ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಘ ಪರಿವಾರದ ಕಪಿಮುಷ್ಠಿಯಲ್ಲಿ ಇದ್ದಾರೆ. ಅವರಿಗೆ ಜನಹಿತ ಬೇಕಿಲ್ಲ. ಯಾರಾದರೂ ಮಂಡಕ್ಕಿ ಮೇಲೆ ತೆರಿಗೆ ಹಾಕ್ತಾರೇನ್ರಿ ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ನೇತೃತ್ವದ ಜಿಎಸ್ ಸಿ ಕೌನ್ಸಿಲ್ ಸಭೆಯಲ್ಲಿ ಹಾಲು ಮೊಸರು ಮಂಡಕ್ಕಿ ಅಕ್ಕಿ ಜಿಎಸ್ಟಿ 5 % ಹಾಕಿದ್ದಾರೆ. ಬೊಮ್ಮಾಯಿ ಜಿಎಸ್ಟಿ ಸಬ್ ಕಮಿಟಿ ಚೇರ್ಮನ್ ಆದ ಮೇಲೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಮಂಡಕ್ಕಿ ಮೇಲೆ ಯಾರಾದ್ರೂ ತೆರಿಗೆ ಹಾಕ್ತಾರೇನ್ರಿ? ಬಡವರ ರಕ್ತ ಕುಡಿಯುವ ಕೆಲಸ ಈ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.
ವಿಧಾನಸೌಧ ಇವರ ಕಾಲದಲ್ಲಿ ವ್ಯಾಪಾರ ಸೌಧವಾಗಿದೆ. ಮೂರು ವರ್ಷಗಳಲ್ಲಿ ಹೊಸದಾಗಿ ಒಂದು ಮನೆ ಕಟ್ಟಿಸೋದಕ್ಕಾಗಲಿಲ್ಲ ಇವರ ಕೈಲಿ.ಚುನಾವಣಾ ವರ್ಷ ಆಗಿದ್ದರಿಂದ ಈ ಸಲ ಮನೆ ಕಟ್ಟಿಸ್ತೀವಿ ಅಂತಿದ್ದಾರೆ. ಡಬಲ್ಇಂಜಿನ್ ಸರ್ಕಾರ ಅಂತ ಬಹಳ ಬೆನ್ನು ತಟ್ಟಿಕೊಳ್ತಾರೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡಿದ ಅನ್ಯಾಯ ಬೇರೆ ಯಾವಕಾಲದಲ್ಲೂ ಮಾಡಿರಲಿಲ್ಲ. 14 ನೇ ಹಣಕಾಸು ಆಯೋಗದಲ್ಲಿ 42% ಕೊಟ್ಟಿದ್ದರು. ನಮಗೆ 42% ಬರಬೇಕಾಗಿತ್ತು. ಆದರೆ ಐದು ವರ್ಷದಲ್ಲಿ ಬರೀ 31% ಹಣ ಮಾತ್ರ ಬಂದಿದೆ. ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ : ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಕಾನೂನು, ಸಂವಿಧಾನವನ್ನು ಓದಬೇಕು – ಮಾಜಿ ಸಚಿವೆ ಉಮಾಶ್ರೀ
5000 ಕೋಟಿ ಹೆಚ್ಚುವರಿ ಹಣವನ್ನು ನಿರ್ಮಲಾ ಸೀತಾರಾಮನ್ ಕೊಡಲಿಲ್ಲ. ಇದನ್ನು ಯಾರೂ ಕೂಡ ಪ್ರಶ್ನೆ ಮಾಡುವುದಕ್ಕೆ ಹೋಗಲಿಲ್ಲ. ಯಡಿಯೂರಪ್ಪ ಯಾವಾಗಲೂ ಜಿಎಸ್ಟಿ ಕೌನ್ಸಿಲ್ ಗೆ ಹೋಗಲಿಲ್ಲ. ಬೊಮ್ಮಾಯಿ ಯಾವತ್ತೂ ಜಿಎಸ್ಟಿ ಕೌನ್ಸಿಲ್ ನಲ್ಲಿ ಒತ್ತಾಯವೇ ಮಾಡಲಿಲ್ಲ. ರಾಜ್ಯಕ್ಕೆ ಹಣಕಾಸಿನ ದೊಡ್ಡ ಹೊಡೆತ ಬೀಳುತ್ತಿದೆ. ಜಿಎಸ್ಟಿ ಪರಿಹಾರ 14% ನಷ್ಟ ಆಗುತ್ತಿದೆ. ಈಗ ಜಿಎಸ್ಟಿ ಪರಿಹಾರ ನಿಂತು ಹೋಯ್ತುಇದೇ ಬಸವರಾಜ ಬೊಮ್ಮಾಯಿ ಜಿಎಸ್ಟಿ ಕೌನ್ಸಿಲ್ ಸದಸ್ಯರು. ಆದರೆ ಬೊಮ್ಮಾಯಿ ಕೇಂದ್ರದ ಆಣತಿಯಂತೆ ಒಪ್ಪಿಕೊಂಡು ಸುಮ್ಮನಾಗಿದ್ದಾರೆ. ಜಿಎಸ್ಟಿ ಪರಿಹಾರ ನಮಗೆ ಈಗ ಬರುತ್ತಲೇ ಇಲ್ಲ ಎಂದು ಟೀಕಿಸಿದ್ದಾರೆ.
2018 ರಲ್ಲಿ ಇವರು ಕೊಟ್ಟಿದ್ದ ಎಷ್ಟು ಭರವಸೆ ಈಡೇರಿಸಿದ್ದಾರೆ? 20% ಕೂಡ ಈಡೇರಿಸಿಲ್ಲ. 150 ಲಕ್ಷ ಕೋಟಿ ರೂ. ಐದು ವರ್ಷಗಳಲ್ಲಿ ನೀರಾವರಿಗೆ ಖರ್ಚು ಮಾಡ್ತೇವೆ ಅಂದಿದ್ರು. 50 ಸಾವಿರ ಕೋಟಿ ಕೂಡ ಇವರು ಖರ್ಚು ಮಾಡಿಲ್ಲ. ಜನರಿಗೆ ದೊಡ್ಡ ದ್ರೋಹ ಮಾಡಿದ ಸರ್ಕಾರ ಇದು. ಅನ್ಯಾಯ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಟೀಕಿಸಿದರು.