Advertisement

18ರಂದು ರೈಲ್ವೆ ಜಂಕ್ಷನ್‌ಗೆ ಮುತ್ತಿಗೆ

08:22 PM Feb 15, 2021 | Team Udayavani |

ಬಂಗಾರಪೇಟೆ: ಜನಸಾಮಾನ್ಯರಿಗೆ ಮತ್ತು ರೈತರಿಗೆ ಹೊರೆಯಾಗುತ್ತಿರುವ ಎಲ್ಲಾ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕೆಂದು ದೆಹಲಿ ಚಲೋ ನಡೆಸುತ್ತಿರುವ ರೈತರು ಕರೆ ನೀಡಿರುವ ರೈಲ್‌ ರೊಕೋ ಚಳವಳಿಗೆ ಬೆಂಬಲವಾಗಿ ಫೆ.18ರಂದು ಪೊರಕೆಗಳ ಸಮೇತ ಬೆಳಗ್ಗೆ ಗಂಟೆಗೆ ಬಂಗಾರಪೇಟೆ ರೈಲ್ವೆ ಜಂಕ್ಷನ್‌ ಮುತ್ತಿಗೆ ಹಾಕಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

Advertisement

ಪಟ್ಟಣದ ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರದ ಅಗತ್ಯ ವಸ್ತುಗಳನ್ನು ಏರಿಕೆ ಮಾಡಿ ಕೃಷಿ ಹೆಸರಿ ನಲ್ಲಿ ರೈತರನ್ನು ದಿವಾಳಿಯನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷಹಳ್ಳಿ ಮಂಜುನಾಥ್‌ ಮಾತನಾಡಿ, ಜನಸಾಮಾನ್ಯರಿಗೆ ಮತ್ತು ರೈತರಿಗೆ ಹೊರೆಯಾಗುತ್ತಿರುವ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಕಿರಣ್‌, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಉಪಾಧ್ಯಕ್ಷ ಚಾಂದ್‌ಪಾಷ, ರೈತ ಸಂಘದ ತಾಲೂಕು ಅಧ್ಯಕ್ಷ ಐತಂಡಹಳ್ಳಿಮುನ್ನ, ಈಕಂಬಳ್ಳಿ ಮಂಜುನಾಥ, ಜಮೀರ್‌ಪಾಷ, ಭಾಗ್ಯ, ಚಲಪತಿ, ವಕ್ರ ಕುಂಟೆ ಆಂಜಿನಪ್ಪ, ಮಾಸ್ತಿ ವೆಂಕಟೇಶ್‌, ಜಾವೀದ್‌ಪಾಷ, ಗೌಸ್‌ಪಾಷ, ಮಂಗ ಸಂದ್ರ ತಿಮ್ಮಣ್ಣ, ಮಹಮದ್‌ ಬುರಾನ್‌, ಮಹಮದ್‌ ಶೋಯೀಬ್‌, ಕಣ್ಣೂರುಮಂಜುನಾಥ, ತೆರ್ನಹಳ್ಳಿ ಆಂಜಿನಪ್ಪ, ಫಾರೂಕ್‌ಪಾಷ, ಸುಪ್ರಿಂಚಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next