Advertisement

ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವುದು ಬೇಡ: ಸಿದ್ದರಾಮಯ್ಯ ಆಕ್ರೋಶ

03:19 PM Nov 26, 2020 | Mithun PG |

ಬೆಂಗಳೂರು: ಬಿಜೆಪಿಯಲ್ಲಿ ಎಲ್ಲರೂ ಒಂದಾಗಿದ್ದಾರೆಯೇ ? ಹಾಗಿದ್ದಲ್ಲಿ ಎರಡೆರೆಡು ಕಡೆ ಸಭೆ ನಡೆಸುವ ಅನಿವಾರ್ಯತೆ ಏನಿತ್ತು ? ಇದನ್ನು ಬಹಳ ಗಟ್ಟಿಯಾದ ‌ಮಡಿಕೆ ಅನ್ನಬೇಕಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Advertisement

ಕಾಂಗ್ರೆಸ್ ಒಡೆದ ಮನೆ ಎಂದು ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಒಂದು ಕಡೆ ಜಾರಕಿಹೊಳಿ ಮೀಟಿಂಗ್ ನಡೆಸಿದರೇ, ಮತ್ತೊಂದೆಡೆ ರೇಣುಕಾಚಾರ್ಯ ಸಭೆ ಸೇರಿದ್ದಾರೆ. ಇದು ಯಾರ ಮನೆ ಒಡೆದಿದೆ ಎಂಬುದನ್ನು ಸೂಚಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮಾಹಿತಿ ‌ಮೇಲೆ ‌ ಸಿಎಂ ಬದಲಾಗುತ್ತಾರೆ ಎಂದಿದ್ದೆ. ಆದರೀಗ ಅವರೇ ಉಳಿದುಕೊಳ್ಳುತ್ತಾರೆ ಎನ್ನುತ್ತಿದ್ದಾರೆ. ಆದರೇ ಯಾವುದೇ ಕೆಲಸ ಕೂಡ ‌ಮಾಡುತ್ತಿಲ್ಲ. ಕೆಲಸ ‌ಮಾಡುವವರು ಸಿಎಂ ಆಗಲಿ ಎಂದರು.

ಇದನ್ನೂ ಓದಿ: ಚಿಕ್ಕಮಗಳೂರು : ಬಾಬಬುಡನ್ ಗಿರಿಯಲ್ಲಿ ದತ್ತಪಾದುಕೆ ದರ್ಶನ ಪಡೆದ ಮಾಲಾಧಾರಿಗಳು

ಜಾತಿ ಗಣತಿ ತಾರ್ಕಿಕ ಅಂತ್ಯ ವಿಚಾರವಾಗಿ ಮಾತನಾಡಿ,  ಜಯಪ್ರಕಾಶ್ ಕೇವಲ ರಿಪೋರ್ಟ್ ಕೊಡುತ್ತಾರೆ. ಆದರೆ ಸರ್ಕಾರ ಅದನ್ನ ಸ್ವೀಕರಿಸುವ ಕೆಲಸ ಮಾಡುತ್ತಿಲ್ಲ. ವರದಿ ಏನಿದೆ ಎಂಬುದು ನನಗೂ ತಿಳಿದಿಲ್ಲ.

Advertisement

ಸ್ವಾತಂತ್ರ್ಯ ಬಂದು 74 ವರ್ಷ ಆಯಿತು. ಯಾರ್ಯಾರು ಎಷ್ಟಿದ್ದಾರೆ ಎಂಬುದು ನೋಡಬೇಕಲ್ಲವೇ ?  ಅದಕ್ಕಾಗಿ  160 ಕೋಟಿ ಖರ್ಚು ಮಾಡಿದ್ದೇವೆ. ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವುದು ಬೇಡ. ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎನ್ನುವುದು ಬಿಜೆಪಿ ನೀತಿ. ಜಾತಿ ಗಣತಿ ಸರ್ಕಾರ ಒಮ್ಮೆ ಪರಿಶಿಲನೆ ಮಾಡಲಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಉಪಚುನಾವಣೆಗೆ ಸ್ಪರ್ಧಿಸಲು ವೈಯಕ್ತಿಕವಾಗಿ ನನಗೆ ಆಸಕ್ತಿ ಇಲ್ಲ : ಸತೀಶ್ ಜಾರಕಿಹೊಳಿ

Advertisement

Udayavani is now on Telegram. Click here to join our channel and stay updated with the latest news.

Next