Advertisement

ಕೋವಿಡ್ ನಿಯಂತ್ರಣಕ್ಕೆ ಸಮಾಜದ ಸಹಕಾರ ಮುಖ್ಯ : ಶಾಸಕ ಸಿದ್ದು ಸವದಿ

06:25 PM Jan 10, 2022 | Team Udayavani |

ರಬಕವಿ-ಬನಹಟ್ಟಿ: ಕೋವಿಡ್ ನಿಯಂತ್ರಣದಲ್ಲಿ ಸಮಾಜದ ಸಹಕಾರ ಮುಖ್ಯವಾಗಿದೆ. ಕೇವಲ ಲಸಿಕಾಕರಣದಿಂದಲೇ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಅವರು ಸೋಮವಾರ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಮುನ್ನೆಚ್ಚರಿಕೆಯ ಲಸಿಕಾಕರಣಕ್ಕೆ ಚಾಲನೆ ನೀಡಿ ತಾವೇ ಸ್ವತಃ ಲಸಿಕೆಯನ್ನು ಪಡೆದುಕೊಂಡರು.

ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ 60 ವರ್ಷ ಮೇಲ್ಪಟ್ಟ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಅರ್ಹರಾದ 43519 ಫಲಾನುಭವಿಗಳು ಇದ್ದಾರೆ. ಅದೇ ರೀತಿಯಾಗಿ 6244 ಮುಂಚೂಣಿ ಕಾರ್ಯಕರ್ತರು ಇದ್ದಾರೆ. ಇವರೆಲ್ಲರಿಗೂ ಕೂಡಾ ಪ್ರಥಮ ಪ್ರಾಶಸ್ತ್ಯದ ಮೇರೆಗೆ ಲಸಿಕೆಯನ್ನು ನೀಡಲಾಗುತ್ತದೆ. ಅವಳಿ ನಗರದಲ್ಲಿ ಈಗಾಗಲೇ 15 ವರ್ಷ ಮೇಲ್ಪಟ್ಟ ಶೇ. 75 ರಷ್ಟು ಪ್ರಥಮ ಡೋಸ್ ಪಡೆದುಕೊಂಡರೆ ಶೇ. 76 ಜನರು ಎರಡನೆಯ ಡೋಸ್ ಪಡೆದುಕೊಂಡಿದ್ದಾರೆ. ಆದ್ದರಿಂದ ಲಸಿಕೆಯನ್ನು ಪಡೆದುಕೊಳ್ಳದವರು ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಸವದಿ ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಜಿ.ಎಚ್.ಗಲಗಲಿ ಮಾತನಾಡಿ, ಮುಂದುವರೆದ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಭಾರತದಲ್ಲಿ ಲಸಿಕೆಯನ್ನು ತೀವ್ರಗತಿಯಲ್ಲಿ ಸಾರ್ವಜನಿಕರಿಗೆ ನೀಡಿರುವುದರಿಂದ ಪ್ರಕರಣಗಳು ಸಂಖ್ಯೆ ಕಡಿಮೆ ಇದ್ದು, ಸಾವುಗಳ ಸಂಖ್ಯೆ ಕಡಿಮೆಯಾಗಿದೆ ಎಂದರು.

ರಬಕವಿ-ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುನ್ನೆಚ್ಚರಿಕೆಯ ಲಸಿಕಾಕರಣ ಕಾರ್ಯಕ್ಕೆ ಶಾಸಕ ಸಿದ್ದು ಸವದಿ ಚಾಲನೆ ನೀಡಿ ತಾವೇ ಲಸಿಕೆಯನ್ನು ಪಡೆದುಕೊಂಡರು. ಅದರ ಜೊತೆ ತಹಶೀಲ್ದಾರ ಸಂಜಯ ಇಂಗಳೆ ಅವರು ಕೂಡಾ ಪಡೆದುಕೊಂಡರು.

Advertisement

ಇದನ್ನೂ ಓದಿ : ಕೆಎಂಎಫ್‌ ನಿಂದ 460 ಹುದ್ದೆಗಳ ಭರ್ತಿಗೆ ಕ್ರಮ : ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಂಜಯ ಇಂಗಳೆ, ಪೌರಾಯುಕ್ತ ಶ್ರೀನಿವಾಸ ಜಾಧವ, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಡಾ.ಎನ್.ಎಂ.ನದಾಫ್, ಡಾ.ವೀರೇಶ ಹುಡೇದಮನಿ, ನಗರಸಭೆಯ ಅಧ್ಯಕ್ಷ ಶ್ರೀಶೈಲ ಬೀಳಗಿ, ರಾಜು ಅಂಬಲಿ, ಡಾ.ಕಾವೇರಿ ಹಳ್ಯಾಳ, ಎಂ.ಕೆ.ಮುಲ್ಲಾ. ಬಿ.ಎಸ್.ಪಟ್ಟಣಶೆಟ್ಟಿ, ಸ್ಮೀತಾ ಕಾಳಗಿ, ಶರೀಫ್ ಬೇವೂರ, ಗಿರಿಜಾ ಖೋತ್, ವೈ.ಎನ್.ಧನಗಾರ, ಬಿ.ಆರ್.ಹಂಗೋಜಿ ಕುಲಕರ್ಣಿ ಹಾಗೂ ಡುಮನಾಳ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next