Advertisement
ಶನಿವಾರ ಸುದ್ದಿಗಾರರ ಪ್ರಶ್ನೆಗೆ ಸಿದ್ಧರಾಮಯ್ಯ ಉತ್ತರಿಸಿ, “ಬಾಂಬ್ ಸ್ಫೋಟ ವಿಚಾರವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಕೆ ಮಾಡುತ್ತಿದ್ದಾರೆ’ ಎಂಬುದಾಗಿ ಡಿಕೆಶಿ ಹೇಳಿಕೆ ನೀಡಿದ್ದಾರೆಯೇ ಹೊರತು ಭಯೋತ್ಪಾದನೆಯನ್ನು ಬೆಂಬಲಿಸಿ ಹೇಳಿಕೆ ನೀಡಿಲ್ಲ. ಆದರೆ ಬಿಜೆಪಿಯವರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು.
ಬಿಜೆಪಿಯದ್ದು ಡಬಲ್ ಎಂಜಿನ್ ಸರಕಾರವಿದೆ. ಭಯೋತ್ಪಾದನೆ ಸೇರಿದಂತೆ ಕಾನೂನು ಬಾಹಿರವಾದ ಎಲ್ಲ ಚಟುವಟಿಕೆಗಳನ್ನು ಅವರು ಹತ್ತಿಕ್ಕಲಿ. ಕೇವಲ ಜನರನ್ನು ಭಾವನಾತ್ಮಕ ವಿಚಾರದಲ್ಲಿ ಪ್ರಚೋದನೆ ಮಾಡಲು ಅವರಿಗೆ ಅಧಿಕಾರ ಕೊಟ್ಟಿದ್ದಲ್ಲ ಎಂದು ಸಿದ್ಧರಾಮಯ್ಯ ಹೇಳಿದರು. ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ
ಕರಾವಳಿಯಲ್ಲಿ ನಡೆಯುತ್ತಿರು ನೈತಿಕ ಪೊಲೀಸ್‌ಗಿರಿ ಘಟನೆಗಳು ಖಂಡನೀಯ. ಇದಕ್ಕೆ ಕಾರಣರಾದವರ ಮೇಲೆ ಕಠಿನ ಕ್ರಮ ಕೈಗೊಳ್ಳ ಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಇದ್ದಾರೆ. ಬೇರೆಯವರ ಮಧ್ಯಪ್ರವೇಶಕ್ಕೆ ಸರಕಾರ ಅವಕಾಶ ನೀಡಬಾರದು. ಕ್ರಿಯೆಗೆ ಪ್ರತಿಕ್ರಿಯೆ ಎಂಬುದಾಗಿ ಸಿಎಂ ನೀಡಿದ್ದ ಹೇಳಿಕೆಯ ಅರ್ಥವೇನು, ಒಂದು ಕೊಲೆಗೆ ಪ್ರತಿಯಾಗಿ ಮತ್ತೂಂದು ಕೊಲೆ ಮಾಡಲು ಕಾನೂನು ಹೇಳುತ್ತದೆಯೇ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
Related Articles
Advertisement