ಯಾಲಯಗಳು ಸಂಗ್ರಹಿಸುವಂತೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next