Advertisement

ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಪೂರ್ವದಲ್ಲಿ ಸೂರ್ಯ ಹುಟ್ಟುವಷ್ಟೇ ಸತ್ಯ: ಸಿದ್ದರಾಮಯ್ಯ

08:01 PM Feb 11, 2023 | Team Udayavani |

ವಿಜಯಪುರ : ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಪೂರ್ವದಲ್ಲಿ ಸೂರ್ಯ ಹುಟ್ಟುವಷ್ಟೇ ಸತ್ಯ. ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ನೀರಾವರಿ ಯೋಜನೆಗಳಿಗೆ ಐದು ವರ್ಷದಲ್ಲಿ 2 ಲಕ್ಷ ಕೋಟಿ ರೂ. ಖರ್ಚು ಮಾಡಲಿದ್ದೇ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಶನಿವಾರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2013 ರ ಚುನಾವಣೆಯಲ್ಲಿ ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ‌ನಾನು ಮುಖ್ಯಮಂತ್ರಿಯಾಗಿ ಈಡೇರಿಸಿದ್ದೇನೆ ಎಂದರು.

ಅಧಿಕಾರಕ್ಕೆ ಬಂದಮೇಲೆ
ಸಾಲ ಮನ್ನಾ ಮಾಡುವುದಾಗಿ ರಕ್ತದಲ್ಲಿ ಬರೆದು ಕೊಡುವುದಾಗಿ ಭರವಸೆ ನೀಡಿದ್ದ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ಮರೆತುಬಿಟ್ಟರು. ಆದರೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರ 8500 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ. ವಿಜಯಪುರ ಜಿಲ್ಲೆ ಒಂದರಲ್ಲೇ ರೈತರ 1300 ಕೋಟಿ ರೂ. ಸಾಲ ಮನ್ನಾ ಆಗಿರುವುದು ನಮ್ಮ ಸರ್ಕಾರದಲ್ಲಿ ಎಂದರು.

ಚೌಕಿದಾರನ ಬಿಜೆಪಿ ಪಕ್ಷದ ಕರ್ನಾಟಕ ಸರ್ಕಾರದ ಅವಧಿಯಲ್ಲಿ ವಿಧಾನಸೌಧ ಕಛೇರಿಗಳಲ್ಲಿ ಪ್ರತಿ ಕೆಲಸಕ್ಕೂ ಇಂತಿಷ್ಟು ಎಂದು ಲಂಚದ ಬೋರ್ಡ ಹಾಕಿದ್ದಾರೆ. ವಿಧಾನಸೌಧದ ಕಲ್ಲುಗಳು ಲಂಚ ಲಂಚ ಎಂದು ಕೂಗೂತ್ತಿವೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ನೀರಾವರಿ 1 ಲಕ್ಷ 56 ಸಾವಿರ ಕೋಟಿ ರೂ. ಖರ್ಚು ಮಾಡುವ ಭರವಸೆ ನೀಡಿ, ಅಧಿಕಾರಕ್ಕೆ ಬಂದಮೇಲೆ ಬಿಜೆಪಿ ಈಡೇರಿಸದೇ ವಚನ ಭ್ರಷ್ಟತನ ಮಾಡಿತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ರಾಜ್ಯದ ನೀರಾವರಿಗೆ 5 ವರ್ಷದಲ್ಲಿ 2 ಲಕ್ಷ‌ ಕೋಟಿ ರೂ.‌ ಖರ್ಚು ಮಾಡುತ್ತೇವೆ. ವಚನ ಪಾಲಿಸದಿದ್ದರೆ ಒಂದು ಕ್ಷಣವೂ ಅಧಿಕಾರದಲ್ಲಿ ಇರುವುದಿಲ್ಲ ಎಂದು ಸಿದ್ದರಾಮಯ್ಯ ಘೋಷಿಸಿದರು.

Advertisement

ಅಚ್ಚೇ ದಿನ್ ಅಯೆಂಗೇ ಎಂದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ಬೆಲೆ ಏರಿಕೆ ಮಾಡಿದ್ದೇ ಸಾಧನೆ. ಇಂಥ ಭ್ರಷ್ಟ ಹಾಗೂ ವಚನ ಭ್ರಷ್ಟ ಬಿಜೆಪಿ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕೆ, ಬೇಡವೇ

ಮುಂದಿನ ಚುನಾವಣೆಯಲ್ಲಿ ಯಶವಂತ್ರಾಯಗೌಡ ಪಾಟೀಲ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವುದು ನಿಮ್ಮ ಮೇಲಿದೆ. ಗೆಲ್ಲಿಸಿದ ಮೇಲೆ ಸಚಿವರಾಗಿ ಮಾಡುವುದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ

ನಾನು ಮುಖ್ಯಮಂತ್ರಿ ಆಗಿದ್ದಾಗ ಸಭ್ಯ ರಾಜಕೀಯ ನಾಯಕ ಯಶವಂತ್ರಾಯಗೌಡ ಶಾಸಕರಾಗಿದ್ದರು. ಅವರ ಆಗ್ರಹದ ಮೇರೆಗೆ ಇಂಡಿ ಕ್ಷೇತ್ರಕ್ಕೆ 3500 ಕೋಟಿ ಅನುದಾನ ನೀಡಿದ್ದೇನೆ ಎಂದರು.

ನನ್ನ ಸರ್ಕಾರ ಇಂಡಿ ಭಾಗದಲ್ಲಿ ನೆನೆಗುದಿಗೆ ಬಿದ್ದಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸಲು 40 ಕೋಟಿ ರೂ. ಅನುದಾನ ನೀಡಿದ್ದೆ. ಇದೀಗ ಸದರಿ ಕಾರ್ಖಾನೆ ಎಥೆನಾಲ್ ಇಲ್ಲದೆಯೂ ಸರ್ಕಾರದ ಎಫ್.ಆರ್.ಪಿ. ದರಕ್ಕಿಂತ ಹೆಚ್ಚಿನ ಮೌಲ್ಯದ ಬೆಲೆಯನ್ನು ರೈತರಿಗೆ ನೀಡಿದೆ. ತಿಂದುಹಾಕುವ ಮನಸ್ಥಿತಿ ಇಲ್ಲದ ಯಶವಂತ್ರಾಯಗೌಡ ಪಾಟೀಲ ಅವರ ರಾಜಕೀಯ ಬದ್ಧತೆ, ರೈತ ಪರ ಕಾಳಜಿ ಇದಕ್ಕೆ ಕಾರಣವಾಗಿದೆ. ಭವಿಷ್ಯದಲ್ಲಿ ಎಥೆನಾಲ್ ಸೇರಿದಂತೆ ಉಪ ಉತ್ಪನ್ನ ತಯಾರಿಸಿ ಅಭಿವೃದ್ಧಿ ಸಾಧಿಸಿ ಎಂದು ಸಲಹೆ ನೀಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಶವಂತ್ರಾಯಗೌಡ ಅವರ ಒತ್ತಾತದ ಕಾರಣ ಲಿಂಬೆ ಅಭಿವೃದ್ಧಿ ಮಂಡಳಿ ಮಾಡುವ ಭರವಸೆ ಈಡೇರಿಸಿದ್ದೇನೆ ಎಂದರು.

ಕ್ಷೇತ್ರದ ಅಭಿವೃದ್ಧಿ ಹೊರತಾಗಿ ಅವರು ಎಂದೂ ವಯಕ್ತಿಕ ಲಾಭಕ್ಕಾಗಿ ನನ್ನ ಬಳಿ ಬಂದವರಲ್ಲ. ಇಂಡಿ ಭಾಗದ ಅಭಿವೃದ್ಧಿಗೆ ಅವರು ಕೇಳಿದ ಎಲ್ಲ ಯೋಜನೆಗಳಿಗೆ ಅನುದಾನ ನೀಡಿದ್ದೇನೆ ಎಂದರು.

ಕ್ಷೇತ್ರದ ಅಭಿವೃದ್ಧಿ ಚಿಂತನೆ, ಕಾಂಗ್ರೆಸ್ ಪಕ್ಷದ ಸಿದ್ದಾಂತ ಮೆಚ್ಚಿ ಸಾವಿರಾರು ಜನರು ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.

ಬಿಜೆಪಿ ವಿರುದ್ಧ ಎಂ.ಬಿ. ಪಾಟೀಲ ವಾಗ್ದಾಳಿ

ಬಿಜೆಪಿ ಸರ್ಕಾರದ ದುರಾಡಳಿತವನ್ನು ಜನರ ಮುಂದಿಡಲು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಮ್ಮಕೊಂಡಿದೆ. ದೇಶಕ್ಕಾಗಿ‌ ಕಾಂಗ್ರೆಸ್ ಮಾಡಿದ್ದೇನು ಎಂದು ಪ್ರಶ್ನಿಸುವ ಬಿಜೆಪಿ ನಾಯಕರು ದೇಶಕ್ಕೆ ನೀಡಿದ ಕೊಡುಗೆ ಏನು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಇಂಡಿ ಪಟ್ಟಣದಲ್ಲಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಮಹಾನ್ ನಾಯಕರು ಕಾಂಗ್ರೆಸ್ ನವರು. ಸ್ವಾತಂತ್ರ್ಯದ ನಂತರ ದೇಶದ ಸಮಗ್ರ ಅಭಿವೃದ್ಧಿಗಾಗಿ ಜಲಾಶಯಗಳ ನಿರ್ಮಾಣ, ವಿಮಾನ ನಿಲ್ದಾಣಗಳಿ, ರೈಲು ನಿಲ್ಸಾಣ ಮಾರ್ಗ, ಟೆಲಿಕಾಂ ಸೇರಿದಂತೆ ಆಧುನಿಕ ತಂತ್ರಜ್ಞಾನದ ಅಭಿವೃದ್ಧಿ ಸೇರಿದಂತೆ ದೇಶಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆ. ಆದರೆ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸರ್ಕಾರ ಕಪ್ಪು ಹಣ ತರುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಎಂಟು ವರ್ಷದಲ್ಲಿ ಕಾಂಗ್ರೆಸ್ ಕಾಲದಲ್ಲಿ ಮಾಡಿದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯರಿಗೆ ಮಾರಾಟ ಮಾಡಿದ್ದ ಬಿಜೆಪಿ ಸರ್ಕಾರದ ಸಾಧನೆ ಎಂದು ಲೇವಡಿ ಮಾಡಿದರು.

ನ ಖಾವೂಂಗಾ, ಖಾನೆ ದೂಂಗಾ ಎಂದ ಮೋದಿ ಅವರು ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ 40 ಪರ್ಸೆಂಟೇಸ್ ಬಿಜೆಪಿ ಸರ್ಕಾರದ ಬಗ್ಗೆ ಮೌನ ವಹಿದ್ದೇಕೆ. ಅಚ್ಚೇದಿನ್ ತರುತ್ತೇನೆಂದು ಅಧಿಕಾರಕ್ಕೆ ಬಂದ ಮೇಲೆ ನೋಟುಗಳನ್ನು ಅಮಾನ್ಯ ಮಾಡಿ, ಎಲ್ಲ ಬೆಲೆ ಏರಿದ್ದೇ ಅಚ್ಚೇ ದಿನ್ ಎಂದು ಲೇವಡಿ ಮಾಡಿದರು.

ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಮೇಲ್ಮನೆಯ ವಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಮಾಜಿ ಸಚಿವರಾದ ಉಮಾಶ್ರೀ, ಶಿವಾನಂದ ಪಾಟೀಲ, ಸಿ.ಎಸ್.ನಾಡಗೌಡ, ಮಾಜಿ ಶಾಸಕರಾದ ಡಾ.ಎಂ.ಎಸ್. ಬಾಗವಾನ, ರಾಜು ಆಲಗೂರ, ಶರಣಪ್ಪ ಸುಣಗಾರ, ಕಾಂಗ್ರೆಸ್ ಮುಖಂಡರಾದ ಅಶೋಕ ಮನಗೂಳಿ, ಅಬ್ದುಲ್ ಹಮೀದ್ ಮುಶ್ರೀಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:2 ವಿಭಾಗಗಳ 33 ಕ್ಷೇತ್ರಗಳನ್ನು ಗೆಲ್ಲಲು ಅಮಿತ್ ಶಾ ಸೂತ್ರ ; ಮಂಗಳೂರಿನಲ್ಲಿ ಮಹತ್ವದ ಸಭೆ 

Advertisement

Udayavani is now on Telegram. Click here to join our channel and stay updated with the latest news.

Next