Advertisement

ಧೇಯಕ ಅನುಮೋದನೆಗೆ ಸಹಿ ಸಂಗ್ರಹ ಅಭಿಯಾನ

11:43 AM Oct 04, 2017 | |

ಬೆಂಗಳೂರು: “ಕರ್ನಾಟಕ ಭೂ ಸುಧಾರಣೆಗಳ ವಿಧೇಯಕ-2016′ ವಿಧೇಯಕ ಅನುನೋದಿಸುವಂತೆ ರಾಷ್ಟ್ರಪತಿಗಳನ್ನು ಕೋರಿ ಹಮ್‌ ಗೋರ್‌ ಕಟಮಾಳ್ಳೋ ಲಂಬಾಣಿ ಸಂಘಟನೆ ಆರಂಭಿಸಿರುವ ಸಹಿಸಂಗ್ರಹ ಅಭಿಯಾನಕ್ಕೆ ಮಂಗಳವಾರ ಚಾಲನೆ ದೊರೆಯಿತು. 

Advertisement

ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ ಹಾಗೂ ಲಂಬಾಣಿ ಸಮುದಾಯದ ಮುಖಂಡರು ಸಹಿಹಾಕುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿ, ಆದಷ್ಟು ಶೀಘ್ರವಾಗಿ ಈ ಮಸೂದೆ ಜಾರಿಯಾಗಬೇಕು, ಇದರಿಂದ ಲಂಬಾಣಿ ಹಾಗೂ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ  ಎಂದು ಅಭಿಪ್ರಾಯಪಟ್ಟರು.

ಕಂದಾಯ ಗ್ರಾಮಗಳಾಗಿ ಪರಿಗಣಿತವಾಗದೇ, ಮೂಲಸೌಕರ್ಯಗಳಿಂದ ವಂಚಿತವಾಗಿರುವ ತಾಂಡಾ, ಹಾಡಿ ಸೇರಿದಂತೆ  ಮತ್ತಿತರ ಕಡೆ ವಾಸಿಸುವ ಲಂಬಾಣಿ ಸೇರಿದಂತೆ ಶೋಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು  ಹಾಗೂ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ  ಕರ್ನಾಟಕ ಭೂ ಸುಧಾರಣೆ ವಿಧೇಯಕ -2016ರನ್ನು ರಾಜ್ಯಸರ್ಕಾರ ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿಕೊಟ್ಟಿದೆ.  

ಈ ನಿಟ್ಟಿನಲ್ಲಿ ಮಸೂದೆ ಅನುಮೋದಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ನೀಡಲು ಹಮ್‌ ಗೋರ್‌ ಕಟಮಾಳ್ಳೋ ಲಂಬಾಣಿ ಸಂಘಟನೆ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದು, ಅಕ್ಟೋಬರ್‌ 10ರವರೆಗೆ ಆಯಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್‌  ಕಚೇರಿಗಳ ಮುಂದೆ ಸಹಿಸಂಗ್ರಹ ಮಾಡಲಾಗುವುದು ಎಂದು ಸಂಘಟನೆಯ ಈರಪ್ಪನಾಯ್ಕ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next