Advertisement

ಸಿದ್ದು ಹೇಳಿಕೆ ಘನತೆಗೆ ತಕ್ಕುದಲ್ಲ: ಯಡಿಯೂರಪ್ಪ

06:50 AM Oct 25, 2018 | Team Udayavani |

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶ್ರೀರಾಮುಲುಗೆ 420 ಎಂದು ಹೇಳಿರುವುದು ಅವರ ಘನತೆಗೆ ತಕ್ಕುದಲ್ಲ. ಆ ಮೂಲಕ ಅವರು ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಸಿದ್ದು ಅವರು ಆ ಸಮಾಜದವರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದ್ದಾರೆ.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ಪ್ರಚಾರದ ಭರಾಟೆಯಲ್ಲಿ ನಾಲಿಗೆ ಹರಿಯ ಬಿಟ್ಟಿದ್ದಾರೆ. ಈ ತರಹದ ಮಾತುಗಳು ಅವರಿಗೆ ಶೋಭೆ ತರಲ್ಲ. ಮಾತನಾಡುವಾಗ ಎಚ್ಚರಿಕೆ ವಹಿಸಬೇಕು.ಅವರು ಶ್ರೀರಾಮುಲು ಜತೆಗೆ ವಾಲ್ಮೀಕಿ ಸಮುದಾಯವನ್ನೂ ಅವಮಾನಿಸಿದ್ದಾರೆ ಎಂದರು.

ಜಮಖಂಡಿ ವಿಧಾನಸಭೆ ಸೇರಿದಂತೆ ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭಾ ಕ್ಷೇತ್ರವನ್ನು ಈಗಾಗಲೇ ನಾವು ಗೆದ್ದಿದ್ದೇವೆ. ಹೆಚ್ಚು ಅಂತರದ ಗೆಲುವಿಗೆ ಪ್ರಯತ್ನ ನಡೆದಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ ನಮ್ಮ ಗೆಲುವನ್ನು ಹಗುರವಾಗಿ ಮಾಡುತ್ತಿದ್ದಾರೆ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಸಿದ್ದರಾಮಯ್ಯನವರು ಬಿ.ಶ್ರೀರಾಮುಲುಗೆ 420 ಎಂಬ ಅಸಾಂವಿಧಾನಿಕ, ಅಸಂಸ್ಕೃತಿ ಪದ ಬಳಸಿದ್ದು, ಅವರ ಹೇಳಿಕೆಯನ್ನು ಬೇಷರತ್ತಾಗಿ ಹಿಂಪಡೆಯಬೇಕು. ಶ್ರೀರಾಮುಲುಗೆ ಕನ್ನಡ ಸರಿಯಾಗಿ ಬರಲ್ಲ. ಅವರ ಭಾಷೆಯ ಉಚ್ಚಾರಣೆ ಬಗ್ಗೆ ವ್ಯಂಗ್ಯ ಮಾಡುವ ಮೂಲಕ ಎಸ್‌ಟಿ ಸಮುದಾಯದ ಮುಖಂಡನನ್ನು ಹೀಯಾಳಿಸಿರುವುದೂ ಖಂಡನೀಯ.
– ಪ್ರಹ್ಲಾದ ಜೋಶಿ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next