ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಮಾತುಕತೆ ವೇಳೆ ನಾಣಯ್ಯ ಅವರಿಗೆ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.
Advertisement
ಚರ್ಚೆ ನಡೆದಿಲ್ಲ: ಭೇಟಿ ನಂತರ ಮಾತನಾಡಿದ ಸಿದ್ದರಾಮಯ್ಯ, “ನಾನು, ನಾಣಯ್ಯ ಹಳೆ ಸ್ನೇಹಿತರು. ರಾಜಕಾರಣದಲ್ಲಿ ನಾಣಯ್ಯ ನನಗಿಂತ ಹಿರಿಯರು. ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಿದ್ದೆ. ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿಲ್ಲ ಎಂದರು. ಎಂ.ಸಿ.ನಾಣಯ್ಯ ಮಾತನಾಡಿ, “ನನ್ನ ಆರೋಗ್ಯ ವಿಚಾರಿಸಲು ಸಿದ್ದರಾಮಯ್ಯ ಬಂದಿದ್ದರು. ಅವರಿಗೆ ನಾನು ಶುಭ ಕೋರುವೆ. ನಾನು, ಸಿದ್ದರಾಮಯ್ಯ ಹಲವಾರುವರ್ಷಗಳ ಸ್ನೇಹಿತರು. ಸರ್ಕಾರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಹೀಗಾಗಿ, ಒಬ್ಬ ಗೆಳೆಯನಾಗಿ ಬಂದಿದ್ದರು. ಜೆಡಿಎಸ್ ನಾಯಕರ ವರ್ತನೆ ಬಗ್ಗೆ ಸ್ಥಳೀಯ ಕಾರ್ಯಕರ್ತರು, ಮುಖಂಡರಿಗೆ ಅಸಮಾಧಾನ ಆಗಿದೆ. ಅದು ಬಂಡಾಯವಲ್ಲ. ನಾನು ಅವರ ಜತೆ ಮಾತನಾಡುತ್ತೇನೆ’ ಎಂದರು.