Advertisement

ಬಂಧಿತ ಸಿದ್ದಿಕ್‌ ಕಪ್ಪನ್‌ ಪತ್ರಕರ್ತನಲ್ಲ, ಕೇರಳದ ಪಿಎಫ್ಐ ಕಾರ್ಯದರ್ಶಿ!

07:14 AM Nov 21, 2020 | mahesh |

ಹೊಸದಿಲ್ಲಿ: ಉತ್ತರಪ್ರದೇಶದ ಹತ್ರಾಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ, ಸ್ಥಳಕ್ಕೆ ತೆರಳಲು ಯತ್ನಿಸಿದ್ದ ಕೇರಳದ ಸಿದ್ದಿಕ್‌ ಕಪ್ಪನ್‌ ಪತ್ರಕರ್ತನಲ್ಲ. ಆತ ನಿಜಕ್ಕೂ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ ಕಚೇರಿ ಕಾರ್ಯದರ್ಶಿ ಎಂದು ಉತ್ತರಪ್ರದೇಶ ಪೊಲೀಸರು ಸರ್ವೋಚ್ಚ ನ್ಯಾಯಾಲ­ಯಕ್ಕೆ ತಿಳಿಸಿದ್ದಾರೆ. ಸಿದ್ದಿಕ್‌ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ಪತ್ರಿಕೆ 2018ಕ್ಕೇ ಮುಚ್ಚಿಹೋಗಿದೆ. ಆತ ಪತ್ರಕರ್ತನ ಸೋಗು ಧರಿಸಿ ಹತ್ರಾಸ್‌ನಲ್ಲಿ ವ್ಯವಸ್ಥಿತ­ವಾಗಿ ಜಾತಿ ಗಲಭೆಯೆಬ್ಬಿಸಲು ಯತ್ನಿಸಿದ್ದ, ತನಿಖೆಯಿಂದ ಈ ಸಂಗತಿಗಳು ಗೊತ್ತಾಗಿವೆ. ಆತ ನಮಗೆ ಆರಂಭದಲ್ಲಿ ತನ್ನ ನೈಜ ವಿಳಾಸ ತಿಳಿಸದೇ ಏಮಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಸಿದ್ದಿಕ್‌ ಬಂಧನ ಪ್ರಶ್ನಿಸಿ ಕೇರಳ ಕಾರ್ಯ­ನಿರತ ಪತ್ರಕರ್ತರ ಸಂಘ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ವಿಚಾ­ರಣೆ ವೇಳೆ ಉತ್ತರ­ಪ್ರದೇಶ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಈ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ವಕೀಲರನ್ನು ಭೇಟಿಯಾಗಲು ಸಿದ್ದಿಕ್‌ಗೆ ಅನುಮತಿ ನೀಡಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ.

ದಲಿತ ಮಹಿಳೆಯನ್ನು ಮೇಲ್ವರ್ಗದ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರಕ್ಕೊಳ­ಪಡಿಸಿ ಸಾಯಿಸಿದ ಪ್ರಕರಣದ ಬೆನ್ನಲ್ಲೇ, ಉತ್ತರಪ್ರದೇಶದ ಹತ್ರಾಸ್‌ಗೆ ತೆರಳಲು ಸಿದ್ದಿಕ್‌ ಹೊರಟಿದ್ದರು. ಅ.5ರಂದು ಅವ­ರನ್ನು ಮಾರ್ಗಮಧ್ಯೆ ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next