Advertisement

ಸಿದ್ಧಸೂತ್ರ ಬಿಟ್ಟ ಲವ್‌ ಸ್ಟೋರಿ

07:30 AM Apr 13, 2018 | |

ಕಿರುತೆರೆಯಲ್ಲಿ ಅನುಭವ ಪಡೆದ ಮಂದಿಯ ಮುಂದಿನ ಪಯಣ ಆರಂಭವಾಗೋದು ಹಿರಿತೆರೆಯಲ್ಲಿ. ಅದು ನಟ-ನಟಿಯರಿಂದ ಹಿಡಿದು ಕಲಾವಿದರವರೆಗೂ. ಈಗಾಗಲೇ ಸಾಕಷ್ಟು ಮಂದಿ ಕಿರುತೆರೆಯಿಂದ ಹಿರಿತೆರೆಗೆ ಬಂದು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಈಗ ಅದಕ್ಕೆ ಹೊಸ ಸೇರ್ಪಡೆ ಜೆ.ಕೆ.ಆದಿ. ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವಿರುವ ಆದಿ ಈಗ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಅವರಿಟ್ಟ ಹೆಸರು “ಭಾನು ವೆಡ್ಸ್‌ ಭೂಮಿ’.

Advertisement

ಚಿತ್ರದ ಟೈಟಲ್‌ ಕೇಳಿದ ಮೇಲೆ ಇದೊಂದು ಲವ್‌ ಸ್ಟೋರಿ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಆದರೆ, ನಿರ್ದೇಶಕ ಆದಿ ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟು ಬೇರೆ ತರಹ ಪ್ರಯತ್ನಿಸುತ್ತಿದ್ದಾರಂತೆ. “ಗಾಂಧಿನಗರದ ಸಿದಟಛಿಸೂತ್ರಗಳನ್ನು ಬಿಟ್ಟು ಸಿನಿಮಾ ಮಾಡುತ್ತಿದ್ದೇನೆ. ಐಟಂ ಸಾಂಗ್‌, ಇಂಟ್ರೋಡಕ್ಷನ್‌, ಫೈಟ್‌, ಬಿಲ್ಡಪ್‌ಗ್ಳಿಲ್ಲದೇ ಕಥೆಗೆ ಹೆಚ್ಚು ಒತ್ತುಕೊಟ್ಟು ಈ ಸಿನಿಮಾ ಮಾಡುತ್ತಿದ್ದೇನೆ’ ಎನ್ನುವುದು ಆದಿ ಮಾತು. ಚಿತ್ರದ ಕ್ಲೈಮ್ಯಾಕ್ಸ್‌ ತುಂಬಾ ಭಿನ್ನವಾಗಿರುತ್ತದೆಯಂತೆ. ಮೈಸೂರನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಕಾಲ್ಪನಿಕ ಕಥೆಯನ್ನು ಹೆಣೆಯಲಾಗಿದೆಯಂತೆ.

ಸೂರ್ಯಪ್ರಭ್‌ ಈ ಚಿತ್ರದ ನಾಯಕ. ಸಿನಿಮಾ ಮೇಲಿನ ಪ್ರೀತಿಯಿಂದ ಉದ್ಯೋಗ ತೊರೆದ ಸೂರ್ಯಪ್ರಭ್‌ ನಟನೆಗೆ ಬರಲು
ಡಾ.ರಾಜ್‌ ಪ್ರೇರಣೆಯಂತೆ. ಇನ್ನು ಕ್ಯಾಮರಾ ಮುಂದೆ ನಿಲ್ಲುವ ಮುನ್ನ ಸಿದಟಛಿತೆ ಬೇಕೆಂಬ ಕಾರಣಕ್ಕೆ ಆ್ಯಕ್ಟಿಂಗ್‌ ಕೋರ್ಸ್‌ ಕೂಡಾ ಮಾಡಿದ್ದಾಗಿ ಹೇಳಿಕೊಳ್ಳುತ್ತಾರೆ ಅವರು. ಇಲ್ಲಿ ಅವರು ಶ್ರೀಮಂತ ಹಿನ್ನೆಲೆಯಿರುವ ಲವರ್‌ಬಾಯ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದಲ್ಲಿ ರಿಶಿತಾ ಮಲಾ°ಡ್‌ ನಾಯಕಿ. ಮೈಸೂರಿಗೆ ಬಂದಾಗ ನಾಯಕ ಪ್ರೀತಿಗೆ ಬೀಳುವ ಪಾತ್ರ ಅವರದು. ಚಿತ್ರದಲ್ಲಿ ಶೋಭರಾಜ್‌
ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಚಿತ್ರವನ್ನು ಕಿಶೋರ್‌ ಶೆಟ್ಟಿ ನಿರ್ಮಿಸುತ್ತಿದ್ದಾರೆ.

ಚಿತ್ರಕ್ಕೆ ಲೋಕಿ ಸಂಗೀತವಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಮಡಿಕೇರಿ ಹಾಗೂ ಕಾರವಾರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next