Advertisement

Chikkaballapur ನಾಗನಕಲ್ಲುಗಳ ಎದುರು ನಾಗರಹಾವುಗಳ ಪ್ರತ್ಯಕ್ಷ

12:01 AM May 27, 2024 | Team Udayavani |

ಚಿಕ್ಕಬಳ್ಳಾಪುರ: ನಾಗನ ಕಲ್ಲುಗಳ ಮುಂದೆ ನಿಜ ನಾಗರಹಾವುಗಳು ದಿಢೀರ್‌ ಪ್ರತ್ಯಕ್ಷವಾಗಿ ಕೆಲಕಾಲ ನೆರೆದಿದ್ದ ಭಕ್ತರಿಗೆ ಹೆಡೆ ಎತ್ತಿ ದಿವ್ಯ ದರ್ಶನ ನೀಡಿರುವ ಅಪರೂಪದ ಪ್ರಸಂಗ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕೇಂದ್ರ ಗೌರಿಬಿದನೂರಿನ ವಿಧುರಾಶ್ವತ್ಥದಲ್ಲಿ ನಡೆದಿದೆ.

Advertisement

ರವಿವಾರ ವಾರಾಂತ್ಯ ಹಿನ್ನೆಲೆ ವಿಧುರಾಶ್ವತ್ಥಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ದಂಡು ನೆರೆದಿತ್ತು. ಬೆಳಗ್ಗೆ 6 ಗಂಟೆ ವೇಳೆ ದೇಗುಲದ ಆವರಣದಲ್ಲಿರುವ ನಾಗರ ಕಲ್ಲುಗಳ ಮುಂದೆ 4 ನಾಗರ ಹಾವುಗಳು ಪ್ರತ್ಯಕ್ಷವಾಗುತ್ತಿದ್ದಂತೆ ಭಕ್ತರು ಗಾಬರಿ ಆಗಿದ್ದಾರೆ.ಅದರಲ್ಲಿ ಎರಡು ಹಾವುಗಳು ಹೆಡೆಎತ್ತಿ ಕೆಲಕಾಲ ನಾಗರ ಕಲ್ಲುಗಳ ಮುಂದೆಯೇ ನಿಂತು ಭಕ್ತರಿಗೆ ದರ್ಶನ ನೀಡಿವೆ.

ಬಳಿಕ ಸಾರ್ವಜನಿಕರು, ದೇಗುಲ ಸಮಿತಿಯವರು ಸಾರ್ವಜನಿಕರ ದಟ್ಟಣೆ ಕಡಿಮೆ ಮಾಡುತ್ತಿದ್ದಂತೆ ಅಲ್ಲಿಯೇ ಇದ್ದ ಹುತ್ತದೊಳಗೆ ಹಾವುಗಳು ಸೇರಿಕೊಂಡಿವೆ.

ರವಿವಾರ ನಾಗರ ಕಲ್ಲುಗಳ ಪ್ರತಿಷ್ಠಾಪನಾ ಕಾರ್ಯ ಇತ್ತು. ಕಲ್ಲು ಒಂದನ್ನು ಪಕ್ಕಕ್ಕೆ ಸರಿಸಲು ಹೋದಾಗ ಅದರ ಕೆಳಗೆ ನಾಲ್ಕು ಹಾವು ಇದ್ದವು. ಎರಡು ಹಾವುಗಳು ಹೆಡೆಎತ್ತಿ ನಾಗರ ಕಲ್ಲುಗಳ ಮುಂದೆ ಜೋಡಿಯಾಗಿ ನಿಂತಿದ್ದವು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next