ಚಂಡೀಗಢ: ಮಹತ್ವದ ಬೆಳವಣಿಗೆಯಲ್ಲಿ ಪಂಜಾಬ್ ಪೊಲೀಸರು ಗಾಯಕ ಸಿಧು ಮೂಸೆವಾಲ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನೇಪಾಳ ಗಡಿಯಲ್ಲಿ ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿದ್ದ ಶೂಟರ್ ದೀಪಕ್ ಮಂಡಿ ಮತ್ತು ಆತನ ಇಬ್ಬರು ಸಹಚರರಾದ ಕಪಿಲ್ ಪಂಡಿತ್ ಮತ್ತು ರಾಜಿಂದರ್ ರನ್ನು ಬಂಧಿಸಲಾಗಿದೆ.
” ಪಂಜಾಬ್ ಪೊಲೀಸರು, ಕೇಂದ್ರ ಏಜೆನ್ಸಿಗಳು ಮತ್ತು ದೆಹಲಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ, ಇಬ್ಬರು ಸಹಚರರೊಂದಿಗೆ ಪರಾರಿಯಾಗಿದ್ದ ಸಿಧು ಮೂಸ್ ವಾಲಾ ಶೂಟರ್ ದೀಪಕ್ ಅಲಿಯಾಸ್ ಮುಂಡಿಯನ್ನು ಬಂಧಿಸಿದ್ದಾರೆ. ಸಿಎಂ ಭಗವಂತ್ ಮಾನ್ ನಿರ್ದೇಶನದ ಮೇರೆಗೆ ಡ್ರಗ್ಸ್ ಮತ್ತು ದರೋಡೆಕೋರರ ವಿರುದ್ಧದ ಹೋರಾಟದಲ್ಲಿ ಇದು ಪ್ರಮುಖ ಗೆಲುವು,” ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಇಂದಿನಿಂದ ರೋಡ್ ಸೇಫ್ಟಿ ಕ್ರಿಕೆಟ್ ಕೂಟ: ಎಷ್ಟು ಗಂಟೆಗೆ? ಯಾವ ಚಾನೆಲ್ ನಲ್ಲಿ ನೋಡಬಹುದು?
ಪಂಜಾಬ್ ನ ಮನ್ಸಾದಲ್ಲಿ ಗಾಯಕ ಸಿಧು ಮೂಸೆವಾಲಾ ಅವರ ಮೇಲೆ ಬಂಧೂಕುದಾರಿಗಳು ಗುಂಡಿನ ದಾಳಿ ಮಾಡಿದ್ದರು. ಪಂಜಾಬ್ ಸರ್ಕಾರವು ಮೂಸೆವಾಲಾ ಸೇರಿದಂತೆ ಹಲವರು ಭದ್ರತೆಯನ್ನು ಹಿಂಪಡೆದ ಕೆಲ ದಿನಗಳಲ್ಲೇ ಈ ದಾಳಿ ನಡೆದಿತ್ತು.
ಸಿಧು ಮೂಸೆವಾಲಾ ದೇಹಕ್ಕೆ 19 ಗುಂಡುಗಳು ಹೊಕ್ಕಿದ್ದವು. ದಾಳಿ ನಡೆದ 15 ನಿಮಿಷದಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿತ್ತು.