ರಾಯಚೂರು: ಎನ್ಆರ್ ಬಿಸಿ 5 ಎ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಮುಂದಿನ ಬಾರಿ ಅಧಿಕಾರಕ್ಕೆ ಬಂದಲ್ಲಿ ಎಷ್ಟೇ ಖರ್ಚಾದರೂ ಯೋಜನೆ ಜಾರಿ ಮಾಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.
ಮಸ್ಕಿ ಕ್ಷೇತ್ರದ ಪಾಮನಕಲ್ಲೂರಿನಲ್ಲಿ ಎನ್ ಆರ್ ಬಿಸಿ 5ಎ ಹೋರಾಟ ಸಮಿತಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ನಮ್ಮ ಮೇಲೆ ವಿಶ್ವಾಸವಿಡಿ. ನಾನು ಕೊಟ್ಟ ಮಾತು ತಪ್ಪಿಲ್ಲ. ಆಕಾಶ ಕಳಚಿದರೂ ಯೋಜನೆ ಜಾರಿ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಡಿಯರ್ ದೀದಿ … ಮುಸ್ಲಿಮರು ಸಹ ನಿಮ್ಮಿಂದ ದೂರ ಸರಿದಿದ್ದಾರೆ : ಪ್ರಧಾನಿ ಮೋದಿ
ಪ್ರತಾಪಗೌಡ ಶಾಸಕನಾಗಿ ವಿಫಲನಾಗಿದ್ದಾನೆ. ಐದು ವರ್ಷದಲ್ಲಿ ಒಮ್ಮೆಯೂ ಯೋಜನೆ ಬಗ್ಗೆ ಚರ್ಚಿಸಿಲ್ಲ. ಅಂಥವರನ್ನು ಬಿಟ್ಟು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದು ಕರೆ ನೀಡಿದರು.
ಇದನ್ನೂ ಓದಿ:ಬಿಜೆಪಿಗೆ ಮಾರಾಟವಾದ ಪ್ರತಾಪಗೌಡ ಪಾಟೀಲರಿಗೆ ಮತದಾರರು ಪಾಠ ಕಲಿಸಲಿದ್ದಾರೆ: ಡಿ ಕೆ ಶಿವಕುಮಾರ್