Advertisement
ವರುಣ ವಿಧಾನಸಭಾ ಕ್ಷೇತ್ರದ ಸುತ್ತೂರಿನಲ್ಲಿ ನಡೆದ ಬೃಹತ್ ಕೃತಜ್ಞತಾ ಸಮರ್ಪಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
Related Articles
Advertisement
2024 ರಲ್ಲೂ ಗೆಲ್ತೀವಿ-ಬೆಲೆ ಇಳಿಸ್ತೀವಿ: “ಗಗನಕ್ಕೆ ಏರಿರುವ ರಸಗೊಬ್ಬರ ಬೆಲೆಯನ್ನು ಕಡಿಮೆ ಮಾಡಿ” ಎಂದು ಸಭೆಯಲ್ಲಿದ್ದ ರೈತರು ಕೂಗಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, “ರಸಗೊಬ್ಬರ ಬೆಲೆ ಏರಿಸಿರುವುದು ಪ್ರಧಾನಿ ಮೋದಿ ಸರ್ಕಾರ. ಬೆಲೆ ಇಳಿಸಬೇಕಾಗಿರುವುದೂ ಮೋದಿ ಸರ್ಕಾರವೇ. ಆದರೆ ಅವರು ಬೆಲೆ ಇಳಿಸಲ್ಲ. ನಾವು 2024 ರ ಲೋಕಸಭಾ ಚುನಾವಣೆಯಲ್ಲೂ ಗೆಲ್ಲುತ್ತೇವೆ. ಕೇಂದ್ರದಲ್ಲೂ ಅಧಿಕಾರಕ್ಕೆ ಬರ್ತೀವಿ. ಆಗ ಪೆಟ್ರೋಲ್, ಡೀಸೆಲ್, ಅಡಿಗೆ ಅನಿಲ್, ರಸಗೊಬ್ಬರ ಬೆಲೆಗಳನ್ನು ಇಳಿಸುತ್ತೇವೆ ಎಂದರು. ನೆರೆದಿದ್ದ ಜನ, ನೀವು ಪ್ರಧಾನಿ ಆಗಬೇಕು ಎಂದು ಮುಗಿಲು ಮುಟ್ಟುವಂತೆ ಕೂಗಿದರು.
ಚರ್ಚೆಗೆ ತಲೆ ಕೆಡಿಸಿಕೊಳ್ಳಬೇಡಿ, ಅರ್ಜಿ ಹಾಕಿ: ಬಡವರ-ಮಧ್ಯಮ ವರ್ಗದವರ ಸಂಕಷ್ಟ ಕಡಿಮೆ ಮಾಡಲು ನಾವು ಜಾರಿಗೆ ತಂದ ಯೋಜನೆಗಳನ್ನು, “ಅವರಿಗಾ-ಇವರಿಗಾ” ಎನ್ನುವ ಗೊಂದಲ ಸೃಷ್ಡಿಸುತ್ತಾರೆ. ನೀವು ಗೊಂದಲಕ್ಕೆ ಒಳಗಾಗಬೇಡಿ. ಯೋಜನೆಗಳ ಅನುಕೂಲ ಪಡೆಯಿರಿ ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕ ಯತೀಂದ್ರ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಮಾಜಿ ಮಂತ್ರಿಗಳಾದ ಪುಟ್ಟರಂಗಶೆಟ್ಟಿ, ಶಾಸಕರಾದ ಕೃಷ್ಣಮೂರ್ತಿ, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ವಿಧಾನ ಪರಿಷತ್ ಸದಸ್ಯರಾದ ತಿಮ್ಮಯ್ಯ, ಮಾಜಿ ಲೋಕಸಭಾ ಸದಸ್ಯರಾದ ಶಿವಣ್ಣ, ಶಾಸಕರುಗಳಾದ ಗುಂಡ್ಲುಪೇಟೆ ಗಣೇಶ್ ಪ್ರಸಾದ್, ಅನಿಲ್ ಚಿಕ್ಕಮಾದು, ರವಿ ಶಂಕರ್, ಹರೀಶ್ ಗೌಡ, ಪರಿಷತ್ ಸದಸ್ಯ ನಾಗರಾಜ್ ಯಾದವ್ ಸೇರಿದಂತೆ ಸಾಕಷ್ಟು ಮುಖಂಡರು ಉಪಸ್ಥಿತರಿದ್ದರು.