Advertisement

ಸಿದ್ಧರಾಮೇಶ್ವರ ದೇಗುಲ ಜೀರ್ಣೋದ್ಧಾರಕ್ಕೆ ಚಾಲನೆ

12:57 PM Jan 09, 2022 | Team Udayavani |

ತುಮಕೂರು: ನಗರಕ್ಕೆ ಸಮೀಪದ ಬೆಳಗುಂಬ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಗುರು ಸಿದ್ಧರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಗೋಪುರ ನಿರ್ಮಾಣ ಕಾರ್ಯಕ್ಕೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್‌ ಚಾಲನೆ ನೀಡಿದರು.

Advertisement

ಕೆಲವು ಕಾರಣಗಳಿಂದ ಹಲವು ದಿನಗಳಿಂದ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ನೆನೆಗುದಿಗೆಬಿದ್ದಿತ್ತು. ಇದನ್ನು ಮನಗಂಡ ಶಾಸಕ ಗೌರಿಶಂಕರ್‌ಮುತುವರ್ಜಿ ವಹಿಸಿ ಅಧಿಕಾರಿಗಳು, ಗ್ರಾಮಸ್ಥರುಮತ್ತು ಭಕ್ತರೊಂದಿಗೆ ಚರ್ಚೆ ನಡೆಸಿ ದೇವಸ್ಥಾನನಿರ್ಮಾಣ ಕಾರ್ಯಕ್ಕೆ ಇದ್ದ ಅಡ್ಡಿ ಸರಿಪಡಿಸಿದ್ದಾರೆ.

ಈ ವೇಳೆ ಡಿ.ಸಿ.ಗೌರಿಶಂಕರ್‌ ಮಾತನಾಡಿ,  ದೇವಸ್ಥಾನದ ಕೆಲಸ ಶೀಘ್ರ ಆರಂಭಿಸಬೇಕು. ದೇವಸ್ಥಾನ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು.ದೇವಸ್ಥಾನಗಳು ಒಂದು ಊರಿಗೆಕಳಶಪ್ರಾಯವಿದ್ದಂತೆ, ಶಾಂತಿ, ನೆಮ್ಮದಿಯ ತಾಣವೇ ದೇವಸ್ಥಾನ. ಇಂಥ ದೇವಸ್ಥಾನವನ್ನು ಎಲ್ಲರೂ ಒಟ್ಟಾಗಿ ಸೇರಿ ನಿರ್ಮಿಸೋಣ ಎಂದರು.

25 ಲಕ್ಷ ರೂ. ಮಂಜೂರು: ದೇವಸ್ಥಾನ ನಿರ್ಮಾಣಕ್ಕೆ ಸರ್ಕಾರದಿಂದ 25 ಲಕ್ಷ ರೂ. ಮಂಜೂರು ಆಗಿದೆ. ಜತೆಗೆ ನಾನು ವೈಯಕ್ತಿಕವಾಗಿ 10 ಲಕ್ಷ ರೂ. ನೀಡುತ್ತೇನೆ. ನನ್ನ ಸ್ನೇಹಿತರು ಸಹದೇವಸ್ಥಾನದ ವಿಷಯದಲ್ಲಿ ಸಹಾಯ ಮಾಡುತ್ತಾರೆ. ಅದು ಕಡಿಮೆಯಾದರೆ ನಾನೇ ಎಲ್ಲ ವೆಚ್ಚ ಭರಿಸುತ್ತೇನೆ ಎಂದರು.

ಅಭಿವೃದ್ಧಿ ವಿಚಾರದಲ್ಲಿ ನಾನು ಯಾವತ್ತೂ ಹಿಂದೆ ಬೀಳಲ್ಲ, ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದೇನೆ. ದೇವಸ್ಥಾನದ ರಥಬೀದಿಯಲ್ಲಿ ಡಾಂಬರೀಕರಣಕ್ಕೆ 18 ಲಕ್ಷ ರೂ. ಅನುದಾನಬಿಡುಗಡೆಯಾಗಿದ್ದು, ಸಾರ್ವಜನಿಕರ ಒತ್ತಾಯದ ಮೇರೆಗೆ ಎರಡು ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಿ ಡಾಂಬರೀಕರಣ ಬದಲಾಗಿ ಸಿಸಿ ರಸ್ತೆ ಮಾಡಿಸುವುದಾಗಿ ತಿಳಿಸಿದರು.

Advertisement

ಜಾತ್ರೆ ನಡೆಸಲು ಅನುಮತಿ ನೀಡಿ: ಮಕರ ಸಂಕ್ರಾಂತಿ ದಿನದಂದು ಪ್ರತಿವರ್ಷದಂತೆ ಈ ವರ್ಷವೂ ಜಾತ್ರೆ ನಡೆಸಲು ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಕೇಳಿದರು.

ಇದಕ್ಕೆ ಉತ್ತರಿಸಿದ ಶಾಸಕರು, ಸರ್ಕಾರದ ಆದೇಶದಂತೆ ನಾವು ಕೂಡ ಅನುಮತಿಪಡೆದುಕೊಳ್ಳ ಬೇಕಾಗುತ್ತದೆ. ಕೊರೊನಾಮೂರನೇ ಅಲೆ ಹೆಚ್ಚಾಗುತ್ತಿರುವುದರಿಂದ ನಾವು ಎಚ್ಚರಿಕೆ ವಹಿಸಬೇಕಾಗುತ್ತದೆ. ನಾನು ಈವಿಷಯವಾಗಿ ಜಿಲ್ಲಾಧಿಕಾರಿ ಬಳಿ ಮಾತ ನಾಡುತ್ತೇನೆ ಎಂದರು. ಗ್ರಾಮದ ಮುಖಂಡಸಿದ್ದರಾಮೇಗೌಡ, ವಿಜಯ್‌ ಕುಮಾರ್‌, ರಾಮಕೃಷ್ಣಪ್ಪ, ಸಿದ್ದರಾಮಣ್ಣ, ಮಲ್ಲಿಕಾರ್ಜುನ,ಅರ್ಚಕರಾದ ಶಾಂತಣ್ಣ, ತಾಪಂ ಮಾಜಿ ಅಧ್ಯಕ್ಷ ಗಂಗಾಂಜನೇಯ, ಕರೆ ರಂಗಪ್ಪ, ಬಸವರಾಜು, ಗಂಗಾಧರ್‌, ಜೆಡಿಎಸ್‌ ಮುಖಂಡ ಬೆಳಗುಂಬ ವೆಂಕಟೇಶ್‌ ಹಾಗೂ ಇತರರು ಇದ್ದರು.

ಶಾಸಕರ ಕಾರ್ಯ ಶ್ಲಾಘನೀಯ: ವೆಂಕಟೇಶ್‌:

ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್‌ ಅಭಿವೃದ್ಧಿ ಕಾರ್ಯದಲ್ಲಿ ಸದಾ ಮುಂದಿರುತ್ತಾರೆ. ಸಾಮಾಜಿಕ ಕಾರ್ಯಗಳ ಜತೆ ಧಾರ್ಮಿಕ ಕಾರ್ಯದಲ್ಲೂ ಶಾಸಕರು ಒಂದು ಕೈ ಮೇಲು. ಕ್ಷೇತ್ರದಲ್ಲಿ ಶಾಲೆಗಳಿಂದ ಹಿಡಿದು ದೇವಸ್ಥಾನಗಳ ಜೀರ್ಣೋ ದ್ಧಾರಕ್ಕಾಗಿ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ. ನಮ್ಮ ಬೆಳಗುಂಬ ಗ್ರಾಮದ ಶ್ರೀ ಗುರು ಸಿದ್ಧರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಕೆಲ ಕಾರಣಗಳಿಂದ

ಸ್ಥಗಿತಗೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದು ಗ್ರಾಮದಲ್ಲಿ ಎಲ್ಲ ಹಿರಿಯರು, ಮುಖಂಡರನ್ನು ಪಕ್ಷಾತೀತವಾಗಿ ಒಂದೆಡೆ ಸೇರಿಸಿ ಸಭೆ ನಡೆಸಿ ದೇವಸ್ಥಾನ ಅಭಿವೃದ್ಧಿ ಕಾರ್ಯ ನಡೆಯುವಂತೆ ಮಾಡಿದ್ದಾರೆ. ಶಾಸಕರ ಇಚ್ಛಾಶಕ್ತಿ ಮತ್ತು ಅಭಿವೃದ್ಧಿ ಬಗ್ಗೆ ಅವರಿಗೆ ಇರುವ ಕಾಳಜಿಗೆ ನಮ್ಮ ಗ್ರಾಮಸ್ಥರ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದು ಜೆಡಿಎಸ್‌ ಮುಖಂಡ ಬೆಳಗುಂಬ ವೆಂಕಟೇಶ್‌ ಹೇಳಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇರಾಜಕಾರಣ ಮಾಡುವುದಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಪಕ್ಷಭೇದ ಮರೆತುಎಲ್ಲರೂ ಸಹಕರಿಸಬೇಕು. ರಾಜಕಾರಣಬಂದಾಗ ರಾಜಕಾರಣ ಮಾಡೋಣ. ಅಭಿವೃದ್ಧಿಯಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡೋಣ. -ಡಿ.ಸಿ. ಗೌರಿಶಂಕರ್‌, ಗ್ರಾಮಾಂತರ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next