Advertisement
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ದೇಶದ ಜಿಡಿಪಿ ಶೇ.9ರಷ್ಟಿತ್ತು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದಾಗಿ ನಿಂದ ಜಿಡಿಪಿ ಕ್ರಮೇಣ ಕ್ಷೀಣಿಸಿ ಶೇ.7.7ಕ್ಕೆ ಇಳಿದಿದೆ. ಆರ್ಥಿಕ ಬೆಳವಣಿಗೆ ನರಾಕಾತ್ಮಕವಾಗಿದೆ. ಅಲ್ಲದೆ ಪೆಟ್ರೋಲ್ ಬೆಲೆ 92 ರೂ. ಆಗಿದೆ. ಇದೆಲ್ಲವನ್ನೂ ಮುಚ್ಚಿ ಹಾಕಲು ಮೋದಿ ಸರ್ಕಾರ ಮುಂದಿನ 2021 22ನೇ ವರ್ಷಕ್ಕೆ ಜಿಡಿಪಿ ಶೇ.11ಕ್ಕೆ ಏರುತ್ತದೆ ಎಂದ ಸುಳ್ಳು ಹೇಳುತ್ತಿದ್ದಾರೆ. ಯಾವ ಅರ್ಥದಲ್ಲಿ ಈ ಮಾತು ಹೇಳುತ್ತಿದ್ದಾರೆ? ಜಿಡಿಪಿ ಅಂಕಿ ಸಂಖ್ಯೆಯಲ್ಲೂ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಇಡೀ ದೇಶದ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
Related Articles
Advertisement
ಬಿಜೆಪಿ ನೇತೃತ್ವದ ಸರ್ಕಾರಗಳಲ್ಲಿ ಅಭಿವೃದ್ಧಿಗೆ ದುಡ್ಡಿಲ್ಲ. ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ಕೊಡಬೇಕು. ರಫ್ತು-ಆಮದು ಹೆಚ್ಚಾಗಬೇಕು. ಕೈಗಾರಿಕಾ, ಕೃಷಿ ಉತ್ಪನ್ನ ಹೆಚ್ಚಾಗಬೇಕು. ಏನೂ ಮಾಡದಿದ್ದರೆ ಅಭಿವೃದ್ಧಿ ಹೇಗಾಗುತ್ತದೆ. ಇಲ್ಲಿಯವರೆಗೆ ಪ್ರಧಾನಿಗಳು ಮನ್ ಕಿ ಬಾತ್‌ನಲ್ಲಿ ಉತ್ತರ ಕೊಟ್ಟಿದ್ದಾರಾ? ಯಾಕೆ ಹೇಳಿಲ್ಲ? ಮನಮೋಹನ್ ಸಿಂಗ್‌ಕಾಲದಲ್ಲಿ ಪೆಟ್ರೋಲ್ 60 ರೂ, ಡೀಸೆಲ್ 44 ರೂ. ಇತ್ತು. ಈಗ ಏಕೆ ಹೆಚ್ಚಾಗಿದೆ?. ಮನಮೋಹನ್ ಸಿಂಗ್ ಕಾಲದಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 110 ಡಾಲರ್ ಇತ್ತು. ಈಗ 45-46 ಡಾಲರ್ ಇದೆ. ಆದರೂ, 110 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ 60 ರೂ. ಇತ್ತು. ಈಗ ಬ್ಯಾರಲ್ ಬೆಲೆ 45-36 ಡಾಲರ್ ಇದೆ. ಆದರೆ, ಪೆಟ್ರೋಲ್ ಬೆಲೆ 92 ರೂ. ಆಗಿದೆ. ಆದರೂ ಜನ ಸುಮ್ಮನಿದ್ದಾರಲ್ಲಾ. ದೇಶ ಹಾಳಾಗಿರುವುದು ಇದಕ್ಕೋಸ್ಕರವೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.