Advertisement

ಸಿದ್ಧಾರೂಢಸ್ವಾಮಿ ಜಲರಥೋತ್ಸವ

12:28 PM Aug 09, 2017 | |

ಹುಬ್ಬಳ್ಳಿ: ಸದ್ಗುರು ಸಿದ್ಧಾರೂಢ ಸ್ವಾಮಿ ಮಹಾರಾಜ ಕೀ ಜೈ, ಸದ್ಗುರು ಗುರುನಾಥರೂಢ ಸ್ವಾಮಿ ಮಹಾರಾಜ ಕೀ ಜೈ ಎಂಬ ಜಯಘೋಷ ಗಳೊಂದಿಗೆ ಮಂಗಳವಾರ ಸಂಜೆ ಸಿದ್ಧಾರೂಢರ ತೆಪ್ಪದ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಶ್ರಾವಣ ಮಾಸದ ನಿಮಿತ್ತ ಬೆಳಿಗ್ಗೆಯಿಂದಲೇ ಉಭಯ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು.

Advertisement

ಬೆಳಗ್ಗೆ ಉಭಯ ಶ್ರೀಗಳ ಪಲ್ಲಕ್ಕಿ ಉತ್ಸವ ವಾದ್ಯಮೇಳಗಳೊಂದಿಗೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ, ಮರಳಿ ಸಂಜೆ ಶ್ರೀಮಠಕ್ಕೆ ಆಗಮಿಸಿದ ನಂತರ ತೆಪ್ಪದ ತೇರು ಪ್ರಾರಂಭಗೊಂಡಿತು. ಸಾವಿರಾರು ಭಕ್ತರು ತೆಪ್ಪದ ತೇರಿಗೆ ಉತ್ತತ್ತಿ, ಬಾಳೆಹಣ್ಣು, ಮೋಸಂಬಿ ಹಣ್ಣು ಎಸೆಯುವ ಮೂಲಕ ಉಭಯ ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು.

ನ್ಯಾಯಾಧೀಶ ಎಸ್‌.ಎಸ್‌. ಬಳ್ಳೂಳ್ಳಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಶ್ರೀಗಳು ಹಾಗೂ ಶ್ರೀಮಠದ ಟ್ರಸ್ಟ್‌ ಚೇರ್ಮನ್‌ ಧರಣೇಂದರ ಜವಳಿ, ವೈಸ ಚೇರ್ಮನ್‌ ಜ್ಯೋತಿ ಸಾಲಿಮಠ, ಗೌರವ ಕಾರ್ಯದರ್ಶಿ ಗೀತಾ ಎಸ್‌.ಜಿ., ನಾರಾಯಣಸಾ ಮೆಹರವಾಡೆ,

-ನಾರಾಯಣ ನಿರಂಜನ, ನಾರಾಯಣ ಪ್ರಸಾದ ಪಾಠಕ, ಬಸವರಾಜ ಕಲ್ಯಾಣಶೆಟ್ಟರ, ಯಲ್ಲಪ್ಪ ದೊಡ್ಡಮನಿ, ಶಾಮಾನಂದ ಪೋಜೇರಿ, ಮಹೇಂದ್ರ ಸಿಂ , ಆನಂದಕುಮಾರ ಮಗದುಮ್‌, ರಂಗಾಬದ್ದಿ, ಗವಿಸಿದ್ದಯ್ಯ ಅಮೋ ಮಠ, ಶ್ರೀಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ತೆಪ್ಪೋತ್ಸವದಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next