ಕೋಲಾರ: “ವಿಧಾನಸಭೆಯಲ್ಲಿ ಜನರ ಪರ ಧ್ವನಿಯೆತ್ತಲು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನನಗಿಂತಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ಸಮರ್ಥರು’ ಎಂದು ಮಾಜಿ ಸ್ವೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ. ತಾಲೂಕಿನ ಸುಗಟೂರು ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿ, “ಪ್ರತಿಪಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡುವ ಬಗ್ಗೆ ಯಾವ ಚರ್ಚೆಯೂ ನಡೆದಿಲ್ಲ. ಎಲ್ಲವೂ ಊಹಾಪೋಹ ಅಷ್ಟೇ. ಮೇಲ್ಮಟ್ಟದಲ್ಲಿ ಪಕ್ಷದ ನಾಯಕರು ಕುಳಿತುಕೊಂಡು ತೀರ್ಮಾನ ಮಾಡುತ್ತಾರೆ’ ಎಂದರು.
ಸಂವಿಧಾನಬದ್ಧವಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಅವರ ಅ ಧಿಕಾರವನ್ನು ಪ್ರಶ್ನಿಸಬಾರದು. ಅವರಿಗೆ ಏನು ಒಳ್ಳೆಯದು ಅನಿಸುತ್ತದೆಯೋ ಅದನ್ನು ಮಾಡಲಿ. ಮುಖ್ಯಮಂತ್ರಿ ಆಗಿರುವುದರಿಂದ ವರ್ಗಾವಣೆ ಮಾಡುವ ಅ ಧಿಕಾರ ಅವರಿಗಿದೆ. ಸರಿನೋ, ತಪ್ಪೋ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ನಾವ್ಯಾಕೆ ಆತುರ ಬಿದ್ದು ಮಾತನಾಡಬೇಕು ಎಂದು ಪ್ರಶ್ನಿಸಿದರು
ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ಅವರಿಗೆ ಏನು ಕಷ್ಟ ಇದೆಯೋ ನಮಗೇನು ಗೊತ್ತು. ಬಹುಶ: ನಾನೊಬ್ಬನೇ ರಾಜ್ಯವನ್ನು ನಿಭಾಯಿಸಬಲ್ಲೆ ಎಂಬ ನಂಬಿಕೆ ಇರಬಹುದು. ಮಂತ್ರಿಮಂಡಲ ರಚನೆಯೂ ಆಗದಿರಬಹುದು. ಇದೂ ಒಂದು ಹೊಸ ಪ್ರಯೋಗ ಆಗುತ್ತದೆ, ನೋಡೋಣ.
-ರಮೇಶ್ ಕುಮಾರ್, ಮಾಜಿ ಸ್ವೀಕರ್