Advertisement

ಗಂಗಾವತಿ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಘೋಷಿಸಿಯೇ ಬಿಟ್ಟ ಸಿದ್ದರಾಮಯ್ಯ

07:42 PM Nov 20, 2022 | Team Udayavani |

ಗಂಗಾವತಿ :ಮುಂದಿನ 2023 ರ ವಿಧಾನಸಭೆಯ ಗಂಗಾವತಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯನ್ನು ಗೆಲ್ಲಿಸುವ ಮೂಲಕ ನನಗೆ ಬಲ ನೀಡಿ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. .

Advertisement

ಅವರು ಭಾನುವಾರ ವಳಬಳ್ಳಾರಿಯಲ್ಲಿ ಕಾಂಗ್ರೆಸ್‌ ಕಾರ್ತಕರ್ತ ಅರಸಿನಕೇರಿ ಹನುಮಂತಪ್ಪ ನಿವಾಸದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನೆರೆದ ಜನರಿಗೆ ಮನವಿ ಮಾಡಿದರು.

ಬಿಜೆಪಿಯವರ ಭ್ರಷ್ಟಾಚಾರಕ್ಕೆ ರಾಜ್ಯದ ಜನರು ರೋಸಿ ಹೋಗಿದ್ದು ಜೆಡಿಎಸ್- ಬಿಜೆಪಿಗೆ ನೆರವಾಗುತ್ತದೆ .ಆದ್ದರಿಂದ ಕಾಂಗ್ರೆಸ್‌ ಪಕ್ಷ ಜನರ ಪರವಾದ ಆಡಳಿತದ ನೀಡುವ ಪಕ್ಷವಾಗಿದ್ದು ಜನಸಾಮಾನ್ಯರು ಕೃಷಿ ಕೂಲಿಕಾರರಿಗೆ ನೆರವಾಗುತ್ತದೆ .ಮಾಜಿ ಮಂತ್ರಿ ಅನ್ಸಾರಿ ಅಭಿವೃದ್ಧಿ ಹರಿಕಾರನಾಗಿದ್ದು, ಜನಪರವಾದ ಆಡಳಿತ ನೀಡುವ ವ್ಯಕ್ತಿ. ಕೆಲವರು ಅನ್ಸಾರಿ ಬಗ್ಗೆ ಷಡ್ಯಂತ್ರ ನಡೆಸಿ ಸೋಲಿಸುವ ಕುತಂತ್ರ ನಡೆಸುವ ಸಂಭವವಿದ್ದು ಮತದಾರರು ಅನ್ಸಾರಿಯನ್ನು ಗೆಲ್ಲಿಸುವಂತೆ ಪದೇ ಪದೇ ಮನವಿ ಮಾಡಿದರು.

ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ,ಭೀಮಾನಾಯಕ್, ಇಕ್ಬಾಲ್ಅನ್ಸಾರಿ, ಶಾಮೀದ್ ಮನಿಯಾರ್ ಕಾಂಗ್ರೆಸ್‌ ಯುವ ಮುಖಂಡ ಅರಸಿನಕೇರಿ ಹನುಮಂತಪ್ಪ ಸೇರಿ ಅನೇಕರಿದ್ದರು.

2013 ರಲ್ಲಿ ಇಕ್ಬಾಲ್ ಅನ್ಸಾರಿ  ಜೆಡಿಎಸ್ ನಿಂದ ಗೆದ್ದು ಶಾಸಕರಾಗಿದ್ದರು. 2018 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅವರು ಬಿಜೆಪಿಯ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರ ವಿರುದ್ದ ಸೋಲು ಅನುಭವಿಸಿದ್ದರು. ಕಾಂಗ್ರೆಸ್ ಟಿಕೆಟ್ ಗಾಗಿ ಕೆಲ ಪ್ರಮುಖ ಮುಖಂಡರು ಅರ್ಜಿ ಸಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next