Advertisement

ಸಿದ್ದರಾಮಯ್ಯನವರು ಗೋಸುಂಬೆ ತರ ಆಡಬಾರದು, ನಾವು ಸ್ಪಷ್ಟವಿದ್ದೇವೆ: ಸಿ.ಟಿ ರವಿ ಆಕ್ರೋಶ

07:54 PM Dec 18, 2020 | Mithun PG |

ಚಿಕ್ಕಮಗಳೂರು: ಎರಡೂವರೇ ವರ್ಷದ ಬಳಿಕ ಸಿದ್ದರಾಮಯ್ಯ ಸೋಲಿಗೆ ಕಾರಣ ಹುಡುಕುತ್ತಿದ್ದಾರೆ. ಯಾರೂ ಕೂಡ ಉಗಿದಿರುವುದ್ದನ್ನ ಬಾಯಿಗೆ ಹಾಕಿಕೊಳ್ಳುವುದಿಲ್ಲ. ಸೋಲಿನ ಕಾರಣ ಗೊತ್ತಿತ್ತು, ಮತ್ತೇಕೆ ಜೆಡಿಎಸ್ ಜೊತೆ ಸರ್ಕಾರ ಮಾಡಿದಿರಿ. ಸಿದ್ದರಾಮಯ್ಯನವರು ಗೋಸುಂಬೆ ತರ ಆಡಬಾರದು ಎಂದು ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.

Advertisement

ನನ್ನ ಸೋಲಿಗೆ ನಮ್ಮವರೇ ಕಾರಣ ಎಂಬ ಸಿದ್ದು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,  ನಮಗೆ ಜನಾಭಿಪ್ರಾಯವಿಲ್ಲ, ವಿರೋಧ ಪಕ್ಷದಲ್ಲಿ ಕೂರುತ್ತೇವೆ ಎನ್ನಬೇಕಿತ್ತು. ಆದರೇ ಯಾಕೆ ಜೆಡಿಎಸ್ ಜೊತೆ ಸರ್ಕಾರ ಮಾಡಿದ್ದರು ? ಉಗಿದದ್ದನ್ನ ಯಾರಾದರೂ ಬಾಯಿಗೆ ಹಾಕಿಕೊಳ್ಳುತ್ತಾರೆಯೇ ? ತನ್ನನ್ನ ಸೋಲಿಸಿದವರ ಜೊತೆನೇ ಸರ್ಕಾರ ಮಾಡುತ್ತಾರಾ  ? ಎಂದು ಪ್ರಶ್ನಿಸಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದೇ  ಒಟ್ಟಿಗೆ ಆಗಿದ್ದರು. ಇದೀಗ ಯಾವ ಮುಖ ಇಟ್ಟುಕೊಂಡು ಸತ್ಯವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರದ್ದು ನೈತಿಕ ರಾಜಕಾರಣಾನ ? ಈಗ ಕೈಗೆಟಕದ  ದ್ರಾಕ್ಷಿ ಹುಳಿ ಎಂದು ನರಿ ಕಥೆ ಹೇಳಿದರೇ ಯಾರು ಕೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರು ಅವರ ಸೋಲಿಗೆ ಕಾರಣ ಹುಡುಕಿದ್ದಾರೆ. ಆದರೇ ಅವರ ಸರ್ಕಾರ ಅಧಿಕಾರ ಕಳೆದುಕೊಂಡಿದ್ದಕ್ಕೆ ಕಾರಣ ಹುಡುಕಬೇಕಿತ್ತು. ದುರಹಂಕಾರ, ಭ್ರಷ್ಟಾಚಾರ, ಕೆಟ್ಟ ಆಡಳಿತದಿಂದ ಸೋತಿದ್ದಾರೆ. ನಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಒಂದು ವೇಳೆ ಬಿಜೆಪಿ-ಜೆಡಿಎಸ್ ಬಾದಾಮಿಯಲ್ಲೂ ಒಳ ಒಪ್ಪಂದ ಮಾಡಿಕೊಂಡಿದ್ದರೇ, ನೀವು (ಸಿದ್ದರಾಮಯಯ್ಯ) ಬಾದಾಮಿ ಕ್ಷೇತ್ರದಲ್ಲೂ ಸೋಲಬೇಕಿತ್ತು. ಅಲ್ಲಿ ಗೆದ್ದಿದ್ದು ಕೇವಲ ಸಾವಿರ ಚಿಲ್ಲರೆ ವೋಟಿನಲ್ಲಿ. ಅದು ಮುಖ್ಯಮಂತ್ರಿ ಆದವರಿಗೆ ಗೌರವ ತರುವ ಗೆಲುವೇ ಅಲ್ಲ.

ಸಿದ್ದರಾಮಯ್ಯ ಈಗ ಏಕೆ ತಾಜ್ ವೆಸ್ಟ್ ಎಂಡ್ ಕಥೆ ತೆಗೆಯುತ್ತಿದ್ದಾರೆ. ವೆಸ್ಟ್ ಎಂಡ್ ಅಡ್ರೆಸ್ ಗೊತ್ತಾದ ಮೇಲೆಯೇ  ಲೋಕಸಭೆ ಚುನಾವಣೆ ಒಟ್ಟಿಗೆ ಮಾಡಿರುವುದು.  ಅಧಿಕಾರಿ ಹಂಚಿಕೊಂಡು ತನ್ನವರ ಮಂತ್ರಿ ಮಾಡುವಾಗ ವೆಸ್ಟ್ ಎಂಡ್ ಅಡ್ರೆಸ್ ಗೊತ್ತಿರಲಿಲ್ಲವೇ ?

Advertisement

ನಿಮ್ಮ ಹಳೇ ಮಾತಿಗೂ ಈಗಿನ ಮಾತಿಗೂ ವ್ಯತ್ಯಾಸವೇಕೆ, ಅರುಳು-ಮರುಳಾ…? ಘಳಿಗೆಗೊಮ್ಮೆ ಬಣ್ಣ ಬದಲಾಯಿಸಿದರೆ ಗೋಸುಂಬೆ ಅಂತಾರೆ.  ಸಿದ್ದರಾಮಯ್ಯನವರು ಗೋಸುಂಬೆ ತರ ಆಡಬಾರದು. ನಾವು ಸ್ಪಷ್ಟವಿದ್ದೇವೆ, ಎಂದಿಗೂ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಕಿಡಿಕಾರಿದರು.

ಅವತ್ತು ಜೆಡಿಎಸ್ ಜೊತೆ ನಿಂತು ಬೆಂಬಲ ನೀಡಿದವರು ಯಾರು. ನಾನು ದಳ-ಕಾಂಗ್ರೆಸ್ ವಕ್ತಾರನಲ್ಲ, ನಾನು ನಮ್ಮ ಪಕ್ಷದ ವಕ್ತಾರ. ನಾನು ದಳ-ಕಾಂಗ್ರೆಸ್, ಸಿದ್ದರಾಮಯ್ಯ-ಕುಮಾರಸ್ವಾಮಿ ಯಾರನ್ನೂ ಸಮರ್ಥಿಸಿಲ್ಲ ನಾವು ವಿಚಾರದ ಆಧಾರ, ಕಾರ್ಯಕರ್ತರಿಂದ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದೇವೆ ಎಂದು ಸಿ.ಟಿ ರವಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next