ಧಾರವಾಡ; ಕಾಂಗ್ರೇಸ್ ನಲ್ಲಿ ಸದ್ಯಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ನಾನು ಸಿಎಂ, ನಾನೇ ಸಿಎಂ ಎನ್ನುವ ಸ್ಪರ್ಧೆ ಆರಂಭಗೊಂಡಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಶನಿವಾರ ಇಲ್ಲಿನ ಜಿ.ಪಂ. ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಕಾಂಗ್ರೇಸ್ ಅದೋಗತಿಗೆ ಇಳಿದಿದೆ. ಅದೊಂದು ಮುಳುಗುವ ಹಡಗಿನಂತಾಗಿದೆ. ಅದರಲ್ಲಿ ಯಾರು ಉಳಿಯಲು ಇಷ್ಟ ಪಡುತ್ತಿಲ್ಲ. ಹೀಗಾಗಿ ಡಿಕೆಶಿ ದಿಕ್ಕು ತಪ್ಪಿ ಕಂಗಾಲಾಗಿದ್ದಾರೆ ಎಂದರು.
ಇನ್ನು ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರಲ್ಲ ಅದರಲ್ಲೂ ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯೆ ಸಿಎಂ ಯುದ್ದ ಶುರುವಾಗಿದೆ. ಆದರು ಈ ಇಬ್ಬರೂ ಸಿಎಂ ಕನಸು ಕಾಣುತ್ತಿದ್ದಾರೆ. ಜನ ಇವರನ್ನು ಆಯ್ಕೆ ಮಾಡಿಲ್ಲ, ಇವರ ಪಕ್ಷದ ಹೈ ಕಮಾಂಡ್ ಕೂಡಾ ಇವರನ್ನ ನೇಮಿಸಿಲ್ಲ ಆದರೂ ಇವರು ನಾನು ಸಿಎಂ, ನಾನು ಸಿಎಂ ಎನ್ನುತ್ತಿದ್ದಾರೆ ಎಂದರು.
ಇದನ್ನೂ ಓದಿ:ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್
ಮಾತಿಗೊಮ್ಮೆ ಧಮ್ ಇದ್ರೆ…ಧಮ್ ಇದ್ರೆ…ಎನ್ನುವ ಡಿಕೆಶಿ, ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡುತ್ತಿರುವ ಕುರಿತು ಯಾಕೆ ಕ್ರಮ ಕೃಗೊಳ್ಳುತ್ತಿಲ್ಲ.
ಧಮ್ ಇದ್ದರೆ ಕ್ರಮ ಕೈಗೊಳ್ಳಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.