Advertisement

ಆಂತರಿಕ ಕಚ್ಚಾಟದಿಂದ ಸರ್ಕಾರ ಬಿದ್ದರೆ ನಾವು ಚುನಾವಣೆ ಎದುರಿಸಲು ಸಿದ್ಧ : ಸಿದ್ದರಾಮಯ್ಯ

02:47 PM Oct 20, 2020 | sudhir |

ಬಾಗಲಕೋಟೆ: ಬಿಜೆಪಿ ಸರ್ಕಾರ ಬಿದ್ದೋದ್ರೆ ನಾವು ಚುನಾವಣೆ ಎದುರಿಸಲು ಸಿದ್ಧ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ದಿನ ಯಡಿಯೂರಪ್ಪ ಸಿಎಂ ಆಗಿರಲ್ಲ ಎಂಬ ಮಾತು ಸದ್ಯ ಹೆಚ್ಚಾಗಿ ಕೇಳಿ ಬರುತ್ತಿದೆ. ಯಡಿಯೂರಪ್ಪನವರನ್ನು ತೆಗೆಯಬೇಕೆಂದು ಬಹಳ ದೊಡ್ಡ ಚರ್ಚೆ ನಡೆದಿದೆ. ನಾವಂತೂ ಸರ್ಕಾರವನ್ನು ಬೀಳಿಸೋಕೆ ಹೋಗಲ್ಲ. ಒಂದು ವೇಳೆ ಅವರ ತಿಕ್ಕಾಟದಿಂದಲೇ ಸರ್ಕಾರ ಬಿದ್ದು ಹೋದರೆ ನಾವು ಚುನಾವಣೆ ಎದುರಿಸಲು ಸಿದ್ದರಿದ್ದೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸುವ ಚಚೆ೯ ನಡೆಯುತ್ತಿರುವುದು ನಿಜ. ಆದರೆ ಯಾವಾಗ ಇಳಿಸ್ತಾರೆ, ಯಾರು ಸಿಎಂ ಆಗ್ತಾರೆ ಅಂತ ನನಗೆ ಗೊತ್ತಿಲ್ಲ, ಚಚೆ೯ಯಂತೂ ನಡೀತಾ ಇದೆ ಎಂದರು.

ಇನ್ನು, ಉತ್ತರ ಕನಾ೯ಟಕದವರೇ ಸಿಎಂ ಆಗ್ತಾರೆ ಎನ್ನುವ ಯತ್ನಾಳ ಹೇಳಿಕೆಗೆ,  ಅದು ಅವರ ಪಕ್ಷದ ವಿಚಾರ, ನಾನೇಕೆ ಮಾತನಾಡಲಿ, ಯಡಿಯೂರಪ್ಪನವರೆ ಮಾತನಾಡಲಿ ಎಂದು ಹೇಳಿದರು.

ಇದನ್ನೂ ಓದಿ:ಆಸ್ತಿಯಾಗುವವರನ್ನು ಮಾತ್ರ ಸೇರ್ಪಡೆ, ಹೊರೆಯಾಗುವವರಲ್ಲ:ಎಂಬಿಪಿ, ಕುಲಕರ್ಣಿಗೆ CT ರವಿ ಟಾಂಗ್

ಸಿಎಂ, ಯತ್ನಾಳ ಕ್ಷೇತ್ರದ ಅನುದಾನ ಕಡಿತದ ಬಗ್ಗೆ ಅಸಮಾಧಾನ ತೋರಿದ ವಿಚಾರವಾಗಿ ಮಾತನಾಡಿದ ಅವರು ನಾವು ಸತ್ಯ ಹೇಳ್ತಿದ್ವಿ, ಪಾಪ ಅವರಿಗೂ ಬಿಸಿ ಮುಟ್ಟಿದೆ. ಈಗ ಅವರು ಕೂಡ ಸತ್ಯ ಹೇಳೋಕೆ ಶುರು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ, ನನ್ನ ಕಣ್ಣೀರಿಗೆ ಕಾಂಗ್ರೆಸ್ ಕಾರಣವೆಂದ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಲೇವಡಿ ಮಾಡಿದರು. ಕುಣಿಯಲಾರದವರು ನೆಲ ಡೊಂಕು ಅಂತಾರೆ. ಮುಖ್ಯಮಂತ್ರಿಯಾಗಿ ಕೆಲಸ ಮಾಡಲಿಕ್ಕೆ ಆಗದೇ ಇರೋರು ಈ ತರ ಹೇಳ್ತಾ ತಿರುಗುತ್ತಾರೆ. ಈ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗೋದಿಲ್ಲ‌.  ನಾನು ಹಿಂದೆ ಅನೇಕ ಸಾರಿ ಹೇಳಿದ್ದೇನೆ.. ಅವರು ಈಗ ಮತ್ತೆ ಮತ್ತೆ ಪ್ರಸ್ತಾಪ ಮಾಡ್ತಿದ್ದಾರೆ ಎಂದರು.

ಉಪ ಚುನಾವಣೆಯಲ್ಲಿ ನಾವು ಎರಡು ಕ್ಷೇತ್ರ ಗೆದ್ದಾಗಿದೆ, ರಿಸಲ್ಟ್ ಒಂದೇ ಬಾಕಿ ಎಂದ ಯಡಿಯೂರಪ್ಪ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಆ ಎರಡು ಕ್ಷೇತ್ರಗಳೇನು ಸಿಎಂ ಜೇಬಿನಲ್ಲಿದ್ದಾವಾ..? ಎಂದು ಹೇಳುವ ಮೂಲಕ ಸಿಎಂ ಬಿಎಸ್​ವೈಗೆ ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next