Advertisement

ಸಿದ್ದರಾಮೇಶ್ವರ ಜಯಂತಿ: ಪೂರ್ವಭಾವಿ ಸಭೆ

12:32 PM Jan 13, 2020 | Suhan S |

ಗಜೇಂದ್ರಗಡ: ಜ.14ರಂದು ಜರುಗುವ ಕಾಯಕಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಆಚರಣೆ ಕುರಿತು ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಸಮಾಜ ಮುಖಂಡರ ಸಮ್ಮುಖದಲ್ಲಿ ರವಿವಾರ ಪೂರ್ವಭಾವಿ ಸಭೆ ನಡೆಯಿತು.

Advertisement

ಈ ವೇಳೆ ರೋಣ ತಹಶೀಲ್ದಾರ್‌ ಜಿ.ಬಿ. ಜಕ್ಕನಗೌಡ ಮಾತನಾಡಿ, ಜಾತೀಯತೆಯಿಂದ ಕೂಡಿದ ಸಮಾಜವನ್ನು ಸಿದ್ದರಾಮೇಶ್ವರರು ತಮ್ಮ ವಚನಗಳ ಮೂಲಕಪರಿರ್ತನೆಗೊಳಿಸಿದ್ದಾರೆ. ಸಮಾಜ ಸುಧಾರಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಜಗತ್ತಿಗೆ ಸಾರಿದ ಮಹಾನ್‌ ಶಿವಯೋಗಿ ಸಿದ್ದರಾಮೇಶ್ವರರ ಸಂದೇಶ ಸಾರ್ವಕಾಲಿಕವಾಗಿದೆ. ಇಂತಹ ಮಹಾನ್‌ ಕಾಯಕ ಯೋಗಿಯ ಜಯಂತಿ ತಾಲೂಕಾಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಬೇಕಿದೆ. ಹೀಗಾಗಿ ಜ.14ರಂದು ಬೆಳಗ್ಗೆ ಕಾರ್ಯಾಲಯದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು ಎಂದರು.

ಭೋವಿ ಸಮಾಜ ಅಧ್ಯಕ್ಷ ಯಲ್ಲಪ್ಪ ಬಂಕದ ಮಾತನಾಡಿ, ಜ.14ರಂದು ಸಿದ್ದರಾಮೇಶ್ವರ ಜಯಂತಿಯನ್ನು ಸರ್ಕಾರಿ ಕಚೇರಿಗಳಲ್ಲಿ ಸಾಂಕೇತಿಕವಾಗಿ ಆಚರಿಸಲಾಗುವುದು. ಜ.15ರಂದು ರೋಣ ಮತ್ತು ಗಜೇಂದ್ರಗಡ ತಾಲೂಕು ವತಿಯಿಂದ ಪಟ್ಟಣದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ಕಳೆದೆರಡು ವರ್ಷಗಳಿಂದ ಆಚರಣೆಗೆ ಸರ್ಕಾರದಿಂದ ನೀಡಲಾಗುವ ಅನುದಾನ ಈವರೆಗೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಈ ಬಾರಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಉಪನೋಂದಣಾಧಿಕಾರಿ ವಿಶ್ವನಾಥ ಸುಬೇದಾರ, ಠಾಣೆ ಪಿಎಸ್‌ಐ ಗುರುಶಾಂತ್‌ ದಾಶ್ಯಾಳ, ಹೆಸ್ಕಾಂ ಅಧಿಕಾರಿ ಬಸವರಾಜ ಮಹಾಮನಿ, ಪುರಸಭೆಯ ಆರ್‌.ಎಸ್‌. ಬೋಯಿಟೆ, ಶಿರಸ್ತೆದಾರ ಐ.ಟಿ. ಜಂತ್ಲಿ, ಕಂದಾಯ ನಿರೀಕ್ಷಕ ವೀರಣ್ಣ ಅಡಗತ್ತಿ, ಗಣೇಶ ಕೊಡಕೇರಿ, ಜೆ.ಪಿ. ಜಯರಾಮ್‌, ಎಸ್‌. ಕೆ. ಗೌಡರ, ಕಳಕಪ್ಪ ಸ್ವಾಮಿ, ಬಸವರಾಜ ಬಂಕದ, ಮೂಕಪ್ಪ ನಿಡಗುಂದಿ, ಲಕ್ಷ್ಮಣ ಲಕ್ಕಲಕಟ್ಟಿ, ಎಫ್‌.ಎಸ್‌. ಕರಿದುರಗನವರ, ಗುರು ಕಲ್ಲೋಡ್ಡರ, ರಾಮಣ್ಣ ನಿಡಗುಂದಿ, ನೇಮಣ್ಣ ಉಳ್ಳಾಗಡ್ಡಿ, ಯಮನೂರಪ್ಪ ಲಕ್ಕಲಕಟ್ಟಿ, ಸಣ್ಣವೀರಪ್ಪ ಬಂಕದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next