Advertisement

ಸಿದ್ಧಗಂಗಾ ಮಠ: ಶ್ರೀ ಮನೋಜ್‌ ಕುಮಾರ್‌ ಉತ್ತರಾಧಿಕಾರಿ

11:04 PM Apr 19, 2023 | Team Udayavani |

ತುಮಕೂರು: ಐತಿಹಾಸಿಕ ಹಿನ್ನೆಲೆಯ ಪುರಾತನ ವೀರಶೈವ ಮಠವಾದ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿಯಾಗಿ ಮನೋಜ್‌ ಕುಮಾರ್‌ ಅವರನ್ನು ಆಯ್ಕೆ ಮಾಡಲಾ ಗಿದೆ ಎಂದು ಸಿದ್ಧಗಂಗಾ ಮಠದ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಪ್ರಕಟಿಸಿದ್ದಾರೆ.

Advertisement

ನೂತನ ನಿರಂಜನ ಪಟ್ಟಾಧಿಕಾರ ಮತ್ತು ಉತ್ತರಾಧಿಕಾರಿ ನೇಮಕ ಕಾರ್ಯಕ್ರಮ ಇದೇ ತಿಂಗಳ 23ರ ಬಸವಜಯಂತಿ ದಿನ ನಡೆಯಲಿದೆ. ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಮಠದ ತಮ್ಮ ಉತ್ತರಾಧಿಕಾರಿಯನ್ನಾಗಿ ಮನೋಜ್‌ ಕುಮಾರ್‌ ಅವರನ್ನು ಆಯ್ಕೆ ಮಾಡಿದ್ದಾರೆ.

ಮನೋಜ್‌ ಕುಮಾರ್‌ಅವರು 1987ರ ಜೂನ್‌ 2ರಂದು ಜನಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಎಂ.ಬಿ.ಷಡಕ್ಷರಯ್ಯ ಮತ್ತು ವಿರುಪಾಕ್ಷಮ್ಮ ಅವರ ಪುತ್ರ. ಬಿ.ಎಸ್ಸಿ, ಬಿ.ಎಡ್‌, ಎಂಎಸ್ಸಿ, ಎಂ.ಎ. ಪದವೀಧರರು. ಪ್ರಸ್ತುತ ಶ್ರೀ ಸಿದ್ಧಗಂಗಾ ಪಾಲಿಟೆಕ್ನಿಕ್‌ ನಲ್ಲಿ ಉಪ ನ್ಯಾಸಕರಾಗಿದ್ದಾರೆ.
ಇವರೊಂದಿಗೆ ಶ್ರೀ ಮಠದ ವ್ಯಾಪ್ತಿಗೆ ಒಳಪಡುವ ಕಂಚುಗಲ್‌ ಬಂಡೇಮಠಕ್ಕೆ ಉತ್ತರಾಧಿಕಾ ರಿಯಾಗಿ ಹರ್ಷ ಕೆ.ಎಂ. ಮತ್ತು ಬಸವಕಲ್ಯಾಣ ಮಠಕ್ಕೆ ಗೌರೀಶ್‌ ಕುಮಾರ್‌ ಅವರನ್ನು ಉತ್ತರಾಧಿಕಾರಿ ಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next