ಕುಂದಾಪುರ: ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರೊಂದಿಗೆ ಕರಾವಳಿ ಜಿಲ್ಲೆಯ ಕ್ಷೇತ್ರಗಳ ಬಗ್ಗೆ ಮಾತನಾಡುತ್ತಾ, ಬೈಂದೂರಿನ ಫಲಿತಾಂಶವನ್ನು ಕುತೂಹಲದಿಂದ ಕೇಳಿದ್ದು ಗಮನಾರ್ಹ.
ದ.ಕ. ಜಿಲ್ಲೆಯಲ್ಲಿ ಕಳೆದ ಬಾರಿ 1 ಗೆದ್ದಿದ್ದ ನಾವು, ಈ ಬಾರಿ ಉಳ್ಳಾಲದೊಂದಿಗೆ ಬೆಳ್ತಂಗಡಿ, ಬಂಟ್ವಾಳ, ಪುತ್ತೂರಿನೊಂದಿಗೆ 3-4 ಸ್ಥಾನ ಗೆಲ್ಲುವ ನಿರೀಕ್ಷೆಯಿತ್ತು. ಉಡುಪಿಯಲ್ಲಿ ಬೈಂದೂರು ಸಹಿತ 2 ಸ್ಥಾನ ಗೆಲ್ಲಬಹುದು ಅಂದುಕೊಂಡಿದ್ದೇವು ಎಂದವರು ಮಾಧ್ಯಮವದರೊಂದಿಗೆ ತಿಳಿಸಿದ್ದು, ಈ ವೇಳೆ ಬೈಂದೂರಿನ ಫಲಿತಾಂಶ ಏನಾಯಿತು ಎನ್ನುವುದಾಗಿ ಕೇಳಿದ್ದು, ಬೈಂದೂರು ಸೋತಿದೆ ಎಂದಾಗ ಐದಕ್ಕೆ ಐದು ಹೋಯಿತಾ ಎಂದು ಖೇದ ವ್ಯಕ್ತಪಡಿಸಿದರು.