ಬಾಗಲಕೋಟೆ: ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ನಿರೀಕ್ಷಿತ. ಬೈಡನ್ ಗೆಲ್ಲುತ್ತಾರೆಂಬುದು ಮೊದಲೇ ಗೊತ್ತಿತ್ತು.
ಅಮೆರಿಕದಲ್ಲಿ ಮೋದಿ ಆಟ ಏನೂ ನಡೆದಿಲ್ಲ. “ಅಬ್ ಕೀ ಬಾರ್ ಟ್ರಂಪ್ ಸರ್ಕಾರ’ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈಗ ಬೈಡನ್ ಗೆಲುವು ಸಾಧಿಸಿದ್ದಾರೆ ಎಂದು ಮಾಜಿ ಸಿಎಂ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಗುಳೇದಗುಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯಿಂದ ಓಟ್‌ಗಳು ಬಂದಿಲ್ಲ. ಅಮೆರಿಕದ
ಭಾರತೀಯರು ಹೆಚ್ಚಾಗಿ ಬೈಡನ್‌ಗೆ ಮತ ಹಾಕಿದ್ದಾರೆ. ಬಿಹಾರ ಚುನಾವಣೆ ಕುರಿತು ನಾನು ಶಾಸ್ತ್ರ, ಭವಿಷ್ಯ ಹೇಳಲ್ಲ. ಮಾಹಿತಿ
ಪ್ರಕಾರ ಲಾಲುಪ್ರಸಾದ ಯಾದವ ಅವರ ಘಟಬಂಧನ್ ಗೆಲ್ಲುತ್ತದೆ ಎಂದಿದೆ. ಮೋದಿ ಬಗ್ಗೆ ಜನರಲ್ಲಿ ವಿಶ್ವಾಸ ಕಡಿಮೆಯಾಗುತ್ತಿದೆ. ನಿತೀಶ ವಿರುದ್ಧ ಜನ ವಿರೋಧಿ ಅಲೆ ಇತ್ತು. ಮೂರು ಬಾರಿ ಸಿಎಂ ಆದರೂ ಏನೂ ಕೆಲಸ ಮಾಡಿಲ್ಲ. ನುಡಿದಂತೆ ನಡೆದುಕೊಂಡಿಲ್ಲ.
ಇದನ್ನೂ ಓದಿ:ನನ್ನ ಪುತ್ರ ದರ್ಶನ್ ಒಳ್ಳೆಯ ಸ್ವಭಾವದ ಹುಡುಗ : ರುದ್ರಪ್ಪ ಲಮಾಣಿ
ಬಿಹಾರದ ಜನ ಬದಲಾವಣೆ ಬಯಸಿದ್ದಾರೆ ಎಂದರು. ಯಾವುದೇ ರಾಜ್ಯದ ಚುನಾವಣೆ ಇನ್ನೊಂದು ರಾಜ್ಯಕ್ಕೆ ದಿಕ್ಸೂಚಿ ಆಗಲ್ಲ. ಬಿಹಾರ ಚುನಾವಣೆ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಎನ್ನಲು ಆಗಲ್ಲ. ಮೋದಿ ಅಲೆ ಎಲ್ಲಿಯೂ ಇಲ್ಲ. ಶಿರಾ, ಆರ್‌ಆರ್ ನಗರದಲ್ಲಿ ಗೆಲ್ಲುವ ವಿಶ್ವಾಸವಿದೆ. ನಾನು ಹಳ್ಳಿ ಹಳ್ಳಿಗೆ ಹೋದಾಗ ಕಣ್ಣಾರೆ ನೋಡಿದ್ದೇನೆ. ಜನರ ಒಲುವು ಕಾಂಗ್ರೆಸ್ ಪರ ಇತ್ತು ಎಂದರು.
ವಿನಯ ಬಂಧನ ರಾಜಕೀಯ ಪ್ರೇರಿತ: ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನದ ಹಿಂದೆ ರಾಜಕೀಯವಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿನಯ ಕುಲಕರ್ಣಿ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ತನಿಖೆ ಮುಗಿದು ಚಾರ್ಜ್‌ಶೀಟ್ ಹಾಕಿದ ಮೇಲೆ ಪ್ರಕರಣವನ್ನು ಪುನಃ ಓಪನ್ ಮಾಡಿ ಸಿಬಿಐಗೆ ಕೊಟ್ಟಿದ್ದಾರೆ. ವಿಪಕ್ಷದವರ ಬಾಯಿ ಮುಚ್ಚಿಸಿದರೆ ಇಷ್ಟ ಬಂದ ಹಾಗೆ ಆಟ ಆಡಬಹುದೆಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದರು.