ಗಳು ಚುತುಷ್ಪಥ ರಸ್ತೆಯನ್ನಾಗಿ ನಿರ್ಮಿಸಲು ಕ್ರಮ ಕೈಗೊಂಡಿದ್ದರು.
Advertisement
ಅದರಂತೆ 2013ರಲ್ಲಿ ಲ್ಯಾಂಕೋ ಕಂಪನಿಯು ಹೊಸಕೋಟೆಯಿಂದ ಮುಳಬಾಗಿಲು ನಗರದ ಮದರಸಾ ವರೆಗೂ ನಿರ್ಮಿಸಿ, ಹೆದ್ದಾರಿ ಅಭಿವೃದ್ಧಿ ಗಾಗಿ ವ್ಯಯವಾಗಿರುವ ಹಣವನ್ನು ವಸೂಲಿ ಮಾಡಲು ದೇವರಾಯಸಮುದ್ರ ಬಳಿ ಟೋಲ್ ನಿರ್ಮಿಸಿದ್ದಾರೆ. ಅಂತೆಯೇ 2ನೇ ಹಂತವಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಭಾರತ ಸರ್ಕಾರದ ಅನುಸಾರ ಜೆಎಸ್‌ಆರ್ ಟೋಲ್‌ವೇಸ್ ಪ್ರçವೇಟ್ ಲಿಮಿಟೆಡ್ ಕಂಪನಿಯು ರಾ.ಹೆ.75ರ ಮುಳಬಾಗಿಲು ನಗರದ ಮದರಸಾದಿಂದ ಕರ್ನಾಟಕ ಗಡಿ ಭಾಗದವರೆಗೆ 2015ರಲ್ಲಿ ಚುತುಷ್ಪಥ ರಸ್ತೆ ನಿರ್ಮಿಸಿದ್ದು, ಹೆದ್ದಾರಿ ಬಳಕೆಗಾಗಿ ಬಳಕೆದಾರ ಶುಲ್ಕ ಸಂಗ್ರಹಕ್ಕೆ ಗಡಿ ರೇಖೆಯಿಂದ 500 ಮೀ ದೂರದ ಎನ್.ಯಲುವಹಳ್ಳಿ ಬಳಿ ಟೋಲ್ ಪ್ಲಾಜಾ ನಿರ್ಮಿಸಿಕೊಂಡು ಶುಲ್ಕ ವಸೂಲಿ ಮಾಡುತ್ತಿದ್ದರು.
ಬಾರ್ಡರ್‌ನಲ್ಲಿ ಗ್ರಾಮಸ್ಥರು ವಾಹನಗಳಲ್ಲಿ ರಸ್ತೆ ದಾಟಲು ರಸ್ತೆ ಮದ್ಯದಲ್ಲಿನ ರಸ್ತೆ ವಿಭಜಕವನ್ನು ಅಕ್ರಮವಾಗಿ ಕೊರೆದು ದಾರಿ ಮಾಡಿಕೊಂಡಿದ್ದಾರೆ. ರಸ್ತೆ ಮುಚ್ಚಿದ್ದರೂ ಪ್ರಯೋಜನವಿಲ್ಲ: ಹೆದ್ದಾರಿಯಲ್ಲಿ 24 ಗಂಟೆಗಳ ಕಾಲ ವಾಹನಗಳು ವೇಗದಿಂದ ಸಂಚಾರ ಮಾಡುತ್ತವೆ. ಅದರ ನಡುವೆ ಗ್ರಾಮಸ್ಥರು, ವಿಭಜಕದ ದಾರಿಯಲ್ಲಿ ಹಠಾತ್ ಆಗಿ ಗಿಡಗಳ ನಡುವೆ ಒಂದು ಕಡೆಯಿಂದ ಮತ್ತೂಂದು ಕಡೆ ವಾಹನಗಳನ್ನು ನುಗ್ಗಿಸಿದಾಗ, ಎದುರುಗಡೆಯಿಂದ ವೇಗವಾಗಿ ಬರುವ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಅಪಘಾತಗಳು ಉಂಟಾಗುತ್ತಿವೆ. ಅಲ್ಲದೇ ಸಾಕಷ್ಟು ಜನರು ಮೃತಪಟ್ಟು ಮತ್ತೂ ಕೆಲವರು ಗಾಯಗೊಂಡಿರುವ ಘಟನೆಗಳು ನಡೆಯುತ್ತಿವೆ.
Related Articles
Advertisement
ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ವಿವಿಧ ಗೇಟ್‌ಗಳಲ್ಲಿ ಜನರು ಅಕ್ರಮವಾಗಿ ರಸ್ತೆ ವಿಭಜಕಗಳನ್ನುಕೊರೆದು ದಾರಿ ಮಾಡಿಕೊಂಡಿದ್ದು, ಈ ಜಾಗಗಳಲ್ಲಿ ಸಡನ್ನಾಗಿ ತಮ್ಮ ವಾಹನಗಳ ಮೂಲಕ ರಸ್ತೆ ದಾಟುವುದರಿಂದ ವೇಗವಾಗಿ ಸಂಚರಿಸುವ ವಾಹನಗಳ ನಡುವೆ ಅಪಘಾತಗಳು ಉಂಟಾಗುತ್ತಿವೆ. ಆದ್ದರಿಂದ ಇಂತಹ ಅವಘಡಗಳಿಗೆ ಹೆದ್ದಾರಿ ಅಧಿಕಾರಿಗಳು ಕಡಿವಾಣ ಹಾಕಬೇಕಿದೆ.ರಮೇಶ್, ಕಾರು ಚಾಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಗೇಟ್‌ಗಳಲ್ಲಿ ರಸ್ತೆ ದಾಟಲು ಜನರು ಅಕ್ರಮವಾಗಿ ದಾರಿ ಸೃಷ್ಟಿಸಿಕೊಂಡಿದ್ದಾರೆ. ರಸ್ತೆ ವಿಭಜಕಗಳು ಅಪಘಾತ ಸೃಷ್ಟಿಸುವ ತಾಣವಾಗಿ ಪರಿಣಮಿಸುತ್ತಿರುವುದರಿಂದ ಹೆದ್ದಾರಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಂಪನಿ ಅಧಿಕಾರಿಗಳ ಜೊತೆ ಚರ್ಚಿಸಿ, ರಸ್ತೆ ಕಂದಕ ಮುಚ್ಚಿಸಲು ಸೂಚಿಸಲಾಗುವುದು.
ಸೆಲ್ವಮಣಿ, ಜಿಲ್ಲಾಧಿಕಾರಿ ಎಂ ನಾಗರಾಜಯ್ಯ