Advertisement

ಸಿಧು-ಅಕಾಲಿ ವಾಗ್ಯುದ್ಧ

12:30 AM Feb 19, 2019 | |

ಪುಲ್ವಾಮಾ ಘಟನೆಗೆ ಸಂಬಂಧಿಸಿ ವಿವಾದಕ್ಕೆ ಸಿಲುಕಿರುವ ಪಂಜಾಬ್‌ ಸಚಿವ, ನವಜೋತ್‌ ಸಿಂಗ್‌ ಸಿಧು ಹಾಗೂ ಪ್ರತಿ ಪಕ್ಷ ಶಿರೋಮಣಿ ಅಕಾಲಿ ದಳದ ನಾಯಕ ಬಿಕ್ರಂ ಸಿಂಗ್‌ ಮಜೀತಿಯಾ ನಡುವೆ ಭಾರೀ ವಾಗ್ಯುದ್ಧ ನಡೆದಿದೆ. ಮಜೀತಿಯಾ ಮಾತನಾಡಿ, “”ಕಾಂಗ್ರೆಸ್‌ ಮತ್ತು ಪಂಜಾಬ್‌ ಸರಕಾರವು ಪಾಕಿಸ್ಥಾನದ ಸೇನಾ ಮುಖ್ಯಸ್ಥ, ಪ್ರಧಾನಿ ಇಮ್ರಾನ್‌ ಖಾನ್‌ರನ್ನು ಖಂಡಿಸುತ್ತದೆಯೋ, ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು. ಸಿಧು ಅವರನ್ನು ವಜಾ ಮಾಡಬೇಕು” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಧು, “”1999ರಲ್ಲಿ ಏರ್‌ ಇಂಡಿಯಾ ವಿಮಾನ ಅಪಹರಣವಾದಾಗ, ಅದರಲ್ಲಿದ್ದ 180 ಭಾರತೀಯ ಪ್ರಯಾಣಿಕರನ್ನು ರಕ್ಷಿಸಲು ಸಲುವಾಗಿ, ಅಂದು ಅಧಿಕಾರದಲ್ಲಿದ್ದ ಪ್ರಧಾನಿ ವಾಜಪೇಯಿ, ಭಾರತದಲ್ಲಿ ಜೈಲಿನಲ್ಲಿದ್ದ ಉಗ್ರ ಮಸೂದ್‌ ಅಜರ್‌ನನ್ನು ಬಿಡುಗಡೆ ಮಾಡಿತ್ತು. ಅದೇ ಮಸೂದ್‌, ಜೈಷ್‌-ಎ-ಮೊಹಮ್ಮದ್‌ ಸಂಘಟನೆ ಕಟ್ಟಿ  ಪುಲ್ವಾಮಾ ದಾಳಿಗೆ ಕಾರಣನಾಗಿದ್ದಾನೆ. ಹಾಗಾಗಿ, ಪುಲ್ವಾಮಾ ಘಟನೆಯ ನೈತಿಕ ಹೊಣೆ ಯಾರದ್ದು” ಎಂದು  ಪ್ರಶ್ನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next