Advertisement

ಲೋಕಸಭೆಗೆ ಸ್ಪರ್ಧಿಸುವುದಿಲ್ಲ : ಸಿದ್ಧರಾಮಯ್ಯ ಸ್ಪಷ್ಟನೆ

09:54 AM Mar 14, 2019 | Team Udayavani |

ಬೆಂಗಳೂರು: ರಾಷ್ಟ್ರರಾಜಕಾರಣದಲ್ಲಿ ಇವತ್ತು ನರೇಂದ್ರ ಮೋದಿ ಅವರಿಗೆ ಪರ್ಯಾಯ ನಾಯಕರಲ್ಲಿ ಒಬ್ಬರೆಂದು ಗುರುತಿಸಿಕೊಳ್ಳುತ್ತಿರುವವರಲ್ಲಿ ಮಾಜೀ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೂ ಕೂಡ ಒಬ್ಬರು. ಸಿದ್ಧರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಪ್ರವೆಶಿಸುತ್ತಾರೆ ಎಂಬ ಗುಸುಗುಸು ಸುದ್ದಿ ಈ ಹಿಂದೆಯೂ ಹಲವು ಬಾರಿ ರಾಜಕೀಯ ಪಡಸಾಲೆಗಳಲ್ಲಿ ಹರಿದಾಡುತ್ತಿತ್ತು. ನರೇಂದ್ರ ಮೋದಿಯವರನ್ನು ಸಶಕ್ತವಾಗಿ ಎದುರಿಸಲು ಸಿದ್ಧರಾಮಯ್ಯನವರೇ ಸೂಕ್ತ ವ್ಯಕ್ತಿ ಎಂಬ ಮಾತೂ ಸಹ ಕಾಂಗ್ರೆಸ್‌ ವಲಯದಲ್ಲಿ ಕೇಳಿಬಂದಿತ್ತು.

Advertisement

ಇದೀಗ ಲೋಕಸಭಾ ಚುನಾವಣೆಯ ಕಾವು ದೇಶದಲ್ಲೆಡೆ ಏರುತ್ತಿರುವಂತೆ ಸಿದ್ಧರಾಮಯ್ಯನವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆ ಮತ್ತೆ ಮುನ್ನಲೆಗೆ ಬಂದಿದೆ. ಈ ಕುರಿತಾದ ಪ್ರಶ್ನೆಗಳಿಗೆ ಸಿದ್ಧರಾಮಯ್ಯನವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ರಾಷ್ಟ್ರರಾಜಕಾರಣಕ್ಕೆ ಪ್ರವೇಶಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನನ್ನ ಅಭಿಮಾನಿಗಳಿಗೆ ನಾನು ದೆಹಲಿ ರಾಜಕಾರಣಕ್ಕೆ ಹೋಗಬೇಕೆಂಬ ಆಸೆ ಇರಬಹುದು, ಆದರೆ ನನಗೆ ರಾಷ್ಟ್ರರಾಜಕಾರಣದ ಕುರಿತಾಗಿ ಯಾವುದೇ ಆಸಕ್ತಿ ಇಲ್ಲ. ‘ರಾಜ್ಯ ರಾಜಕಾರಣವೇ ಸಾಕಾಗಿ ಹೋಗಿದೆ, ರಾಷ್ಟ್ರರಾಜಕಾರಣ ನನಗೆ ಬೇಡ’ ಎಂದು ಅವರು ತಮ್ಮ ಎಂದಿನ ಶೈಲಿಯಲ್ಲೇ ಪತ್ರಕರ್ತರಿಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next