Advertisement
ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದಕಾರ್ಯಕರ್ತರು ನಗರಸಭೆ ಮತ್ತು ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪಾರ್ಕಿಂಗ್ ಶುಲ್ಕ ವಿಧಿಸುವುದನ್ನು ಕೈಬಿಡುವಂತೆ ಆಗ್ರಹಿಸಿದರು.
Related Articles
Advertisement
ಆಡಳಿತ ಮಂಡಳಿ ಇಲ್ಲದಿದ್ದರೂ ಪಾರ್ಕಿಂಗ್ ಶುಲ್ಕ ವಿಧಿಸುವ ಬಗ್ಗೆ ಏಕಾಏಕಿ ನಿರ್ಧಾರ ಮಾಡುವ ಮೂಲಕ ನಗರಸಭೆ ಗೂಂಡಾಗಿರಿ ಮಾಡುತ್ತಿದೆ ಎಂದು ಆರೋಪಿಸಿದಮುಖಂಡರು ನಗರದ ಅನೇಕ ರಸ್ತೆಗಳಲ್ಲಿ ಇಲ್ಲದಿರುವ ಬೀದಿದೀಪಗಳನ್ನು ಹಾಕಲು ಇನ್ನೂ ಎಷ್ಟು ವರ್ಷಬೇಕು ಎಂದು ಆಯುಕ್ತರನ್ನು ಪ್ರಶ್ನಿಸಿದರು.
ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ನಗರದಲ್ಲಿ ಇದೀಗ ನಡೆಯುತ್ತಿರುವ ಯುಜಿಡಿ ಕಾಮಗಾರಿ ಮುಗಿದ ನಂತರ ರಸ್ತೆ ಸರಿಪಡಿಸುವುದು ಸೇರಿದಂತೆ ಉಳಿದಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬೀದಿದೀಪಗಳಿಗೆ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗುವುದು ಎಂದರು.
ನ.1ರಿಂದ ಪಾರ್ಕಿಂಗ್ ಶುಲ್ಕ ವಿಧಿಸುವುದನ್ನು ಶಾಸಕರ ಸೂಚನೆ ಮೇರೆಗೆ ಮುಂದೂಡಲಾಗಿದ್ದು ವ್ಯಾಪಕ ಚರ್ಚೆ ನಂತರ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೇನಳ್ಳಿ ಪ್ರಕಾಶ್, ಉಪಾಧ್ಯಕ್ಷರಾದ ಬಲರಾಮ್, ದಿನೇಶ್‌ಮತ್ತಾವರ, ಕಾರ್ಯದರ್ಶಿ ಸೋಮಶೇಖರ್,ಕಾಂಗ್ರೆಸ್ ಕಿಸಾನ್ ಸೆಲ್‌ನ ರಾಜ್ಯ ಸಂಚಾಲಕಸಿ.ಎನ್.ಅಕ್ಮಲ್, ರಾಜ್ಯಕಾರ್ಯದರ್ಶಿ ಆದಿತ್ಯಗೌಡ, ರಿಜ್ವಾನ್, ಜಬ್ಬಿ, ಜಮೀರ್, ನೂರ್‌ಅಹ್ಮದ್, ಸಾದಿಕ್, ಎನ್.ಎಸ್.ಯು.ಐ. ಅಧ್ಯಕ್ಷ ಆದಿಲ್, ಪ್ರಶಾಂತ್ ಪ್ರತಿಭಟನೆಯಲ್ಲಿ ಇದ್ದರು.