Advertisement
ಸಿಎಜಿ ವರದಿ ಆಧರಿಸಿ ರಾಜ್ಯ ಸರ್ಕಾರದಿಂದ ನಡೆದಿರುವ ಅಕ್ರಮ, ಅನುದಾನ ದುರ್ಬಳಕೆ, ದುಂದುವೆಚ್ಚ, ವಂಚನೆ ಕುರಿತಂತೆ ಆರ್ಥಿಕ ತಜ್ಞರೊಂದಿಗೆ ಅಧ್ಯಯನ ನಡೆಸಿ ಹೊರತಂದಿರುವ 36 ಪುಟಗಳ ಕೈಪಿಡಿಯನ್ನು ವಿಧಾನಸೌಧದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಗುರುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
Related Articles
Advertisement
ಬಜೆಟ್‌ನಲ್ಲಿ ಅಭಿವೃದ್ಧಿಗೆ ಉಳಿದ ಹಣ ಒಟ್ಟು 42,980 ಕೋಟಿ ರೂ. ಮಾತ್ರ. ಅದರಲ್ಲಿ 27,351 ಕೋಟಿ ರೂ. ದುರ್ಬಳಕೆಯಾಗಿದೆ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡದದ್ದಿರೆ ಸದನದ ಒಳಗೆ, ಹೊರಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಹ ವಕ್ತಾರ ಎ.ಎಚ್.ಆನಂದ್ ಇತರರು ಉಪಸ್ಥಿತರಿದ್ದರು.
ಅಕ್ರಮವಾಗಿ ಗಡಿ ದಾಟುವುದು, ಸಮುದ್ರ ತೀರ ಹಾಗೂ ಸಮುದ್ರ ಮಾರ್ಗದಿಂದ ಅಪರಾಧ ಮಾಡುವುದರ ತಡೆಗೆ ಕರಾವಳಿ ಭದ್ರತಾ ಯೋಜನೆಯಡಿ (2005-06) ಕರಾವಳಿ ಪೊಲೀಸ್ ಠಾಣೆಗಳನ್ನು (ಸಿಪಿಎಸ್) ಸ್ಥಾಪಿಸಲಾಗಿತ್ತು. ರಾಜ್ಯಕ್ಕೆ ಮಂಜೂರಾದ 438 ಪೊಲೀಸ್ ಸಿಬ್ಬಂದಿಯಲ್ಲಿ ಕೇವಲ 170 ಮಂದಿ ಅಂದರೆ ಶೇ.39ರಷ್ಟು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. 9 ಸಿಪಿಎಸ್‌ಗಳ ಪೈಕಿ 4 ಸಿಪಿಎಸ್‌ಗಳಲ್ಲಿ ಗಸ್ತು ದೋಣಿಯೇ ಇರಲಿಲ್ಲ. ಉಳಿದ 5 ಸಿಪಿಎಸ್‌ಗಳಲ್ಲಿ 15 ದೋನಿಗಳು ಗಸ್ತಿಗಾಗಿ ಲಭ್ಯವಿದ್ದರೂ 3ರಿಂದ 11 ತಿಂಗಳ ವ್ಯಾಪ್ತಿಯ ಅವಧಿಯಲ್ಲಿ ದುರಸ್ತಿಯಲ್ಲಿದ್ದವು. ಪರಿಣಾಮವಾಗಿ ರಾಜ್ಯದ ಕರಾವಳಿ ಭದ್ರತೆ ಕೇವಲ ಹೆಸರಿಗೆ ಮಾತ್ರ ಎಂಬಂತಾಗಿದೆ ಎಂದು ಸಿಎಜಿಯಲ್ಲಿ ವರದಿಯಾಗಿದೆ.
ಪ್ರಮುಖ ಅಕ್ರಮಗಳ ವಿವರ2016-17ನೇ ಸಾಲಿನಲ್ಲಿ 11,994 ಕೋಟಿ ರೂ. ಬಳಕೆಯಾಗಿಲ್ಲ. ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇಷ್ಟು ಮೊತ್ತದ ಹಣದ ಬಗ್ಗೆ 2017- 18ನೇ ಸಾಲಿನ ಬಜೆಟ್‌ನಲ್ಲಿ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಹಾಗಾದರೆ ಇಷ್ಟು ಬೃಹತ್ ಮೊತ್ತದ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ವರ್ಗಾಯಿಸದೆ ಯಾವ ಇಲಾಖೆ, ಅಧಿಕಾರಿ ಯಾರು ಯಾವ ಬ್ಯಾಂಕ್‌ನಲ್ಲಿ ಇಟ್ಟಿದ್ದರು ಎಂಬುದನ್ನು ಬಹಿರಂಗಪಡಿಸಬೇಕು. ಲೋಕೋಪಯೋಗಿ, ಗೃಹ, ಕಾರ್ಮಿಕ, ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ 11 ಇಲಾಖೆಗಳಲ್ಲಿ ಒಟ್ಟು 18.11 ಕೋಟಿ ರೂ. ದುರುಪಯೋಗವಾಗುವ ಜತೆಗೆ ಗೃಹ, ಆರೋಗ್ಯ, ಕಾರ್ಮಿಕ ಇಲಾಖೆಗಳಲ್ಲಿ ಸರ್ಕಾರದ ಖಜಾನೆಯಿಂದ ಹಣ ಕಳವು ಮಾಡಿರುವುದು ಸಿಎಜಿಯಲ್ಲಿ ವರದಿಯಾಗಿದೆ. ಗೃಹ ಇಲಾಖೆಯಲ್ಲೇ ಹಣ ಕಳುವಾಗಿರುವುದು ಬಯಲಾಗಿದೆ. ಇಷ್ಟಾದರೂ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ವಿರುದ್ಧ ಕ್ರಮ ಜರುಗಿಸಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಖರೀದಿಸಿದ ಔಷಧಗಳ ಪೈಕಿ 7433 ಬ್ಯಾಚ್ ಔಷಧಗಳ (ಶೇ.52) ಗುಣಮಟ್ಟ ಪರೀಕ್ಷಿಸದೆ, ಖಾತಿಯಿಲ್ಲದೆ ರೋಗಿಗಳಿಗೆ ಪೂರೈಸಲಾಗಿದೆ. ಇದು ರಾಜ್ಯದ ಜನತೆಯೊಂದಿಗೆ ಚೆಲ್ಲಾಟವಾಡಿದಂತಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳದಿರುವುದು ಔಷಧ ಕಂಪೆನಿಗಳ ಆಮಿಷ ಕಾರಣವಿರಬಹುದು. ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಒಟ್ಟು 47.45 ಲಕ್ಷ ವಿದ್ಯಾರ್ಥಿಗಳಿದ್ದರೆ, 52.73 ಲಕ್ಷ ಸಮವಸ್ತ್ರ ಖರೀಸಲಾಗಿದೆ. ಅಂದರೆ 5.27 ಲಕ್ಷ ಸಮವಸ್ತ್ರ ಹೆಚ್ಚುವರಿಯಾಗಿ ಖರೀದಿಸಲಾಗಿದ್ದು, 1.72 ಕೋಟಿ ರೂ.ದುರ್ಬಳಕೆಯಾಗಿದೆ. 788 ಕೆರೆಗಳಿಗೆ ನೀರು ತುಂಬಿಸದಿದ್ದರೂ 1,433 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಹಣ ಯಾರ ಜೇಬು ತುಂಬಿತೋ ಗೊತ್ತಾಗುತ್ತಿಲ್ಲ ಅಲಂಬೂರು, ಶಿವಸಂದ್ರ, ಅಳಿಲುಘಟ್ಟ ಯೋಜನೆ ಮುಖಾಂತರ 137 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗಾಗಿ 35 ಕೆರೆಗಳನ್ನು ತುಂಬಿಸಲು 294.87 ಕೋಟಿ ರೂ. ವೆಚ್ಚವಾದರೂ ಕೆರೆಗಳಿಗೆ ನೀರು ಬಂದಿಲ್ಲ ಆಡಳಿತಾತ್ಮಕ (ಕ್ಯಾಬಿನೆಟ್ ಅನುಮೋದನೆ), ತಾಂತ್ರಿಕ ಅನುಮೋದನೆ ಇಲ್ಲದೆ 7,378 ಕೋಟಿ ರೂ. ಮೊತ್ತದ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಶಾಸಕಾಂಗದ ಅನುಮೋದನೆ ಇಲ್ಲದೆ ಕಾರ್ಯನಿರ್ವಾಹಕ ಆದೇಶಗಳ ಮೂಲಕ 6057 ಕೋಟಿ ರೂ. ಬಿಡುಗಡೆ. ಇದರಿಂದ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಸ್ವಹಿತಾಸಕ್ತಿಯಿಂದ ಹಣ ಬಿಡುಗಡೆಗೊಳಿಸಿ ಭ್ರಷ್ಟಾಚಾರ ನಡೆಸಿರುವ ಸಾಧ್ಯತೆ ಇದೆ. ಐದು ಪ್ರಕರಣಗಳಲ್ಲಿ 124 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ಶಾಸಕಾಂಗದ ಅನುಮೋದನೆ ಇಲ್ಲದೆ ವೆಚ್ಚ ಮಾಡಲಾಗಿದೆ. ರಾಜ್ಯದಲ್ಲಿ ಜನತೆಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಬಿಡುಗಡೆಯಾದ ಹಣವನ್ನು ಬಳಸದೆ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು 612 ಕೋಟಿ ರೂ. ಬಡ್ಡಿ ಪಡೆದು ಜನರಿಗೆ ಸೌಲಭ್ಯ ಕಲ್ಪಿಸದೆ ವಂಚಿಸಲಾಗಿದೆ. ಬಳಕೆಯಾಗದ ಅನುದಾನವನ್ನು ಆರ್ಥಿಕ ವರ್ಷದ ಕೊನೆಯ ಎರಡು ದಿನಗಳಲ್ಲಿ ಸುಳ್ಳು ಬಿಲ್ ಸೃಷ್ಟಿಸುವ ಮೂಲಕ ವೆಚ್ಚವಾಗಿದೆ ಎಂದು ತೋರಿಸಲು ಪ್ರಯತ್ನಿಸಿರುವುದು ಕಂಡುಬಂದಿದೆ. ಪೌರಾಡಳಿತ ನಿರ್ದೇಶಕರು 254.34 ಕೋಟಿ ರೂ. ಮೊತ್ತಕ್ಕೆ ಬಳಕೆ ಪ್ರಮಾಣ ಸಲ್ಲಿಸಿಲ್ಲ. ಆದರೂ ನಿರ್ದೇಶಕರ ವಿರುದ್ಧ ಕ್ರಮವಿಲ್ಲ. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಗಾಗಿ ಮೀಸಲಿಟ್ಟ 115.10 ಕೋಟಿ ರೂ. ಮೊತ್ತವನ್ನು ಮೊದಲ ತ್ತೈಮಾಸಿಕದಲ್ಲಿ ಬಳಸುವಂತೆ ಆದೇಶಿಸಿದ್ದರೂ 2017ರ ಜುಲೈವರೆಗೆ ಲ್ಯಾಪ್‌ಟಾಪ್ ವಿತರಿಸದೆ ವಂಚನೆ. ಉನ್ನತ ಶಿಕ್ಷಣ ಸಲಹಾ ಮಂಡಳಿ ತನ್ನ ಖಾತೆಯಲ್ಲೇ 115.10 ಕೋಟಿ ರೂ. ಉಳಿಸಿಕೊಂಡಿದ್ದು, ಯಾರ ಸೂಚನೆ ಮೇರೆಗೆ ಎಂಬುದನ್ನು ಬಹಿರಂಗಪಡಿಸಬೇಕು. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ಗೆ 1990-91ರಿಂದ ಈವರೆಗೆ 1.82 ಕೊಟಿ ರೂ. ಪಾವತಿಸದೆ ಹಾಗೆ ಉಳಿಸಿಕೊಂಡಿದ್ದರಿಂದ ಏಳು ಕೋಟಿ ರೂ. ಬಡ್ಡಿ ಪಾವತಿಸುವಂತಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಪೊಲೀಸ್ ವ್ಯವಸ್ಥೆ ಸುಧಾರಣೆಗಾಗಿ 357.35 ಕೋಟಿ ರೂ. ನಿಗದಿಪಡಿಸಿದ್ದು, ಅದರಲ್ಲಿ 290 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ ರಾಜ್ಯ ಸರ್ಕಾರ 222 ಕೋಟಿ ರೂ. ಮಾತ್ರ ಬಿಡುಗಡೆಗೊಳಿಸಿದೆ. ಬಳಕೆ ಪ್ರಮಾಣ ಪತ್ರ ಸಲ್ಲಿಸದ ಕಾರಣ ಕೇಂದ್ರ ಸರ್ಕಾರದಿಂದ ಈವರೆಗೆ 66.37 ಕೋಟಿ ರೂ. ಪಡೆಯದೆ ನಿರ್ಲಕ್ಷ್ಯ ತೋರಿದೆ. ಜಲಮಂಡಳಿಯಲ್ಲಿ 5625 ಬಿಲ್‌ಗಳಲ್ಲಿ ನೀರು ಬಳಕೆಯಾಗಿದ್ದರೂ ಬಿಲ್ ಮೊತ್ತ ಶೂನ್ಯ. ಮೀಟರ್ ಕಾರ್ಯ ನಿರ್ವಹಿಸುತ್ತಿದ್ದರೂ 2,777 ಬಳಕೆದಾರರ 4782 ಬಿಲ್‌ಗಳು ತಿಂಗಳ ಮೀಟರ್ ಶುಲ್ಕವನ್ನು ಶೂನ್ಯವೆಂದು ತೋರಿಸುತ್ತಿವೆ. 59 ಬಿಲ್‌ಗಳಲ್ಲಿ ಬಳಕೆದಾರರ ಹೆಸರು, ವಿಳಾಸಗಳೇ ಇಲ್ಲ. 2016-17ನೇ ಸಾಲಿನಲ್ಲಿ 7433 ಬ್ಯಾಚ್ ಔಷಧಗಳನ್ನು ಗುಣಮಟ್ಟ ಪರೀಕ್ಷಿಸದೆ ರೋಗಿಗಳಿಗೆ ಪೂರೈಸಿರುವುದು ಗಂಭೀರ ಲೋಪ. ಇದರಿಂದ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡಿದಂತಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಬೇಕು. ಆಗ ಆರೋಗ್ಯ ಸಚಿವರಾಗಿದ್ದ ಕೆ.ಆರ್. ರಮೇಶ್ ಕುಮಾರ್ ನನ್ನ ದೊಡ್ಡಪ್ಪನ ಮಗನಲ್ಲ. ಅವರಿಂದ ತಪ್ಪಾಗಿದ್ದರೆ ಅವರ ವಿರುದ್ಧವೂ ಕ್ರಮ ಜರುಗಿಸಬೇಕು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲೋಪವಾಗಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು
– ಎನ್.ರವಿಕುಮಾರ್ ಬಿಜೆಪಿ ವಿಧಾನ ಪರಿಷತ್ ಸದಸ್ಯ