Advertisement

ದೇವರ ಪಾಕ ಶಾಲೆ-ಶ್ರೀ ಸಿದ್ಧಾರೂಢ ಮಠ, ಹುಬ್ಬಳ್ಳಿಸಿದ್ಧಾರೂಢ ಸಂತರ್ಪಣೆ

10:45 AM Jul 07, 2019 | Vishnu Das |

ನುಚ್ಚು ಸಾರು ಅಂದ್ರೆ, ನೆನಪಾಗೋದೇ ಸಿದ್ಧಾ ರೂಢ ಮಠದ ಪ್ರಸಾದ! ಉತ್ತರ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ, ಹುಬ್ಬಳ್ಳಿಯ ಈ ಕ್ಷೇತ್ರವು ಲಕ್ಷಾಂತರ ಭಕ್ತರಿಗೆ ಪ್ರಸಾದ ಉಣಬಡಿಸುವ ಭಕ್ತಿ ಕೇಂದ್ರ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದ ಅಸಂಖ್ಯಾತ ಭಕ್ತರು ಸಿದ್ಧಾರೂಢರ ದರ್ಶನ ಭಾಗ್ಯದೊಂದಿಗೆ “ಪ್ರಸಾದ’ ಸವಿದು ಕೃತಾರ್ಥರಾಗುತ್ತಾರೆ…

Advertisement

4 - 5 ಸಾವಿರ ಮಂದಿಗೆ ಊಟ
ಸಿದ್ಧಾರೂಢರ ಮಠದಲ್ಲಿ ಮಂಗಳವಾರದಿಂದ ಶನಿವಾರದವರೆಗೆ ನಿತ್ಯ 4-5 ಸಾವಿರ ಮಂದಿ ಪ್ರಸಾದ ಸೇವಿಸುತ್ತಾರೆ. ರವಿವಾರ ಮತ್ತು ಸೋಮವಾರ ಹಾಗೂ ಅಮಾವಾಸ್ಯೆಯಂದು ಪ್ರಸಾದ ಸೇವಿಸುವವರ ಸಂಖ್ಯೆ ಎಂಟತ್ತು ಸಾವಿರ ದಾಟುತ್ತದೆ.

ಬಾಣಸಿಗರೆಷ್ಟು?
ಪ್ರಸಾದ ತಯಾ ರಿಗೆ ಇಲ್ಲಿ 7 ಸ್ಟೀಮ್‌ ಬಾಯ್ಲರ್‌ಗಳ ಬಳಕೆಯಾಗುತ್ತೆ. ಒಟ್ಟು 10 ಬಾಣಸಿಗರು ಅಡುಗೆಯ ಹೊಣೆ ಹೊತ್ತಿದ್ದಾರೆ. 10 ವರ್ಷಗಳ ಹಿಂದೆ ಇಲ್ಲಿ ಕಟ್ಟಿಗೆ ಒಲೆ ಬಳಕೆಯಿತ್ತು.

ಅಕ್ಕಿ- ತರಕಾರಿ ಎಷ್ಟು ಬೇಕು?
ನಿತ್ಯ ದ ಉಪಾಹಾರಕ್ಕೆ 1 ಕ್ವಿಂಟಲ್‌ ಅಕ್ಕಿ, ಮಧ್ಯಾಹ್ನ ಊಟ ಹಾಗೂ ರಾತ್ರಿ ಊಟಕ್ಕೆ 3ರಿಂದ 4 ಕ್ವಿಂಟಲ್‌ ಅಕ್ಕಿ ಬೇಕು. ಟೊಮೇಟೋ, ಪಾಲಕ್‌, ಕೊತ್ತಂಬರಿ ಸೊಪ್ಪು ಸೇರಿ ನಿತ್ಯ 50ರಿಂದ 70 ಕೆಜಿ ತರಕಾರಿ ಬೇಕು.

ಅಮಾವಾಸ್ಯೆ ದಿನ…
ಅಮಾವಾಸ್ಯೆ, ಶಿವರಾತ್ರಿ ವೇಳೆ ನಡೆಯುವ ಜಾತ್ರೆ ಹಾಗೂ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವಾಗ 10 ಕ್ವಿಂಟಲ್‌ ಅಕ್ಕಿ, ರವೆ, ನೂರಕ್ಕೂ ಹೆಚ್ಚು ಕೆಜಿ ತರಕಾರಿ ಬಳಕೆಯಾಗುತ್ತದೆ.

Advertisement

ಭಲೇ, ಬಾಯ್ಲರ್‌!
25- 30 ನಿಮಿಷಗಳಲ್ಲಿ ಒಂದೂವರೆ ಕ್ವಿಂಟಲ್‌ ಅನ್ನ ಮಾಡುವ ಸಾಮರ್ಥಯ ಹೊಂದಿದ 3 ಸ್ಟೀಮ್‌ ಬಾಯ್ಲರ್‌, 1200 ಲೀ. ಸಾಂಬಾರು ರೆಡಿ ಮಾಡುವ 3 ಸ್ಟೀಮ್‌ ಬಾಯ್ಲರ್‌, 1200 ಲೀ. ಪಾಯಸ ಮಾಡುವ 1 ಬಾಯ್ಲರ್‌ಗಳು ಇಲ್ಲಿವೆ.

ಭಕ್ತಾದಿಗಳಿಂದ ಅಡುಗೆ ಕೆಲಸ
ಅಕ್ಕಿ- ಬೇಳೆ- ಕಾಳುಕಡಿ ಹಸನು ಮಾಡಲು ನಿತ್ಯ ತರಕಾರಿ ಸ್ವತ್ಛಗೊಳಿಸಿ ಅಡುಗೆಗೆ ಸಿದ್ಧ ಮಾಡಲು ಯಾವುದೇ ಕೆಲಸಗಾರರು ಇಲ್ಲಿಲ್ಲ. ಭಕ್ತಾದಿ ಗಳು ಸ್ವಯಂಪ್ರೇರಣೆಯಿಂದ ಈ ಸೇವೆಯಲ್ಲಿ ನಿರತರಾಗುತ್ತಾರೆ.

ಮೆನು ಏನು?
ಜೋಳದ ನುಚ್ಚೇ ಇಲ್ಲಿ ಫೇಮಸ್ಸು. ರವಿವಾರ- ಸೋಮವಾರ ಹಾಗೂ ಅಮಾವಾಸ್ಯೆ ದಿವಸಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಜೋಳದ ನುಚ್ಚು ಇದ್ದಿದ್ದೇ. ಇದರೊಂದಿಗೆ ಅನ್ನ- ಸಾರು- ತರಕಾರಿ(ಬಾಜಿ); ರವಿವಾರ- ಸೋಮವಾರ ಹಾಗೂ ಅಮಾವಾಸ್ಯೆ ಸಂದರ್ಭಗಳಲ್ಲಿ ರವೆ ಪಾಯಸ, ಅನ್ನ- ಸಾರು- ಪಲ್ಯ.
ನಿತ್ಯ ಬೆಳಗ್ಗಿನ ಉಪಾ ಹಾ ರ ಕ್ಕೆ ಪುಳಿಯೊಗರೆ, ಪಲಾವ್‌, ಚಿತ್ರಾನ್ನ.

ನಿಮಗೆ ಗೊತ್ತಾ?
* ಸಿದ್ಧಾರೂಢರ ಮಠದಲ್ಲಿ ಪ್ರಸಾದ ಸೇವಿಸಲೆಂದೇ ಸಾವಿರಾರು ಕಿ.ಮೀ. ದೂರದಿಂದ ಬರುತ್ತಾರೆ. ಇಲ್ಲಿಯ ಪ್ರಸಾದ ಸೇವಿಸಿದರೆ ಮೈಯೊಳಗಿನ ಜಡ್ಡೆಲ್ಲಾ ಬಿಟ್ಟೋಗುತ್ತದೆ ಎಂಬ ಕೃತಾರ್ಥ ಭಾವ ಭಕ್ತರಲ್ಲಿದೆ.
* ಭಕ್ತರು ತರುವ ಅಕ್ಕಿ, ಗೋಧಿ, ಬೇಳೆ, ಕಾಳುಕಡಿ, ಬೆಲ್ಲ ಸೇರಿದಂತೆ ಇನ್ನಿತರ ಸಾಮಾನುಗಳಿಂದಲೇ ಇಲ್ಲಿ ಅಡುಗೆ ತಯಾ ರಿ.
* ಮಠಕ್ಕೆ ಬರುವ ಪ್ರತಿಯೊಂದೂ ಸಾಮಾನುಗಳ ಲೆಕ್ಕ ಇಲ್ಲಿ ಪಕ್ಕಾ.

ಸಂಖ್ಯಾ ಸೋಜಿಗ
10- ಬಾಣಸಿಗರಿಂದ ಅಡುಗೆ ಸಿದ್ಧತೆ
40- ನಿಮಿ ಷ ದಲ್ಲಿ 4 ಕ್ವಿಂಟಲ್‌ ಅನ್ನ ಆಗು ತ್ತೆ
1200- ಲೀಟರ್‌, ನಿತ್ಯ ತಯಾ ರಾ ಗುವ ಸಾಂಬಾ ರು
3- ಕ್ವಿಂಟಲ್‌ ಆಲೂ ಪಲ್ಯ, ಅಮಾವಾಸ್ಯೆ ದಿನ
30,00,000 ಭಕ್ತರು, ಕಳೆದವರ್ಷ ಪ್ರಸಾದ ಸೇವಿಸಿ ದ್ದಾ ರೆ
600- ಜನರಿಗೆ ಏಕಕಾಲಕ್ಕೆ ಅನ್ನಸಂತರ್ಪಣೆ

ಪ್ರಸಾದ ಸಮಯ
ಉಪಾ ಹಾ ರ: ಬೆಳಗ್ಗೆ 08- 12
ಮಧ್ಯಾಹ್ನ ಊಟ: 12.30ರಿಂದ ಸಂಜೆ 5
ರಾತ್ರಿ ಊಟ: 08-30ರಿಂದ 11

ಅನ್ನದಾಸೋಹ, ಜ್ಞಾನದಾಸೋಹ, ಆರೋಗ್ಯ ದಾಸೋಹ- ಇವು ಮೂರೂ ದಾಸೋಹಗಳು ನಮ್ಮ ಮಠದಲ್ಲಿ ನಿತ್ಯ ನಡೆಯುತ್ತವೆ.
-ಡಾ| ಬಸವರಾಜ ಸಂಕನಗೌಡ, ಸಿದ್ಧಾ ರೂಢ ಮಠ

Advertisement

Udayavani is now on Telegram. Click here to join our channel and stay updated with the latest news.

Next