Advertisement

ಸಿದ್ದರಾಮಯ್ಯ ವಿಶ್ವಾಸದ್ರೋಹಿ: ಬಿಎಸ್‌ವೈ

12:06 PM Jun 03, 2017 | Team Udayavani |

ಬೀದರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದ ಸರ್ಕಾರವಲ್ಲ. ರಾಜ್ಯದ ಜನರ ವಿಶ್ವಾಸಕ್ಕೆ ದ್ರೋಹ ಬಗೆದ, ತಲೆ ತಿರುಕ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದಲ್ಲಿ ಬಿಜೆಪಿ ಜನಸಂಪರ್ಕ ಅಭಿಯಾನ ನಿಮಿತ್ತ ನಡೆದ “ಬಿಜೆಪಿ ನಡಿಗೆ ಶೋಷಿತರ ಕಡೆಗೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಏಳ್ಗೆಗಾಗಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳನ್ನು ಕೈ ಬಿಟ್ಟು ಚೆಲ್ಲಾಟ ಆಡುತ್ತಿದೆ. ಈ ಸರ್ಕಾರದ ಕಣ್ಣು ತೆರೆಸುವ ಉದ್ದೇಶದಿಂದಲೇ ರಾಜ್ಯದೆಲ್ಲೆಡೆ ಅಭಿಯಾನ ನಡೆಸಲಾಗುತ್ತಿದೆ ಎಂದರು.

ದಲಿತರ ಓಣಿಗಳಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದು, ಚರಂಡಿಗಳು ಹೊಲಸಿನಿಂದ ತುಂಬಿ ಹರಿಯುತ್ತಿವೆ. ಇಲ್ಲಿ ಜನ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ. ಸದೃಢ ಆರೋಗ್ಯಕ್ಕೆ ಸ್ವತ್ಛತೆಯ ಕಡೆ ಗಮನ ಹರಿಸಬೇಕೆಂಬ ಪ್ರಧಾನ ಮಂತ್ರಿಗಳ ಮನವಿಗೆ ಅಧಿ ಕಾರಿಗಳು ಸ್ಪಂದಿಸುತ್ತಿಲ್ಲ. ದಲಿತರ ಸಮಸ್ಯೆಗೆ ಸ್ಪಂದಿಸದಿದ್ದರೆ ಗತಿ ಏನು ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ದೇಶಕ್ಕೆ ಸ್ವಾತಂತ್ರÂ ಸಿಕ್ಕು 70 ವರ್ಷಗಳು ಕಳೆದಿದ್ದು, ಅದರಲ್ಲಿ 57 ವರ್ಷ ಕಾಂಗ್ರೆಸ್‌ ಆಡಳಿತ ನಡೆಸಿದೆ. ದೇಶ ಆಳಲು ಕಾಂಗ್ರೆಸ್‌ಗೆ ಬೆನ್ನೆಲುಬಾಗಿ ನಿಂತದ್ದು ದಲಿತರು. ಆದರೆ, ದೀನ-ದಲಿತರ ಅಭಿವೃದ್ಧಿ ಆಗಲಿಲ್ಲ. ಅವರು ಉದ್ಯೋಗಸ್ಥರೂ ಆಗಲಿಲ್ಲ. ದೇಶದಲ್ಲಿ ಅಂದು ವಾಜಪೇಯಿ ಮತ್ತು ಇಂದಿನ ಮೋದಿ ಸರ್ಕಾರ ದೀನ ದಲಿತರ ಶ್ರೇಯೋಭಿವದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿ ಸಾಮಾಜಿಕ ನ್ಯಾಯಕ್ಕಾಗಿ ದುಡಿದಿದ್ದಾರೆ ಎಂದು ಹೇಳಿದರು.

ನನ್ನ ಬಗ್ಗೆಸಿನಿಮಾ ಮಾಡುವ ಅವಶ್ಯಕತೆ ಇಲ್ಲ
ಕಲಬುರಗಿ:
ನನ್ನ ಬಗ್ಗೆ ಸಿನಿಮಾ ಮಾಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ನನ್ನ ಬಗ್ಗೆ ಸಿನಿಮಾ ಮಾಡುವ ಬಗ್ಗೆ ಅನೇಕರು ಒತ್ತಾಯಿಸಿದ್ದಾರೆ. ಅವರಿಗೆಲ್ಲ ನಾನು ಒಪ್ಪಿಗೆ ನೀಡಿಲ್ಲ. ತಮ್ಮ ಬಗ್ಗೆ ಸಿನಿಮಾ ಮಾಡುವ ಅವಶ್ಯಕತೆ ಇಲ್ಲ. ಈಗೇನಿದ್ದರೂ ಚುನಾವಣೆ ಮಾತ್ರ ತಮ್ಮೆದುರಿಗಿದ್ದು ಅದರತ್ತ ಗಮನ ಹರಿಸೋಣ
ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

Advertisement

ಹೋರಾಟ ಹತ್ತಿಕ್ಕುವ ಸರ್ಕಾರ: ರಾಜ್ಯ ಸರ್ಕಾರ ಜನಪರ ಹೋರಾಟಗಳನ್ನು ಹತ್ತಿಕ್ಕುತ್ತಿದೆ. ಗುರುವಾರ ಕೋಲಾರ ಜಿಲ್ಲೆ ಜನರು ಕುಡಿವ ನೀರಿನ ಹಕ್ಕಿಗಾಗಿ ಹೋರಾಡಲು ಬೆಂಗಳೂರಿಗೆ ಹೊರಟಿದ್ದರು. ಅಲ್ಲಿಗೆ ಬಾರದಂತೆ ತಡೆದಿರುವುದೇ ಇದಕ್ಕೆ ನಿದರ್ಶನ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next