Advertisement

ಹೊನ್ನಾಳಿಯಲ್ಲಿ ಸಿದ್ದರಾಮೇಶ್ವರ ಜಯಂತಿ ಮಹೋತ್ಸವ

02:56 PM Apr 12, 2017 | |

ಹೊನ್ನಾಳಿ: 2018 ಜನವರಿಯಲ್ಲಿ ನಡೆಯಲಿರುವ ಗುರುಸಿದ್ದರಾಮೇಶ್ವರ ಜಯಂತಿ ಮಹೋತ್ಸವವನ್ನು ಹೊನ್ನಾಳಿಯಲ್ಲಿ ನಡೆಸಲಾಗುವುದು ಎಂದು ನೊಳಂಬ ವೀರಶೈವ ಕೇಂದ್ರ ಸಂಘದ ಅಧ್ಯಕ್ಷ ಎಸ್‌.ಎನ್‌. ನಾಗರಾಜು ಹೇಳಿದರು. ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ನೊಳಂಬ ವೀರಶೈವ ಸಂಘದ ಪದಾಧಿಕಾರಿಗಳು ಮತ್ತು ಸಮಾಜದ ಹಿರಿಯ ಮುಖಂಡರುಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕಳೆದವರ್ಷ ಕಾರವಾರ ಜಿಲ್ಲೆ ಉಳವಿಯಲ್ಲಿ ನಡೆದ 844ನೇ ಮಹೋತ್ಸವದಲ್ಲಿ ಕೇಂದ್ರ ಸಂಘದ ಸಹಕಾರ್ಯದರ್ಶಿ ಮತ್ತು ನಿಮ್ಮ ತಾಲೂಕಿನವರೇ ಆದ ಜಿ.ರುದ್ರೇಗೌಡ ಮತ್ತು ತಾಲೂಕಿನ ನೊಳಂಬ ವೀರಶೈವ ಸಮಾಜದ ಮುಖಂಡರುಗಳು ಸೇರಿ ಮುಂದಿನ ಮಹೋತ್ಸವವನ್ನು ಹೊನ್ನಾಳಿಯಲ್ಲಿ ನಡೆಸಲು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಅವರ ಮನವಿಯನ್ನು ಪರಿಗಣಿಸಿ ಹೊನ್ನಾಳಿ ಪಟ್ಟಣದಲ್ಲಿ ಆಚರಿಸಲು ಒಪ್ಪಿಗೆ ಸೂಚಿಸಿದ್ದೇವು.

ಇಂದು ಅಧಿಕೃತವಾಗಿ ಘೋಷಿಸಲಾಗಿದೆ ಎಂದರು. ಕೇಂದ್ರ ಸಂಘದ ಉಪಾಧ್ಯಕ್ಷ ಎಸ್‌.ಆರ್‌. ಪಾಟೀಲ್‌ ಮಾತನಾಡಿ, ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಮಹೋತ್ಸವಕ್ಕೆ ಇನ್ನೂ 10 ತಿಂಗಳ ಮುಂಚೆ ಈ ಭಾಗದ ಸಮಾಜದ ಹಿರಿಯ ಮುಖಂಡರನ್ನು ಸೇರಿಸಿ, ಪೂರ್ವಭಾವಿ ಸಭೆ ಕರೆದು ಇಷ್ಟೊಂದು ಸಂಖ್ಯೆಯಲ್ಲಿ ಸಮಾಜದವರೊಂದಿಗೆ ಅಚ್ಚುಕಟ್ಟಾಗಿ ಸಭೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು. 

ಕೇಂದ್ರ ಸಂಘದ ಕಾರ್ಯದರ್ಶಿ ರಾಜಶೇಖರ್‌ ಮಾತನಾಡಿ, ಅಂದಿನ ಅರಸಿಕೆರೆ ಶಾಸಕ ಗಂಗಾಧರರವರ ನೇತೃತ್ವದಲ್ಲಿ ಕೇವಲ 100ರಿಂದ 150 ಸಮಾಜ ಬಾಂಧವರಿಂದ ಆರಂಭಗೊಂಡ ಮಹೋತ್ಸವ ಇಂದು ಲಕ್ಷಾಂತರ ಭಕ್ತರನ್ನು ಸೇರಿಸಿ ಆಚರಿಸಿಕೊಳ್ಳುತ್ತಿದೆ ಎಂದರು. 

ತಾಪಂ ಸದಸ್ಯ ಸಿ.ಆರ್‌.ಶಿವಾನಂದ್‌, ಎಪಿಎಂಸಿ ಸದಸ್ಯರಾದ ಮಾದೇನಹಳ್ಳಿ ಸೋಮಶೇಖರ್‌, ಕತ್ತಿಗೆ ಸುರೇಶ್‌, ಪಿಎಲ್‌ಡಿ ಬಾಂಕ್‌ ನಿರ್ದೇಶಕ ಚನ್ನವೀರಪ್ಪಗೌಡ, ಮುಖಂಡರಾದ ಶಾಂತರಾಜ ಪಾಟೀಲ್‌, ಮಾದೇನಹಳ್ಳಿ ನಾಗರಾಜು, ಹೊಸಕಟ್ಟೆ ಬಸವನಗೌಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ಶಿವಪ್ಪ ಹುಲಿಕೇರಿ, ಪ್ರಾಶಾಶಿ ಸಂಘದ ತಾಲೂಕು ಅಧ್ಯಕ್ಷ ಎಸ್‌.ಸಿದ್ದಪ್ಪ ಇತರರಿದ್ದರು. 

Advertisement

845ನೇ ಗುರು ಸಿದ್ದರಾಮಜಯಂತಿ ಮಹೋತ್ಸವದ ಸ್ವಾಗತ ಸಮಿತಿ: ಮಹಾಪೋಷಕರಾಗಿ ಬಿ.ಎಸ್‌. ಯಡಿಯೂರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಂಸದ ಜಿ.ಎಸ್‌. ಬಸವರಾಜು. ಪೋಷಕರಾಗಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಡಾ| ಡಿ.ಬಿ. ಗಂಗಪ್ಪ. ಗೌರವಾಧ್ಯಕ್ಷರಾಗಿ ಶಾಸಕ ಡಿ.ಜಿ. ಶಾಂತನಗೌಡ, ಅಧ್ಯಕ್ಷರಾಗಿ ಮಾದೇನಹಳ್ಳಿ ಜಿ.ರುದ್ರೇಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next