ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಗೆಜ್ಜಗಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಲು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರಗೆ ಜೆಡಿಎಸ್ ಕಾರ್ಯಕರ್ತರು ಘೇರಾವ್ ಹಾಕಿದ್ದಾರೆ.
ಗ್ರಾಮಸ್ಥರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಕ್ಷೇತ್ರದ ಶಾಸಕರಿಲ್ಲದೆ ಸರ್ಕಾರಿ ಅನುದಾನದ ಕಾಮಗಾರಿಗೆ
ನೀವೇಕೆ ಗುದ್ದಲಿ ಪೂಜೆ ಮಾಡುತ್ತೀರೆಂದು ಜೆಡಿಎಸ್ ಬೆಂಬಲಿಗರು ಯತೀಂದ್ರ ಹಾಗೂ ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಹೀಗಾಗಿ ಯತೀಂದ್ರ ಸಿದ್ದರಾಮಯ್ಯ ಹಿಂದೆ ಸರಿದು ಸ್ಥಳೀಯ ಗ್ರಾಪಂ ಸದಸ್ಯರಿಂದಲೇ ಗುದ್ದಲಿ ಪೂಜೆ ಮಾಡಿಸಿದರು.
ಯತೀಂದ್ರ ಅವರನ್ನು ಅಡ್ಡಗಟ್ಟಿ ಮಾತಿನ ಚಕಮಕಿ ಮುಂದುವರಿಸಿದಾಗ ಪೊಲೀಸರು ಜಿಪಂ ಸದಸ್ಯೆ ರೂಪ ಅವರ ಪತಿ ಲೋಕೇಶ್ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಜೆಡಿಎಸ್ ಮುಖಂಡರು ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.