Advertisement
ಜಿಲ್ಲಾ ಬಂಜಾರ ಸಮುದಾಯ ಭವನ ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಕೋವಿಡ್ ಬಂದಿದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ.
Related Articles
Advertisement
ಇನ್ನೂ ಡ್ರಗ್ಸ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು ಮೊನ್ನೆ ಒಂದೇ ದಿನ ಸಿಸಿಬಿಯವರು ಇನ್ನೂರು ಕೆ.ಜಿ.ಗಾಂಜಾ ವನ್ನು ಕೇಂದ್ರದ ನರ್ಕೋಟಿಕ್ಸ್ ಟೀಂನವರು ಸೀಜ್ ಮಾಡಿದ್ದಾರೆ. ಅವರಿಗೆ ಕೆಲವೊಂದು ಸುಳಿವು ಸಿಕ್ಕಿವೆ. ಡ್ರಗ್ಸ್ ಮಾರಾಟ, ಡ್ರಗ್ಸ್ ಸೇವನೆಯಂಥಾ ಕಾನೂನು ಬಾಹಿರ ಕೆಲಸಕ್ಕೆ ಕೈ ಹಾಕಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವದು. ಅಷ್ಟೇ ಅಲ್ಲದೆ ಅಂಥವರಿಗೆ ಜೈಲು ಶಿಕ್ಷೆ ಆಗೋದಕ್ಕೆ ಇರೋ ವಿಶೇಷ ಕಾನೂನಿನ ಅಡಿಯಲ್ಲಿ ಶಿಕ್ಷೆ ಕೊಡಿಸಲಾಗುವುದು ಎಂದರು.
ಹಲವಾರು ವರ್ಷದಿಂದ ಡ್ರಗ್ ಮಾಫಿಯಾಗೆ ಯಾವುದೇ ಕ್ರಮವನ್ನ ಸರ್ಕಾರಗಳು ತೆಗೆದುಕೊಂಡಿಲ್ಲ. ನಾನು ವಾರ್ ಆನ್ ಡ್ರಗ್ ಅಂತಾ ಡಿಕ್ಲೇರ್ ಮಾಡಿದ್ದೇನೆ. ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಇಲ್ಲಿಗೆ ನಿಲ್ಲೋದಿಲ್ಲ, ಡ್ರಗ್ ಗಳು ನಾನಾ ರೂಪದಲ್ಲಿ ಬರುತ್ತಾ ಇವೆ. ಚಾಕೊಲೇಟ್, ಸಣ್ಣ ಪೇಪರ್, ಟ್ಯಾಬ್ಲೆಟ್ ರೂಪದಲ್ಲಿ ಡ್ರಗ್ ಬರುತ್ತಿವೆ, ಎಲ್ಲವನ್ನೂ ನಿಯಂತ್ರಣ ಮಾಡುವ ರೂಪದಲ್ಲಿ ಜಾಲ ಬೀಸಿದ್ದೇವೆ.
ವಿದೇಶಿಯರು ಹೆಚ್ಚಾಗಿ ಇದರಲ್ಲಿ ತೊಡಗಿದ್ದಾರೆ, ಇನ್ನೂ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡಿ ಬೇರು ಸಮೇತ ಕಿತ್ತು ಹಾಕುವ ಕೆಲಸ ಮಾಡಲಾಗುವುದು.
ಶಾಲಾ ಕಾಲೇಜುಗಳು ಆರಂಭವಾದ ಮೇಲೆ ಈ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮ ಆಯೋಜಿಲಾಗುವುದು. ಶಿಕ್ಷಣ ಸಂಸ್ಥೆ, ಹಾಸ್ಟೇಲ್ ಗಳಲ್ಲಿ ಡ್ರಗ್ ಸಿಕ್ಕರೆ ಅಲ್ಲಿನ ಆಡಳಿತ ಮಂಡಳಿಯನ್ನೇ ಹೊಣೆಗಾರಿಕೆ ಮಾಡಲಾಗುವುದು ಎಂದು ಈಗಾಗಲೆ ಹೇಳಿದ್ದು ಅದನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುವುದು ಎಂದರು.