Advertisement

ಸಕ್ಕರೆ ನಾಡಿನೊಂದಿಗೆ ಸಿದ್ಧಗಂಗಾಶ್ರೀ ಬಾಂಧವ್ಯ 

07:13 AM Jan 22, 2019 | Team Udayavani |

ಮಂಡ್ಯ: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಪದ್ಮಭೂಷಣ ಡಾ.ಶಿವಕುಮಾರ ಸ್ವಾಮೀಜಿ ಸಕ್ಕರೆ ನಾಡಿನೊಂದಿಗೆ ವಿಶೇಷ ನಂಟು ಹೊಂದಿದ್ದರಲ್ಲದೆ, ಜಿಲ್ಲೆಯ ಅನ್ನದಾತರ ಬಗ್ಗೆಯೂ ಅವರಿಗೆ ಅಪಾರ ಪ್ರೀತಿ ಹಾಗೂ ಒಲವಿತ್ತು. 

Advertisement

ಜಿಲ್ಲೆಯ ಸಾವಿರಾರು ಮಂದಿ ಮಕ್ಕಳು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಅಧ್ಯಯನ ಮಾಡಿ ಬದುಕು ಕಂಡುಕೊಂಡಿದ್ದಾರೆ. ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪೊ›.ತಿಮ್ಮೇಗೌಡ ಸೇರಿದಂತೆ ಅನೇಕ ಗಣ್ಯರು ಶ್ರೀಮಠದ ವಿದ್ಯಾರ್ಥಿಗಳಾಗಿದ್ದಾರೆ. 

ಜಿಲ್ಲೆಯ ಬಗ್ಗೆ ಅಕ್ಕರೆ ಹೊಂದಿದ್ದ ಪರಮಪೂಜ್ಯರು ಮಠದ ವತಿಯಿಂದ ನಡೆಯುವ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕವನ್ನು ಕೆ.ಆರ್‌.ಪೇಟೆ, ಮಳವಳ್ಳಿ, ಪಾಂಡವಪುರ ಹಾಗೂ ಮಂಡ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರದರ್ಶಿಸಿ ಸಮಾನತೆ, ಭಾತೃತ್ವ, ಸಾಮಾಜಿಕ ನ್ಯಾಯ, ದಾಸೋಹದ ಅರಿವು ಮೂಡಿಸಿ ಬಸವಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ. 

ಕಳೆದ ಅರವತ್ತು ವರ್ಷಗಳಿಂದಲೂ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸಂಚರಿಸಿ ಧಾರ್ಮಿಕ ಜಾಗೃತಿ ಮೂಡಿಸಿದ್ದ ಶ್ರೀಗಳ ಸೇವೆ ಅವಿಸ್ಮರಣೀಯ. ಈ ಜಿಲ್ಲೆಯ ಶಿಕ್ಷಣದ ಅವಕಾಶ ವಂಚಿತರಿಗೆ ತಾವೇ ಶ್ರೀಮಠದಲ್ಲಿ ಆಸರೆ ನೀಡಿ ಸನ್ಮಾರ್ಗದ ಬದುಕು ರೂಪಿಸಿದ್ದಾರೆ.

1952ರಿಂದ ನಂಟು: 3.2.1952ರ ಭಾನುವಾರ ಮಂಡ್ಯದಲ್ಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ಬೃಹತ್‌ ಸಭೆಯ ಅಧ್ಯಕ್ಷತೆ ವಹಿಸಿದ್ದ ಪರಮಪೂಜ್ಯರು ಅಪಾರ ಭಕ್ತಸಮೂಹವನ್ನು ಅಂದೇ ಸಂಪಾದಿಸಿದ್ದರು.

Advertisement

13.2.1954ರ ಶನಿವಾರ ಮಂಡ್ಯ ಜಿಲ್ಲಾ ಹೇಮಗಿರಿ ಜಾತ್ರೆಯಲ್ಲಿ ನಡೆದ ಹಿಂದೂ ಸಂಸ್ಕೃತಿಯ ಉತ್ಸವದಲ್ಲಿ ಸರ್ವರೂ ಸಮಾನರು ದೇವನೊಬ್ಬ ನಾಮ ಹಲವು ಎಂಬ ಸಮಾನತೆಯ ತತ್ವವನ್ನು ಬೋಧಿಸುವ ಮೂಲಕ ಎಲ್ಲರನ್ನೂ ಪ್ರೀತಿಸಿ-ಬೆಳೆಸಿ-ಬೆಳೆಯುವ ಭಾವವನ್ನು ಮೂಡಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next