Advertisement

ಸಿಗ್ನಲ್ ಆ್ಯಪ್ : ಭಾರತಕ್ಕಾಗಿ ನಿರ್ಮಿಸಿದರೆ, ಜಗತ್ತಿಗೆ ನಿರ್ಮಿಸಿದಂತೆ’

01:21 AM Jan 14, 2021 | Team Udayavani |

ಹೊಸದಿಲ್ಲಿ: ವಾಟ್ಸ್‌ಆ್ಯಪ್‌ನ ಹೊಸ ನಿಯಮಗಳಿಂದ ಮುನಿಸಿಕೊಂಡ ಭಾರತೀಯ ಬಳಕೆದಾರರು ಈಗ ಸಿಗ್ನಲ್‌ ಹಾಗೂ ಟೆಲಿಗ್ರಾಂಗಳತ್ತ ವಲಸೆ ಹೋಗುತ್ತಿದ್ದಾರೆ.

Advertisement

ವಾಟ್ಸ್‌ಆ್ಯಪ್‌ನ ಸ್ಥಾಪಕರಲ್ಲೊಬ್ಬರಾಗಿದ್ದ ಬ್ರಿಯಾನ್‌ ಆಕ್ಟನ್‌, ಸಿಗ್ನಲ್‌ನ ಸಹಸ್ಥಾಪಕರಲ್ಲೊಬ್ಬರು! ಅವರು ಭಾರತದಲ್ಲಿ ಹೆಚ್ಚುತ್ತಿರುವ ಸಿಗ್ನಲ್‌ ಬೇಡಿಕೆಯ ಬಗ್ಗೆ ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಾ, ಅತ್ಯಂತ ವೈವಿಧ್ಯಮಯ ದೇಶವಾಗಿರುವ, ಹಲವು ಭಾಷೆಗಳ ಆಗರವಾಗಿರುವ ಭಾರತದಲ್ಲಿ ಡಿಜಿಟಲ್‌ ಕ್ಷೇತ್ರದ ಬೆಳವಣಿಗೆ ಅಗಾಧವಾಗಿ ಆಗುತ್ತಿದೆ. ಭಾರತಕ್ಕಾಗಿ ಆ್ಯಪ್‌ ಒಂದನ್ನು ನಿರ್ಮಿಸಿದರೆ, ಜಗತ್ತಿಗೇ ನಿರ್ಮಿಸಿದಂತೆ. ಸಿಗ್ನಲ್‌ ಆ್ಯಪ್‌ ಈಗ ಹಿಂದಿ ಸಹಿತ ಭಾರತದ 12 ಭಾಷೆಗಳಲ್ಲಿ ಸೇವೆ ನೀಡುತ್ತಿದೆ. ಇದು ಆದಾಯ ರಹಿತ ಆ್ಯಪ್‌ ಆಗಿದ್ದು, ದಾನಿಗಳಿಂದಲೇ ಮುನ್ನಡೆಯುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next