Advertisement

ರಶ್ಮಿಕಾ ನಟನೆಯ ಮೊದಲ ಬಾಲಿವುಡ್ ಸಿನಿಮಾ “ಮಿಶನ್ ಮಜ್ನು” ರಿಲೀಸ್‍ ಡೇಟ್ ಫಿಕ್ಸ್

04:24 PM Nov 02, 2021 | Team Udayavani |

ಮುಂಬೈ: ದಕ್ಷಿಣ ಭಾರತದಲ್ಲಿ ಧೂಳೆಬ್ಬಿಸಿದ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‍ಗೆ ಕಾಲಿಟ್ಟಿದ್ದಾರೆ. ಹಿಂದಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಳ್ಳುವುದರ ಮೂಲಕ ರಶ್ಮಿಕಾ ಬಾಲಿವುಡ್‍ನಲ್ಲಿ ನೆಲೆಯೂರಲು ಪ್ರಯತ್ನ ನಡೆಸುತ್ತಿದ್ದಾರೆ. ಇದೀಗ ರಶ್ಮಿಕಾ ನಟನೆಯ ಮೊದಲ ಸಿನಿಮಾ “ಮಿಷನ್ ಮಜ್ನು” ಬಿಡುಗಡೆಯಾಗಲು ದಿನಾಂಕ ಘೋಷಣೆಯಾಗಿದೆ.

Advertisement

ರಶ್ಮಿಕಾ ಹಾಗೂ ಬಾಲಿವುಡ್‍ ನಟ ಸಿದ್ದಾರ್ಥ್ ಮಲ್ಹೋತ್ರಾ ಚಿತ್ರದಲ್ಲಿ ಅಭಿನಯಿಸಿದ್ದು, ಮುಂದಿನ ವರ್ಷ ಮೇ 13 ರಂದು ಥಿಯೇಟರ್‍ ನಲ್ಲಿ ಬಿಡುಗಡೆಯಾಗಲಿದೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಸಿದ್ದಾರ್ಥ್ ಪೋಸ್ಟರ್ ಹಂಚಿಕೊಂಡಿದ್ದಾರೆ.

ಪಾಕಿಸ್ತಾನದ ಅಕ್ರಮ ಪರಮಾಣು ಮಹತ್ವಾಕಾಂಕ್ಷೆಗಳನ್ನು ಹಳಿತಪ್ಪಿಸಿದ ಭಾರತದ ಮಹಾನ್ ರಹಸ್ಯ ಕಾರ್ಯಾಚರಣೆಯ ಭಾಗವಾಗಲು ಸಿದ್ದರಾಗಿ. ಇದು ನೈಜ ಘಟನೆ ಆಧಾರಿತವಾಗಿದೆ. #missionmajnu 13 ಮೇ 2022 ರಂದು ತೆರೆಗೆ ಬರುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಾಯಿಗೆ ಹಿಂಸೆ, ತಕ್ಕ ಶಿಕ್ಷೆ ಕೊಟ್ಟ ಹಸು

“ಮಿಷನ್ ಮಜ್ನು” ನೈಜ ಘಟನೆ ಆಧರಿಸಿ ಸಿದ್ಧಗೊಂಡಿರುವ ಚಿತ್ರವಾಗಿದ್ದರಿಂದ ಸಾಕಷ್ಟು ನಿರೀಕ್ಷೆ ಇದೆ. ಸಿದ್ದಾರ್ಥ್‍ ಪ್ರತಿ ಸಿನಿಮಾಗೂ ಭಿನ್ನ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ರಶ್ಮಿಕಾ ಅವರ ಪಾತ್ರ ಇನ್ನೂ ಅನಾವರಣಗೊಂಡಿಲ್ಲ. ಅವರ ಲುಕ್ ಸಿನಿಮಾದಲ್ಲಿ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next