Advertisement
ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮ ಜ.1 ರಿಂದ ಎರಡು ದಿನಗಳ ಕಾಲ ಜ್ಞಾನಯೋಗಾಶ್ರಮದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳ ಸಂದೇಶವನ್ನು ಸಮಾಜಕ್ಕೆ ತಲುಪಿಸಲು ಡಿ.23 ರಿಂದ 31 ರ ವರೆಗೆ ಜ್ಞಾನಯೋಗಾಶ್ರಮದಿಂದ ವಿವಿಧ ವೈಚಾರಿಕ ಗೋಷ್ಠಿಗಳು ನಡೆಯುತ್ತಿವೆ.
Related Articles
Advertisement
ವಚನಜ್ಞಾನ ಪಾದಯಾತ್ರೆ ಹಿನ್ನೆಲೆಯಲ್ಲಿ ಸಿದ್ದೇಶ್ವರ ದೇವಸ್ಥಾನದಿಂದ ಜ್ಞಸಾನಯೋಗಾಶ್ರಮದ ವರೆಗೆ ಶೋಭಾಯಾತ್ರೆ ಸಾಗುತ್ತಿದ್ದ ಆಶ್ರಮ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವಾಹಗಳು ರಹಿತ ರಸ್ತೆಯಲ್ಲಿ ಶ್ವೇತ ಸೀರೆ ಧರಿಸಿದ ಮಹಿಳೆಯರು ಸಿದ್ಧೇಶ್ವರ ಶ್ರೀಗಳ ಜ್ಞಾನಗ್ರಂಥಗಳನ್ನು ತಲೆಯ ಮೇಲೆ ಹೊತ್ತು ಹೆಜ್ಜೆ ಹಾಕುತ್ತಿದ್ದಾಗ ನೆರೆದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರು.
ಸಿದ್ಧೇಶ್ವರ ಶ್ರೀಗಳ ಭಕ್ತರು ಶಿಸ್ತು ಸಂಯಮಕ್ಕೆ ಹೆಸರಾಗಿದ್ದರೂ, ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ನಿಯೋಜಿಸಿತ್ತು. ಎನ್.ಸಿ.ಸಿ. ಕೆಡಿಟ್‍ಗಳು ಶೋಭಾಯಾತ್ರೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ನಿಂತು ವಚನಜ್ಞಾನ ಯಾತ್ರೆ ಸುಗಮವಾಗಿ ಸಾಗುವಂತೆ ಮಾಡುವಲ್ಲಿ ತಮ್ಮ ಸೇವೆ ನೀಡುತ್ತಿದ್ದರು.
ನಗರದ ಅಕ್ಕನ ಬಳಗ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಶ್ರೀಗಳ ಜ್ಞಾನಕೃತಿಗಳನ್ನು ಸ್ವಯಂ ಪ್ರೇರಿತವಾಗಿ ತಲೆ ಮೇಲೆ ಹೊತ್ತು ಜ್ಞಾನಪಾದಯಾತ್ರೆ ಮಾಡಿದ್ದಾರೆ. ಶೋಭಾಯಾತ್ರೆಯನ್ನು ಯಶಸ್ಸಿಗೊಳಿಸುವ ಮೂಲಕ ಮಾದರಿ ರೂಪಿಸಿದ್ದಾರೆ.– ಹರ್ಷಾನಂದ ಶ್ರೀಗಳು ಜ್ಞಾನಯೋಗಾಶ್ರಮ ವಿಜಯಪುರ ಸಿದ್ದೇಶ್ವರ ಶ್ರೀಗಳು ಜ್ಞಾನಕ್ಕೆ ಮಹತ್ವ ನೀಡುತ್ತಿದ್ದ ಕಾರಣ ಜ್ಞಾನಬುತ್ತಿ ಹೊತ್ತು ಸಾಗುವ ಮಹಿಳೆಯರ ಶೋಭಾಯಾತ್ರೆಯನ್ನು ವಚನ ಜ್ಞಾನ ಯಾತ್ರೆ ಎಂದು ಕರೆದಿದ್ದೇವೆ. ಇದರಿಂದ ಜನರಲ್ಲಿ ಜ್ಞಾನದ ಹಸಿವು ಹೆಚ್ಚುವಂತಾಗಲಿ ಎಂಬ ಆಶಯ ನಮ್ಮದು.
– ರುದ್ರಮುನಿ ಶ್ರೀಗಳು ಆಲಮಟ್ಟಿ.