Advertisement

ನನ್ನ ಹೆಸರಲ್ಲಿ‌ ಬೇಡ, ರಾಜ್ಯದ ಜನರ ಹೆಸರಲ್ಲಿ ಪೂಜೆ ಮಾಡಿ ಎಂದ ಸಿದ್ದರಾಮಯ್ಯ

02:10 PM Feb 12, 2021 | Team Udayavani |

ಬಾಗಲಕೋಟೆ: “ರೀ ಅರ್ಚಕರೇ ನನ್ನ ಹೆಸರಲ್ಲಿ ಬೇಡ. ಈ ರಾಜ್ಯದ ಜನ ನೆಮ್ಮದಿಯಾಗಿರಬೇಕು. ಅವರಿಗೆ ಒಳ್ಳೆಯದಾಗಬೇಕು. ದೇವಿಗೆ ರಾಜ್ಯದ ಜನರ ಹೆಸರಿನಲ್ಲೇ ಪೂಜೆ ಮಾಡಿ….”

Advertisement

ಹೀಗೆ ಹೇಳಿದವರು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ.

ರಾಜ್ಯದ ಶಕ್ತಿ ಪೀಠಗಳಲ್ಲಿ ಒಂದಾದ ಉತ್ತರ ಕರ್ನಾಟಕದ ಖ್ಯಾತ ಬನಶಂಕರಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ದೇವಿಯ ದರ್ಶನ ಪಡೆದರು.

ಇದನ್ನೂ ಓದಿ:ಬಾದಾಮಿ: ಒಂದೇ ವೇದಿಕೆಯಲ್ಲಿ‌ ಸಿದ್ದರಾಮಯ್ಯ- ಶ್ರೀರಾಮುಲು

ಬಾದಾಮಿಯ 2ನೇ ದಿನದ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ ಬನಶಂಕರಿದೇವಿ ದೇವಸ್ಥಾನಕ್ಕೆ ತೆರಳಿ ಆಶಿರ್ವಾದ ಪಡೆದರು. ಈ ವೇಳೆ ಡಿಸಿಎಂ‌ ಗೋವಿಂದ ಕಾರಜೋಳ ಕೂಡ ಸಿದ್ದರಾಮಯ್ಯ ಅವರೊಂದಿಗೆ ದೇವಿಯ ದರ್ಶನ ಪಡೆದುಕೊಂಡರು.

Advertisement

ಈ ದೇಳೆ ದೇವಸ್ಥಾನದ ಅರ್ಚಕರು, “ಸಾಹೇಬ್ರೆ, ನಿಮ್ಮ ಹೆಸರಿನಲ್ಲಿ ಪೂಜೆ ಮಾಡಿದ್ದೇವೆ. ಪ್ರಸಾದ ಕೊಟ್ಟು ಕಳುಹಿಸುತ್ತೇವೆ” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,” ನನ್ನ ಹೆಸರಿನಲ್ಲಿ ಯಾಕೆ ಪೂಜೆ‌ ಮಾಡಿಸ್ತೀರಾ, ರಾಜ್ಯದ ಜನರ ಹೆಸರಿನಲ್ಲಿ ಪೂಜೆ‌ ಮಾಡಿಸಿ” ಎಂದು ಹೇಳಿದರು.

ಇದನ್ನೂ ಓದಿ:ಸಿದ್ದರಾಮಯ್ಯ ಕಾಲಿಗೆ ಬಿದ್ದ ಕಟಗೇರಿ ಪಿಡಿಒ ಆರತಿ ಕ್ಷತ್ರಿಯ

ಬಳಿಕ ಬನಶಂಕರಿ ದೇವಸ್ಥಾನ, ಪುಷ್ಕರಣಿ ಸುತ್ತಲಿನ ತಿರುವು ರಸ್ತೆ ಅಭಿವೃದ್ಧಿ, ಬೀದಿ ದೀಪ ಅಳವಡಿಕೆಯ 3.19 ಕೋಟಿ ವೆಚ್ಚದ ಕಾಮಗಾರಿಗೆ ಡಿಸಿಎಂ ಗೋವಿಂದ ಕಾರಜೋಳ‌ ಮತ್ತು ಸಿದ್ದರಾಮಯ್ಯ ಒಟ್ಟಾಗಿ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next