Advertisement

ಜುಲೈ 2ರಿಂದ ತೆರೆಮೇಲೆ ರಾರಾಜಿಸಲಿದ್ದಾನೆ “ಶೇರ್ ಶಾ”

08:01 PM Feb 20, 2021 | Team Udayavani |

ಮುಂಬೈ: ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಕಾರ್ಗಿಲ್  ಹೀರೋ ವಿಕ್ರಂ ಬಾತ್ರಾ ಅವರ ಜೀವಾನಾಧಾರಿತ  ಸಿನಿಮಾ “ಶೇರ್ ಶಾ” ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.

Advertisement

ಮುಂಬರುವ ಜುಲೈ 2 ರಂದು ದೇಶಾದ್ಯಂತ ಸಿನಿಮಾವನ್ನು ಚಿತ್ರಮಂದಿರದಲ್ಲಿ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ತಿಳಿಸಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಸಿದ್ದಾರ್ಥ್ ಮಲ್ಹೋತ್ರಾ, ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನಾಧಾರಿತ ನೈಜ ಕತೆಯನ್ನು ತೆರೆಮೇಲೆ ತರಲು ಸಿದ್ಧವಾಗಿದ್ದು, ಜುಲೈ 2 ಸಿನಿಮಾ ಬಿಡುಗಡೆಗೊಳ್ಳಲಿದೆ, ಚಿತ್ರವನ್ನು ವೀಕ್ಷಿಸಿ ಎಂದಿದ್ದಾರೆ.

ಈ ಚಿತ್ರವನ್ನು  ಕಳೆದ ವರ್ಷದ ಜುಲೈ ನಲ್ಲಿಯೇ ಬಿಡುಗಡೆಗೊಳಿಸಲು ಚಿತ್ರತಂಡ ತಯಾರಿ ನಡೆಸಿದ್ದು, ಈ ನಡುವೆ ಕೋವಿಡ್ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ದಿನಾಂಕ  ಮುಂದೂಡಲಾಯಿತು ಎಂದು ಚಿತ್ರ ತಂಡ ತಿಳಿಸಿದೆ.

ಇದನ್ನೂ ಓದಿ:ಝೂಮ್ ಮೀಟಿಂಗ್ ನಲ್ಲಿದ್ದ ಪತಿಗೆ ಕಿಸ್…ವಿಡಿಯೋ ವೈರಲ್  

ಖ್ಯಾತ ನಿರ್ದೇಶಕ ವಿಷ್ಣುವರ್ಧನ್ ನಿರ್ದೇಶನದಲ್ಲಿ ತೆರೆಮೇಲೆ ಬರಲು ತಯಾರಾಗಿರುವ ಈ ನಿನಿಮಾದಲ್ಲಿ ಅಂಕಿತಾ ಗೋರಯ್ಯ, ಶಿವ ಪಂಡಿತ್ ಮುಂತಾದ ತಾರಾಬಳಗವಿರಲಿದ್ದು, ಯುವನ್ ಶಂಕರ್  ರಾಜ್ ಅವರ ಸಂಗೀತ ನಿರ್ದೇಶನವಿರಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next